Advertisement

IPL; ಕೆಕೆಆರ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಗೆ 7 ವಿಕೆಟ್‌ಗಳ ಜಯ

11:10 PM Apr 08, 2024 | Team Udayavani |

ಚೆನ್ನೈ: ಇಲ್ಲಿನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 7 ವಿಕೆಟ್‌ಗಳಿಂದ ಜಯಗಳಿಸಿತು.

Advertisement

ಚೆನ್ನೈ ಸೂಪರ್ ಕಿಂಗ್ಸ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಕೆಕೆಆರ್ ಬ್ಯಾಟಿಂಗ್ ವೈಫಲ್ಯ ತೋರಿತು, ಚೆನ್ನೈ ಬಿಗಿ ದಾಳಿಗೆ ತತ್ತರಿಸಿ 9 ವಿಕೆಟ್ ಕಳೆದುಕೊಂಡು 137 ರನ್ ಗಳ ಸಣ್ಣ ಮೊತ್ತ ಗಳಿಸಲಷ್ಟೇ ಶಕ್ತವಾಯಿತು. ಗುರಿ ಬೆನ್ನಟ್ಟಿದ ಚೆನ್ನೈ 17.4 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 141 ರನ್ ಗಳಿಸಿ ಭರ್ಜರಿ ಜಯ ಸಾಧಿಸಿತು.

ಕೆಕೆಆರ್ ಪರ ನರೈನ್ 27, ರಘುವಂಶಿ 24, ನಾಯಕ ಶ್ರೇಯಸ್ ಅಯ್ಯರ್ 34, ರಮಣದೀಪ್ ಸಿಂಗ್ 13, ರಸೆಲ್ 10 ರನ್ ಗಳಿಸಿದರು. ಬಿಗಿ ದಾಳಿ ನಡೆಸಿದ ರವೀಂದ್ರ ಜಡೇಜ 3 ವಿಕೆಟ್ ಕಬಳಿಸಿದರು.ತುಷಾರ್ ದೇಶಪಾಂಡೆ 3 ವಿಕೆಟ್ ಕಿತ್ತು ಗಮನ ಸೆಳೆದರು. ಮುಸ್ತಫಿಜುರ್ 2 ಮತ್ತು ಎಂ ತೀಕ್ಷಣ ಒಂದು ವಿಕೆಟ್ ಕಿತ್ತರು.

ಚೆನ್ನೈ ಪರ ರಚಿನ್ ರವೀಂದ್ರ15, ನಾಯಕ ರುತುರಾಜ್ ಗಾಯಕ್ವಾಡ್ ಔಟಾಗದೆ 67, ಡೇರಿಲ್ ಮಿಚೆಲ್ 25, ಶಿವಂ ದುಬೇ 28, ಎಂಎಸ್ ಧೋನಿ ಔಟಾಗದೆ 1 ರನ್ ಗಳಿಸಿದರು.

ಕೆಕೆಆರ್ ಆಡಿದ 4 ನೇ ಪಂದ್ಯದಲ್ಲಿ ಮೊದಲ ಸೋಲು ಅನುಭವಿಸಿತು. ಚೆನ್ನೈ ಆಡಿದ 5 ನೇ ಪಂದ್ಯದಲ್ಲಿ 3 ನೇ ಗೆಲುವು ತನ್ನದಾಗಿಸಿಕೊಂಡಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next