ಅಹಮದಾಬಾದ್: ಮೀಸಲು ದಿನವಾದ ಸೋಮವಾರ ನಡೆಯುತ್ತಿರುವ ಐಪಿಎಲ್ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ 4 ವಿಕೆಟ್ ನಷ್ಟಕ್ಕೆ ಬರೋಬ್ಬರಿ 214 ರನ್ ಗಳ ನ್ನು ಕಲೆ ಹಾಕಿ ಅತ್ಯುತ್ತಮ ಮೊತ್ತವನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮುಂದಿಟ್ಟಿದೆ.
ರವಿವಾರದ ಮಳೆಯ ಕಾರಣದಿಂದ ಮುಂದೂಡಿಕೆಯಾಗಿದ್ದ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು.
ಭರ್ಜರಿ ಆಟವಾಡಿದ ವೃದ್ಧಿಮಾನ್ ಸಹಾ 54 ರನ್ ಗಳಿಸಿ ಔಟಾದರು. ಭಾರಿ ನಿರೀಕ್ಷೆ ಇರಿಸಿದ್ದ ಆಟಗಾರ ಶುಭಮನ್ ಗಿಲ್ 39 ರನ್ ಗಳಿಸಿದ್ದ ವೇಳೆ ಕ್ಯಾಚಿತ್ತು ನಿರ್ಗಮಿಸಿದರು. ಅತ್ಯಮೋಘ ಆಟವಾಡಿದ ಸಾಯಿ ಸುದರ್ಶನ್ 96 ರನ್ ಗಳಿಸಿದ್ದ ವೇಳೆ ಮಥೀಶ ಪತಿರಣ ಅವರನ್ನು ಎಲ್ಬಿಡಬ್ಲ್ಯೂ ಮೂಲಕ ಔಟ್ ಮಾಡಿ ನಿರಾಸೆಗೆ ಗುರಿ ಮಾಡಿದರು. ಶತಕ ವಂಚಿತರಾದ ಸಾಯಿ ಸುದರ್ಶನ್ 47 ಎಸೆತಗಳಲ್ಲಿ 8 ಬೌಂಡರಿ ಮತ್ತು 6 ಆಕರ್ಷಕ ಸಿಕ್ಸರ್ ಸಿಡಿಸಿ ಇನ್ನಿಂಗ್ಸ್ ಕಟ್ಟಿದರು. ನಾಯಕ ಹಾರ್ದಿಕ್ ಪಾಂಡ್ಯ ಔಟಾಗದೆ 21 ರನ್ ಕೊಡುಗೆ ಸಲ್ಲಿಸಿದರು.