ಚನ್ನರಾಯಪಟ್ಟಣ: ಜನಪ್ರತಿನಿಧಿಗಳು ವೇದಿಕೆ ಮೇಲೆ ನಿಂತು ಭಾಷಣ ಮಾಡುವುದರಿಂದ ಪರಿಸರ ರಕ್ಷಣೆ ಆಗುವುದಿಲ್ಲ. ನಾವು ಗಿಡ ನೆಟ್ಟು ಬೆಳೆಸುವ ಮೂಲಕ ಸಾರ್ವಜನಿಕರಿಗೆ ಮಾದರಿ ಆಗಬೇಕು ಎಂದು ವಿಧಾನ ಪರಿಷತ ಸದಸ್ಯ ಎಂ.ಎ.ಗೋಪಾಲಸ್ವಾಮಿ ಅಭಿಪ್ರಾಯಪಟ್ಟರು.
ತಾಲೂಕಿನ ನುಗ್ಗೇಹಳ್ಳಿ ಗ್ರಾಮದಲ್ಲಿ ವಲಯ ಅರಣ್ಯ ಇಲಾಖೆ ಹಾಗೂ ಸಾಮಾಜಿಕ ಅರಣ್ಯ ಇಲಾಖೆ ಸಹಯೋಗದೊಂದಿಗೆ ಗ್ರಾಮಸ್ಥರಿಗೆ ಸಾವಿರಾರು ಗಿಡವನ್ನು ವಿತರಣೆ ಮಾಡಿ, ಗ್ರಾಮ ಠಾಣೆಯಲ್ಲಿ ಸುಮಾರು 1,200 ಗಿಡವನ್ನು ನೆಡುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪರಿಸರ ಸಂರಕ್ಷಣೆ ಮಾಡುವಂತೆ ತಿಳಿಸುವುದರೊಂದಿಗೆ ಪರಿಸರ ಉಳಿಸಲು ನಾವು ಶ್ರಮಿಸಬೇಕಿದೆ ಎಂದು ತಿಳಿಸಿದರು.
ಪ್ರತಿ ಮನೆಗೆ ಎರಡು ಗಿಡ ವಿತರಣೆ: ಜೂನ್ ತಿಂಗಳಲ್ಲಿ ಮಳೆಯಾದಾಗ ಜಂಬೂರು ಗ್ರಾಮದ ಕರೆ ಏರಿ ಮೇಲೆ 600ಕ್ಕೂ ಹೆಚ್ಚು ಗಿಡಗಳನ್ನು ನಾಟಿ ಮಾಡಲಾಗಿತ್ತು, ಈಗ ಆಶ್ಲೇಷ ಮಳೆ ಉತ್ತಮವಾಗಿ ಆಗಿರುವುದರಿಂದ ಗ್ರಾಮದ ಪ್ರತಿ ಮನೆಗೆ ಎರಡು ಗಿಡದಂತೆ ಬೆಳೆಸಲು ಮುಂದಾಗುತ್ತಿದ್ದೇವೆ. ಈಗ ನಾಟಿ ಮಾಡಿರುವುದರಲ್ಲಿ ಶೇ.80 ರಷ್ಟು ಗಿಡವನ್ನು ಉಳಿಸಲು ಗ್ರಾಮಸ್ಥರು ಶ್ರಮಿಸಲಿದ್ದಾರೆ. ಬೇಸಿಗೆಯಲ್ಲಿ ವೈಯಕ್ತಿಕವಾಗಿ ಹಣ ವೆಚ್ಚ ಮಾಡಿ ಟ್ಯಾಂಕರ್ ಮೂಲಕ ನೀರು ಹಾಕಲಾವುದು ಎಂದರು.
ಹಸಿರು ಕರ್ನಾಟಕ ಯೋಜನೆ: ಮೈತ್ರಿ ಸರ್ಕಾರ ಹಸಿರು ಕರ್ನಾಟಕ ಯೋಜನೆ ಘೋಷಣೆ ಮಾಡಿದೆ ಇದನ್ನು ಜಾರಿಗೆ ಮಾಡಲು ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರೆ ಸಾಲದು ಜನಪ್ರತಿನಿಧಿಗಳು ಮುಂದೆ ನೀತು ಅನುಷ್ಠಾನ ಮಾಡಿಸಲು ಮುಂದಾಗಬೇಕು, ಗ್ರಾಮದ ಜಕ್ಕೇಶ್ವರ ದೇವಾಲಯದ ಎರಡು ಎಕರೆ ಭೂಮಿಯಲ್ಲಿ ನೂರಾರು ವಿವಿಧ ಜಾತಿಯ ಹಣ್ಣಿನ ಗಿಡವನ್ನು ನಾಟಿ ಮಾಡಿ ತಂತಿಬೇಲಿ ನಿರ್ಮಾಣ ಮಾಡಿ ಜಾನು ವಾರುಗಳಿಂದ ರಕ್ಷಣೆ ಮಾಡಲಾಗುವುದು. ಪ್ರತಿ ಗಿಡಗಳಿಗೆ ಹನಿ ನೀರಾವರಿ ಅಳವಡಿಸ ಲಾಗುತ್ತದೆ ಎಂದು ಹೇಳಿದರು.
ಗ್ರಾಮದಲ್ಲಿ ಸುಮಾರು ಮೂರು ಲಕ್ಷ ರೂ. ಅನುದಾನದಲ್ಲಿ ಉದ್ಯಾನ ನಿರ್ಮಾಣ ಮಾಡಲಾಗುವುದು. ಇತ್ತೀಚಿನ ದಿವಸದಲ್ಲಿ ಪ್ರತಿ ಗ್ರಾಮಕ್ಕೂ ಉದ್ಯಾನವನ ಅವಶ್ಯವಿದೆ. ಗ್ರಾಮಠಾಣಾ ಇಲ್ಲವೇ ದೇವಾಲಯದ ಆವ ರಣಗಳಲ್ಲಿ ಗಿಡ ಮರ ಬೆಳೆಸುವ ಮೂಲಕ ಉದ್ಯಾನವನ ನಿರ್ಮಾಣಕ್ಕೆ ಗ್ರಾಮಸ್ಥರು ಮುಂದಾಗಬೇಕು. ಸರ್ಕಾರ ಪರಿಸರ ಉಳಿ ವಿಗೆ ನೀಡುವ ಅನುದಾನ ಹಾಗೂ ಯೋಜ ನೆಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ನಿಷ್ಠೆಯಿಂದ ಮಾಡಬೇಕು ಎಂದು ಆದೇಶಿ ದರು. ಸಾಮಾಜಿಕ ಅರಣ್ಯಾಧಿಕಾರಿ ಪ್ರಸನ್ನ ಕುಮಾರ, ವಲಯ ಅರಣ್ಯಾಧಿಕಾರಿ ಹೇಮಂತಕುಮಾರ, ಕರೀಗೌಡ, ದಯಾನಂದ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.