Advertisement

ಚೆನ್ನಯ್ಯನ ಕೆರೆಗೆ ಬೇಕಿದೆ ಕಾಯಕಲ್ಪ

02:08 PM May 25, 2019 | Team Udayavani |

ಕೊಳ್ಳೇಗಾಲ: ನಗರದ ಹೃದಯ ಭಾಗದಲ್ಲಿರುವ ಕ್ರೈಸ್ತ ಸಮಾಜದ ಬಡಾವಣೆಯ ಮುಂದೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ರಸ್ತೆಯ ಬಳಿ ಇತಿಹಾಸ ಪ್ರಸಿದ್ಧ ಚೆನ್ನಯ್ಯನ ಕೆರೆಯೊಂದು ಪಾಳು ಬಿದಿದ್ದು, ಕೂಡಲೇ ಕೆರೆಯ ಸ್ಥಳವನ್ನು ಸಂಪೂರ್ಣ ಶುಚಿಗೊಳಿಸಿ ಪೌಂಟೇನ್‌ ಮಾದರಿಯ ಅಭಿವೃದ್ಧಿ ಗೊಳಿಸಿ ನಗರಕ್ಕೆ ಮೆರಗು ಬರುವಂತೆ ಮಾಡಬೇಕಾಗಿದೆ.

Advertisement

ಮರಡಿಗುಡ್ಡ ಅಂಥ ಹೆಸರು ಬಂದದ್ದು ಹೇಗೆ: ಮಹದೇಶ್ವರರು ದಕ್ಷಿಣ ಕಾಶಿಯಿಂದ ನೆಲೆಸಲು ತಾಲೂಕಿನ ಚಿಲಕವಾಡಿ ಶಂಭುಲಿಂಗೇಶ್ವರ ಬೆಟ್ಟಕ್ಕೆ ನಡೆದು ಬಂದರು. ನಂತರ ನೆಲಸಲು ಸ್ಥಳ ಸೂಕ್ತವಲ್ಲವೆಂದು ಅಲ್ಲಿಂದ ಪಾದಯಾತ್ರೆ ಬೆಳೆಸಿ ನಗರದ ಮರಡಿಗುಡ್ಡ ಬಂದು ಮಂಡಿಯನ್ನು ಊರಿದಕ್ಕಾಗಿ ಮರಡಿಗುಡ್ಡ ಎಂದು ನಾಮಕರ ಣವಾಗಿದೆ. ಇಲ್ಲಿಂದ ಪೂರ್ವಕ್ಕೆ ಕಟ್ಟೆ ಬಸವೇಶ್ವರಕ್ಕೆ ತೆರಳಿ ನಂತರ ಮಲೆ ಮಹದೇಶ್ವರ ಬೆಟ್ಟದಲ್ಲಿ ನೆಲಸಿದರೆಂದು ಇತಿಹಾಸದ ಗುಡ್ಡವೊಂದಿದೆ.

ಕೆರೆಯ ಇತಿಹಾಸ: ಮರಡಿ ಗುಡ್ಡದಲ್ಲಿ ಇತಿಹಾಸವುಳ್ಳ ಮಹದೇಶ್ವರ ಸ್ವಾಮಿಯ ದೇವಸ್ಥಾನ ಇದೆ. ದೇವಸ್ಥಾನದ ಅರ್ಚಕರು ಪ್ರತಿನಿತ್ಯ ದೇವರ ವಿಗ್ರಹ ಮತ್ತು ದೇವಸ್ಥಾನ ಶುಚಿಗೊಳಿಸಲು ಗುಡ್ಡದ ಕೆಳಗಿರುವ ಚೆನ್ನಯ್ಯನ ಕಟ್ಟೆಯಿಂದ ಕೆರೆ ನೀರನ್ನು ತೆಗೆದುಕೊಂಡು ಹೋಗಿ ಬಳಿಕ ಪೂಜೆ ಮಾಡುತ್ತಿದ್ದರು ಎಂದು ಇತಿಹಾಸದಲ್ಲಿ ಉಲ್ಲೇಖ.

ಕೆರೆ ಹೂಳೆತ್ತಬೇಕು: ಇತಿಹಾಸವುಳ್ಳ ಕೆರೆಯನ್ನು ಕೂಡ ಲೇ ಸಂಬಂಧಿಸಿದ ಅಧಿಕಾರಿಗಳು ಸಂಪೂರ್ಣ ಗಿಡಗಂಟಿಗಳನ್ನು ತೆರವು ಮಾಡಿ ನಂತರ ಕೆರೆಯ ಹೂಳೆತ್ತಿ ಅಭಿವೃದ್ಧಿಪಡಿಸಬೇಕು. ಕೆರೆಯ ಸುತ್ತ ನಗರದ ನಿವಾಸಿಗಳು ಮುಂಜಾನೆ ಮತ್ತು ಸಂಜೆ ವಾಯವಿಹಾ ರಕ್ಕಾಗಿ ಬಂದು ಹೋಗುವಂತೆ ನಿರ್ಮಾಣವಾದ ಪಕ್ಷದಲ್ಲಿ ವಯಸ್ಸಾದವರು ಸ್ವಲ್ಪ ಸಮಯ ಇಲ್ಲಿ ಆಸನಗಳ ಮೇಲೆ ಕುಳಿತು ವಿಶ್ರಾಂತಿ ಪಡೆದು ಹೋಗುವ ರೀತಿಯಲ್ಲಿ ಅಭಿವೃದ್ಧಿ ಆಗಬೇಕು.

ನೀರಿನ ಚಿಲುಮೆ: ರಾಷ್ಟ್ರೀಯ ಹೆದ್ದಾರಿ 209 ನಾಲ್ಕು ಪಥದ ಕಾಂಕ್ರೀಟ್ ರಸ್ತೆ ಮತ್ತು ರಸ್ತೆಯ ಎಡಭಾಗಕ್ಕೆ ಕೃಷಿ ಉತ್ಪನ್ನ ಮಾರುಕಟ್ಟೆಯ ಜೋಡಿರಸ್ತೆ ನಿರ್ಮಾಣವಾಗಿದೆ. ಈ ಎರಡು ರಸ್ತೆಗಳ ಮಗ್ಗುಲಲ್ಲೇ ಕೆರೆ ಇದ್ದು, ಕೆರೆ ಅಭಿವೃದ್ಧಿಗೊಂಡು ಕೆರೆಯ ಮಧ್ಯಭಾಗದಲ್ಲಿ ನೀರಿನ ಪೌಂಟೇನ್‌ವೊಂದು ನಿರ್ಮಾಣವಾಗಿ ನೀರು ಚಿಮ್ಮುತ್ತಿದ್ದ ಪಕ್ಷದಲ್ಲಿ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಮತ್ತು ಕೆರೆಯ ಪಕ್ಕದಲ್ಲಿರುವ ನಿವಾಸಿಗಳಿಗೆ ಮನರಂಜನೆ ಯನ್ನು ಕಣ್ತುಂಬಿಕೊಳ್ಳುವಂತೆ ಆಗಲಿದೆ.

Advertisement

ಅಕ್ರಮ ತಡೆಗೆ ಒತ್ತಾಯ: ಚೆನ್ನಯ್ಯಕಟ್ಟೆ ಕೆರೆಯಂತೆ ಇನ್ನು ಹಲವಾರು ಇತಿಹಾಸ ಪ್ರಸಿದ್ಧ ಕೆರೆಗಳು ಅಕ್ರಮ ಒತ್ತುವರಿಗೆ ಸಿಲುಕಿ ಯಾವುದೇ ತರಹದ ಅಭಿವೃದ್ಧಿ ಆಗದೆ ಮಣ್ಣಿನಿಂದ ಮುಚ್ಚಿ ಕೆರೆಯೇ ಇಲ್ಲದಂತೆ ಆಗುವ ಕೆಲಸಗಳು ಒಳಗೊಳಗೆ ನಡೆಯುತ್ತಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಕೆರೆಗಳನ್ನು ಅಭಿವೃದ್ಧಿಪಡಿಸಿ ಅಂತರ್ಜಲ ಹೆಚ್ಚಿಸಿದಾಗ ಕೆರೆಗಳು ಮತ್ತಷ್ಟು ಅಭಿವೃದ್ಧಿ ಹೊಂದುತ್ತದೆ.

ಅಡಿಗಲ್ಲು ಹಾಕಿ: ಕೆರೆಗಳನ್ನು ಸರ್ವೆ ಇಲಾಖೆಯ ಅಧಿಕಾರಿಗಳು ಎಲ್ಲೆ ಗುರುತು ಮಾಡಿ ಅದಕ್ಕೆ ಸೂಕ್ತ ಕಲ್ಲಿನ ಬೇಲಿಗಳನ್ನು ನಿರ್ಮಾಣ ಮಾಡಿದಾಗ ಮಾತ್ರ ಕೆರೆಗಳ ಅಕ್ರಮ ಒತ್ತುವರಿಗೆ ಕಡಿವಾಣ ಹಾಕಿದಂತೆ ಆಗಲಿದ್ದು, ಕೆರೆಗಳಲ್ಲಿ ನೀರು ಶೇಖರಣೆಯಾಗು ವುದರಿಂದ ಜಾನುವಾರುಗಳಿಗೂ ನೀರು ಲಭ್ಯವಾಗ ಲಿದ್ದು, ಕೂಡಲೇ ಭಿವೃದ್ಧಿಗೆ ಅಡಿಗಲ್ಲು ಬೀಳಬೇಕು.

● ಡಿ.ನಟರಾಜು

Advertisement

Udayavani is now on Telegram. Click here to join our channel and stay updated with the latest news.

Next