Advertisement

ಎದೆನೋವೆಂದು ಆಸ್ಪತ್ರೆಗೆ ಹೋದ ವ್ಯಕ್ತಿಗೆ ಎಕ್ಸ್-ರೇ ವರದಿಯಲ್ಲಿ ಕಾದಿತ್ತು ಶಾಕ್‌…

04:05 PM Sep 24, 2022 | Team Udayavani |

ಅಮೆರಿಕ: ಉಸಿರಾಟದ ತೊಂದರೆ, ಎದೆನೋವಿನಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ಆಸ್ಪತ್ರೆಗೆ ತೆರಳಿದ ವೇಳೆ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ.

Advertisement

ಇದನ್ನೂ ಓದಿ: ಹಿಮಾಚಲ ಪ್ರದೇಶವನ್ನು ಬಿಜೆಪಿ ಅಭಿವೃದ್ಧಿ ಮಾಡುತ್ತದೆ ಎಂದು ಯುವಕರಿಗೆ ತಿಳಿದಿದೆ: ಪ್ರಧಾನಿ

ಅಚ್ಚರಿಯ ಸಂಗತಿಯೆಂದರೆ ಅಮೆರಿಕದ ವ್ಯಕ್ತಿಯೊಬ್ಬನ ಮೂಗುತಿ ಸುಮಾರು ಐದು ವರ್ಷಗಳ ಹಿಂದೆ  ಕಳೆದು ಹೋಗಿದ್ದು, ಇದೀಗ ಆತನ ಶ್ವಾಸಕೋಶದಲ್ಲಿ ಪತ್ತೆಯಾಗಿದೆ.

ಅಮೆರಿಕ ಮೂಲದ ಜಾಯ್ ಲಿಕಿನ್ಸ್ ಎಂಬವರಿಗೆ ರಾತ್ರಿ ವೇಳೆ ಉಸಿರಾಟದ ತೊಂದರೆ, ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ವೈದ್ಯರು ಪರೀಕ್ಷಿಸಿ ನ್ಯೂಮೋನಿಯಾ ಲಕ್ಷಣಗಳಿರಬಹುದು ಎಂದು ತಿಳಿಸಿದರು. ಆದರೆ ಎಕ್ಸ್‌-ರೇ ತೆಗೆದು ನೋಡಿದಾಗ ಶ್ವಾಸಕೋಶದಲ್ಲಿ 0.6 ಇಂಚಿನ ಮೂಗುತಿ ಇರುವುದು ಕಂಡುಬಂದಿದೆ.

ಮಲಗಿದ್ದ ವೇಳೆ ಮೂಗುತಿ ಕಳೆದು ಹೋಗಿದೆ  ಎಂದು ಭಾವಿಸಿದ್ದೆ. ಆದರೆ ಅದು ಇಷ್ಟು ವರ್ಷಗಳಿಂದ  ನನ್ನ ಶ್ವಾಸಕೋಶದೊಳಗೆ ಇದೆ ಎಂದು ತಿಳಿದಿರಲಿಲ್ಲ. ಉಸಿರಾಟದ ತೊಂದರೆ ಉಂಟಾಗಿದ್ದು, ಆಸ್ಪತ್ರೆಯಲ್ಲಿ ಎಕ್ಸ್‌-ರೇ ತೆಗೆಯುವ ವೇಳೆ ಪತ್ತೆಯಾಗಿದೆ ಎಂದು ಜಾಯ್‌ ತಿಳಿಸಿದ್ದಾರೆ.

Advertisement

ಮೂಗುತಿಯು 5 ವರ್ಷಗಳಿಂದ ಶ್ವಾಸಕೋಶದಲ್ಲಿ ಉಳಿದಿದ್ದರೂ, ಯಾವುದೇ ಹಾನಿ ಉಂಟುಮಾಡಿಲ್ಲ. ವೈದ್ಯರು ಶಸ್ತ್ರ ಚಿಕಿತ್ಸೆ ನಡೆಸಿ ಹೊರ ತೆಗೆದಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next