Advertisement
ಹೌದು, ಎಲ್ಲಾ ಅಂದುಕೊಂಡಂತೆ ಆದರೆ, ಈ ಚಿತ್ರಕ್ಕೆ “ಮಾಲ್ಗುಡಿ’ ಎಂಬ ಹೆಸರನ್ನು ಇಡಬೇಕೆಂದು ಶೇಖರ್ ಅಂದುಕೊಂಡಿದ್ದಾರೆ. ಈ ಕುರಿತು ಮಾತನಾಡುವ ಅವರು, “ಇಲ್ಲಿ ಮಾನವೀಯ ಮೌಲ್ಯಗಳಿವೆ. ಫಿಲಾಸಫಿಕಲ್ ಮಾತುಗಳೊಂದಿಗೆ ಒಂದು ಅರ್ಥಪೂರ್ಣ ಬದುಕಿನ ಚಿತ್ರವನ್ನು ಕಟ್ಟಿಕೊಡುವ ಪ್ರಯತ್ನ ಮಾಡುತ್ತಿದ್ದೇನೆ. ಚಿತ್ರದ ಕಲ್ಪನೆಯೇ ದೊಡ್ಡದಿದೆ. ಹಾಗಾಗಿ, ಒಂದು ಊರನ್ನೇ ಕ್ರಿಯೇಟ್ ಮಾಡಿ ಮಾಡುವ ತಯಾರಿ ನಡೆಯುತ್ತಿದೆ.
ಇದಕ್ಕೆ ಉತ್ತರಿಸುವ ನಿರ್ದೇಶಕ ಶೇಖರ್, “ಇದು ಬ್ರಿಟಿಷ್ ಕಾಲದ ಸಿನಿಮಾ. ಹಾಗಂತ, ಚಿತ್ರದಲ್ಲಿ ಸ್ವಾತಂತ್ರ್ಯ ಕುರಿತಾಗಲಿ, ಆ ಬಗೆಗಿನ ಹೋರಾಟವಾಗಲಿ ಇರುವುದಿಲ್ಲ. ಸ್ವಾತಂತ್ರ್ಯ ಸಂಗ್ರಾಮ ಕಾಲದಲ್ಲೂ ಜನರು ಬದುಕು ಸವೆಸುತ್ತಿದ್ದರು. ಗೆಳೆತನ ಹೊಂದಿದ್ದರು. ತಮ್ಮ ಅಕ್ಕಪಕ್ಕದವರನ್ನು ಅಕ್ಕರೆಯಿಂದ ನೋಡುತ್ತಿದ್ದರು. ಆ ವಿಷಯ ಇಟ್ಟುಕೊಂಡು ಸಿನಿಮಾ ಮಾಡಲು ಹೊರಟಿದ್ದೇನೆ.
Related Articles
Advertisement
“ಈ ಚಿತ್ರಕ್ಕಾಗಿ ಚೇತನ್ ಸಾಕಷ್ಟು ತಯಾರಿ ನಡೆಸುತ್ತಿದ್ದಾರೆ. ಆ ಕಾಲದ ಜನರು ತೆಳುವಿದ್ದರೂ, ಕಟ್ಟುಮಸ್ತಾಗಿದ್ದರು. ಹಾಗಾಗಿ ಚೇತನ್ ಏಯ್rಪ್ಯಾಕ್ ಮಾಡಕೊಳ್ಳುತ್ತಿದ್ದು, ದೇಹವನ್ನು ಹುರಿಗೊಳಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಫೈಟ್‌ಗಳಿದ್ದರೂ, ಈಗಿನಂತೆ ಆ್ಯಕ್ಷನ್ ಇರಲ್ಲ. ಆಗೆಲ್ಲಾ ಕಲರಿ ಫೈಟ್ ಬಳಕೆಯಲ್ಲಿತ್ತು. ಅದು ಚಿತ್ರದಲ್ಲಿ ಕಾಣಸಿಗಲಿದೆ. ಕಳೆದ ಹತ್ತು ತಿಂಗಳಿನಿಂದಲೂ ಚಿತ್ರದ ಸ್ಕ್ರಿಪ್ಟ್ ಕೆಲಸ ನಡೆಯುತ್ತಿದ್ದು, ಈಗ ಅದು ಮುಗಿಯೋ ಹಂತಕ್ಕೆ ಬಂದಿದೆ.
ಎಲ್ಲವೂ ಅಂದುಕೊಂಡಂತೆ ನಡೆದರೆ, ಅಕ್ಟೋಬರ್‌ನಿಂದ ಚಿತ್ರಕ್ಕೆ ಚಾಲನೆ ಸಿಗಲಿದೆ. ಚಂದನ್‌ಗೌಡ ಎಂಬುವವರು ಈ ಚಿತ್ರವನ್ನು ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಇದೊಂದು ಬಿಗ್‌ಬಜೆಟ್ ಸಿನಿಮಾ ಆಗಿದ್ದು, ನನ್ನ ಸಿನಿ ಕೆರಿಯರ್‌ನಲ್ಲೇ ಇದು, ಅತೀ ದೊಡ್ಡ ಸ್ಕೇಲ್‌ನಲ್ಲಿ ತಯಾರಾಗುತ್ತಿರುವ ಸಿನಿಮಾ ಎನ್ನುತ್ತಾರೆ ಅವರು.
ಈ ಚಿತ್ರವನ್ನು ನಿರ್ದೇಶಿಸುತ್ತಿರುವ ಜೊತೆಗೆ ಕಥೆ, ಚಿತ್ರಕಥೆ ಬರೆದಿದ್ದಾರೆ ಶೇಖರ್. “ರಾಗ’ ಚಿತ್ರಕ್ಕೆ ಮಾತುಗಳನ್ನು ಪೋಣಿಸಿದ್ದ ಸಚಿನ್ ಚಿತ್ರಕ್ಕೆ ಸಂಭಾಷಣೆ ಬರೆಯುತ್ತಿದ್ದಾರೆ. ಅವರ ಜತೆ ಕಾಮಿಡಿ ದೃಶ್ಯಗಳಿಗೆ ನಟರಾಜ್ ಹಾಗೂ ಪ್ರಶಾಂತ್‌ರಾಜಪ್ಪ ಕೂಡ ಸಂಭಾಷಣೆ ಬರೆಯುತ್ತಿದ್ದಾರೆ. ವೈದಿ ಕ್ಯಾಮೆರಾ ಹಿಡಿಯುತ್ತಿದ್ದಾರೆ. ಇನ್ನು ಅರ್ಜುನ್ ಜನ್ಯ ಈ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ.