Advertisement

ರಸ್ತೆ ಗುಂಡಿ ತಪ್ಪಿಸಲು ಹೋಗಿ ಸ್ಕಿಡ್‌ ಆದ ಸ್ಕೂಟಿ; ಲಾರಿ ಹರಿದು ಯುವತಿ ದಾರುಣ ಅಂತ್ಯ

05:07 PM Jan 04, 2023 | Team Udayavani |

ಚೆನ್ನೈ: ರಸ್ತೆ ಗುಂಡಿ ತಪ್ಪಿಸಲು ಹೋಗಿ ಯುವತಿಯೊಬ್ಬಳು ಲಾರಿ ಅಡಿಗೆ ಬಿದ್ದು ಮೃತಪಟ್ಟಿರುವ ದಾರುಣ ಘಟನೆ ಚೆನ್ನೈನಲ್ಲಿ ನಡೆದಿದೆ.

Advertisement

ಶೋಭನಾ ( 22) ಮೃತ ಯುವತಿ. ಖಾಸಗಿ ಕಂಪೆನಿಯಲ್ಲಿ ಇಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದ ಶೋಭನಾ ಮುಂಜಾನೆ ತನ್ನ ಸಹೋದರನನ್ನು ದ್ವಿಚಕ್ರ ವಾಹನದಲ್ಲಿ ನೀಟ್‌ ಕೋಚಿಂಗ್‌ ತರಗತಿಗೆ ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ಮಧುರವಾಯಲ್‌ ರಸ್ತೆಯಲ್ಲಿರುವ ಹೊಂಡಗಳನ್ನು ತಪ್ಪಿಸಲು ಹೋಗುವಾಗ ವಾಹನದ ನಿಯಂತ್ರಣ ತಪ್ಪಿ, ಸ್ಕಿಡ್‌ ಆಗಿ ಕೆಳಕ್ಕೆ ಬಿದ್ದಿದ್ದಾರೆ.

ಕೆಳಕ್ಕೆ ಬಿದ್ದ ಶೋಭನಾ ಅವರ ಮೇಲೆ ವೇಗವಾಗಿ ಬರುತ್ತಿದ್ದ ಲಾರಿ ಹರಿದ ಪರಿಣಾಮ ಶೋಭನಾ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಘಟನೆಯಲ್ಲಿ ಶೋಭನಾ ಅವರ ಸಹೋದರ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.

ಮರಳನ್ನು ತುಂಬಿಸಿಕೊಂಡು ಬರುತ್ತಿದ್ದ ಲಾರಿ ಶೋಭನಾ ಅವರ ಹರಿದ ಬಳಿಕ ಚಾಲಕ ಅಲ್ಲಿಂದ ಪರಾರಿಯಾಗಿದ್ದಾನೆ. ಆ ಬಳಿಕ ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿದ ಲಾರಿ ಚಾಲಕ ಮೋಹನ್‌ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next