ಮುಂಬೈ: 2023ರ ಸೀಸನ್ ನ ಐಪಿಎಲ್ ಗೆ ಈಗಾಗಲೇ ತಯಾರಿ ನಡೆಸಲಾಗುತ್ತಿದೆ. ಮಿನಿ ಹರಾಜು ಡಿಸೆಂಬರ್ ನಲ್ಲಿ ನಡೆಯಲಿದ್ದು, ಅದಕ್ಕೂ ಮೊದಲು ತಾವು ತಂಡದಿಂದ ಕೈಬಿಡುವ ಆಟಗಾರರ ಪಟ್ಟಿ ತಯಾರಿ ಮಾಡುತ್ತಿದೆ. ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಇಬ್ಬರು ಆಟಗಾರರನ್ನು ಕೈಬಿಡಲು ಸಜ್ಜಾಗಿದೆ ಎನ್ನಲಾಗಿದೆ.
ಇಂಗ್ಲೆಂಡ್ ನ ಕ್ರಿಸ್ ಜೋರ್ಡನ್ ಮತ್ತು ನ್ಯೂಜಿಲೆಂಡ್ ನ ಆಡಮ್ ಮಿಲ್ನೆ ಅವರನ್ನು ಕೈ ಬಿಡಲು ಸಿಎಸ್ ಕೆ ಮುಂದಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ʼಕಾಂತಾರʼ, ʼಕೆಜಿಎಫ್ʼನಂತಹ ಸೌತ್ ಸಿನಿಮಾಗಳಿಂದ ನಾವು ಸ್ಫೂರ್ತಿ ಪಡೆಯಬೇಕು: ವರುಣ್ ಧವನ್
ಸಿಎಸ್ ಕೆ ಫ್ರಾಂಚೈಸಿಯು ಜೋರ್ಡನ್ ಅವರನ್ನು 3.60 ಕೋಟಿ ರೂ.ಗೆ ಖರೀದಿಸಿತ್ತು. ಅವರು 2022ರ ಐಪಿಎಲ್ ನಲ್ಲಿ ಆಡಿದ ನಾಲ್ಕು ಪಂದ್ಯಗಳಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ್ದರು. ಹೀಗಾಗಿ ಸೀಸನ್ ನ ಉಳಿದ ಭಾಗಕ್ಕೆ ಹೊರಗುಳಿದಿದ್ದರು.
Related Articles
ಮತ್ತೊಂದೆಡೆ, ಮಿಲ್ನೆ ಅವರನ್ನು 1.90 ಕೋಟಿ ರೂ.ಗೆ ಖರೀದಿಸಲಾಗಿತ್ತು. ಆದರೆ ಮಂಡಿರಜ್ಜು ಗಾಯದಿಂದಾಗಿ ಅವರು ಒಂದು ಪಂದ್ಯದ ನಂತರ ಕೂಟದಿಂದ ಹೊರಗುಳಿದಿದ್ದರು.