Advertisement

ಇಂದಿನಿಂದ 44ನೇ ಚೆಸ್‌ ಒಲಿಂಪಿಯಾಡ್‌: ಆತಿಥೇಯ ಭಾರತಕ್ಕೆ ಪ್ರತಿಷ್ಠೆಯ ಪಂದ್ಯಾವಳಿ

06:19 PM Jul 27, 2022 | Team Udayavani |

ಮಾಮಲ್ಲಪುರಂ (ತಮಿಳುನಾಡು): ಪ್ರತಿಷ್ಠಿತ ಚೆಸ್‌ ಒಲಿಂಪಿಯಾಡ್‌ ಸ್ಪರ್ಧೆ ಗುರುವಾರದಿಂದ ತಮಿಳುನಾಡಿನಲ್ಲಿ ಆರಂಭವಾಗಲಿದೆ.

Advertisement

ತಾಣ, ಚೆನ್ನೈನಿಂದ 58 ಕಿ.ಮೀ. ದೂರದ ಮಾಮಲ್ಲಪುರಂ. ಕಳೆದ ಕೆಲವು ವರ್ಷಗಳಿಂದ ಚದುರಂಗದಲ್ಲಿ ಗಮನಾರ್ಹ ಸಾಧನೆಯೊಂದಿಗೆ ಮಿಂಚುತ್ತಿರುವ ಭಾರತದ ಪಾಲಿಗೆ ಇದೊಂದು ಪ್ರತಿಷ್ಠೆಯ ಪಂದ್ಯಾವಳಿಯಾಗಿದೆ.

ಚೆಸ್‌ ಪವರ್‌ಹೌಸ್‌ ರಷ್ಯಾ ಮತ್ತು ಚೀನ ಗೈರಿನಿಂದಾಗಿ ಭಾರತಕ್ಕೆ ಇಲ್ಲಿ ಮೇಲುಗೈ ಸಾಧಿಸುವ ಉತ್ತಮ ಅವಕಾಶ ಇದೆ ಎಂಬುದೊಂದು ಲೆಕ್ಕಾಚಾರ. ಓಪನ್‌ ಮತ್ತು ವನಿತಾ ವಿಭಾಗಗಳಲ್ಲಿ ಭಾರತ ತಲಾ 3 ತಂಡಗಳನ್ನು ಕಣಕ್ಕಿಳಿಸಲಿದೆ. 5 ಬಾರಿಯ ವಿಶ್ವ ಚಾಂಪಿಯನ್‌ ವಿಶ್ವನಾಥನ್‌ ಆನಂದ್‌ ಮೆಂಟರ್‌ ಆಗಿರುವುದರಿಂದ ಭಾರತೀಯರಿಗೆ ಲಾಭವಾಗುವ ಸಾಧ್ಯತೆ ಹೆಚ್ಚು.

ಓಪನ್‌ ವಿಭಾಗದಲ್ಲಿ 188 ತಂಡಗಳು ಹಾಗೂ ವನಿತಾ ವಿಭಾಗದಲ್ಲಿ 162 ತಂಡಗಳು ಸ್ಪರ್ಧಿಸುತ್ತಿರುವುದು ಚೆಸ್‌ ಒಲಿಂಪಿಯಾಡ್‌ ಇತಿಹಾಸದಲ್ಲೇ ಒಂದು ದಾಖಲೆ. ಭಾರತ ಎ ತಂಡವಿಲ್ಲಿ ದ್ವಿತೀಯ ಶ್ರೇಯಾಂಕ ಹೊಂದಿದೆ. ಅಮೆರಿಕಕ್ಕೆ ಅಗ್ರ ಶ್ರೇಯಾಂಕ ಲಭಿಸಿದೆ. ದೊಡ್ಡ ಪದಕಕ್ಕಾಗಿ ಭಾರತ ತಂಡ ನಾರ್ವೆ ಮತ್ತು ಅಜರ್‌ಬೈಜಾನ್‌ ಜತೆಯೂ ಸೆಣೆಸಬೇಕಿದೆ.

ಪಿ.ಹರಿಕೃಷ್ಣ, ಅರ್ಜುನ್‌ ಇರಿಗೇಸಿ, ವಿದಿತ್‌ ಗುಜರಾತಿ, ಕೆ. ಶಶಿಕಿರಣ್‌, ಎಸ್‌.ಎಲ್‌.ನಾರಾಯಣ್‌ ಈ ವಿಭಾಗದಲ್ಲಿದ್ದಾರೆ.

Advertisement

ಭಾರತ “ಬಿ’ ತಂಡ ಪ್ರತಿಭಾನ್ವಿತ ಆಟಗಾರರನ್ನು ಹೊಂದಿದೆ. ಡಿ.ಗುಕೇಶ್‌, ಆರ್‌.ಪ್ರಜ್ಞಾನಂದ, ನಿಖೀಲ್‌ ಸರಿನ್‌, ರೌನಕ್‌ ಸಾಧ್ವನಿ, ಬಿ.ಅಧಿಬನ್‌ ಮೇಲೆ ಭಾರೀ ನಿರೀಕ್ಷೆ ಇಡಲಾಗಿದೆ ಎಂದು ಕೋಚ್‌ ರಮೇಶ್‌ ಹೇಳಿದ್ದಾರೆ.

ಭಾರತದ ಸಿ ತಂಡ ಅಗ್ರ ಶ್ರೇಯಾಂಕಿತರನ್ನು ಹಾಗೂ ಯುವ ಆಟಗಾರರನ್ನು ಹೊಂದಿದೆ. ಸೂರ್ಯಶೇಖರ್‌ ಗಂಗೂಲಿ ಇಲ್ಲಿನ ನೆಚ್ಚಿನ ಆಟಗಾರ. ಎಸ್‌.ಪಿ.ಸೇತುರಾಮನ್‌, ಅಭಿಜಿತ್‌ ಗುಪ್ತ, ಕಾರ್ತಿಕೇಯನ್‌ ಮುರಳಿ, ಅಭಿಮನ್ಯು ಪುರಾಣಿಕ್‌ ಉಳಿದ ಆಟಗಾರರು. ಆದರೆ ಶ್ರೇಯಾಂಕದಲ್ಲಿ ಸಿ ತಂಡ 17ರಷ್ಟು ಕೆಳ ಸ್ಥಾನದಲ್ಲಿದೆ.

ಅಮೆರಿಕವನ್ನು ಈ ಕೂಟದ ನೆಚ್ಚಿನ ತಂಡವೆಂದು ಬಣ್ಣಿಸಲಾಗುತ್ತಿದೆ. ಫ್ಯಾಬಿಯೊ ಕ್ಯಾರುವಾನ, ವೆಸ್ಲಿ ಸೋ, ಲೆವನ್‌ ಅರೋನಿಯನ್‌, ಸ್ಯಾಮ್‌ ಶಂಕ್‌ಲ್ಯಾಂಡ್‌, ಲೀನಿಯರ್‌ ಡೊಮಿನಿಗ್ವೆಝ್ ಅವರೆಲ್ಲ ಅಮೆರಿಕದ ಪ್ರಮುಖ ಸ್ಪರ್ಧಿಗಳು.

ವನಿತಾ ವಿಭಾಗ: ವನಿತೆಯರ ಎ ವಿಭಾಗಕ್ಕೆ ಅಗ್ರಶ್ರೇಯಾಂಕ ಲಭಿಸಿದೆ. ಕೊನೇರು ಹಂಪಿ, ಡಿ.ಹರಿಕಾ, ಆರ್‌.ವೈಶಾಲಿ, ತನಿಯಾ ಸಚೆªàವ್‌, ಭಕ್ತಿ ಕುಲಕರ್ಣಿ ಅವರೆಲ್ಲ ಇಲ್ಲಿನ ಪ್ರಮುಖ ಆಟಗಾರ್ತಿಯರು. ಬಿ ವಿಭಾಗದಲ್ಲಿ ವಂತಿಕಾ ಅಗರ್ವಾಲ್‌, ಸೌಮ್ಯಾ ಸ್ವಾಮಿನಾಥನ್‌, ಮೇರಿ ಆ್ಯನ್‌ ಗೋಮ್ಸ್‌, ಪದ್ಮಿನಿ ರಾವತ್‌, ದಿವ್ಯಾ ದೇಶ್‌ಮುಖ್‌; ಸಿ ವಿಭಾಗದಲ್ಲಿ ಇಶಾ ಕರ್ವಡೆ, ಸಾಹಿತಿ ವರ್ಷಿಣಿ, ಪ್ರತ್ಯೂಷಾ ಬೊಡ್ಡ, ಪಿ.ವಿ.ನಂದಿತಾ, ವಿಶ್ವಾ ವಸ್ನಾವಾಲ ಇದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next