ಚೆನ್ನೈ: ಭಾರತದ ಅಂಕಿತಾ ರೈನಾ ಚೆನ್ನೈ ಓಪನ್ ಟೆನಿಸ್ ಕೂಟದ ಮೊದಲ ಸುತ್ತಿನಲ್ಲಿ ನೇರ ಸೆಟ್‌ಗಳಿಂದ ಸೋಲನ್ನು ಕಂಡಿದ್ದಾರೆ. ಅವರು ನಾಲ್ಕನೇ ಶ್ರೇಯಾಂಕದ ಜರ್ಮನಿಯ ಟಾಟಾjನಾ ಮರಿಯಾ ಕೈಯಲ್ಲಿ 0-6, 1-6 ಸೆಟ್‌ಗಳಿಂದ ಸೋತರು.
ಅಂಕಿತಾ ಇನ್ನು ಡಬಲ್ಸ್‌ನಲ್ಲಿ ನೆದರ್ಲೆಂಡಿನ ರೊಸಾಲೀ ವಾನ್ ಡೆರ್ ಹೋಕ್ ಜತೆ ಆಡಲಿದ್ದಾರೆ. ಮೊದಲ ಸುತ್ತಿನಲ್ಲಿ ಅವರಿಬ್ಬರು ರಷ್ಯಾದ ಅನಾಸ್ತಾಸಿಯಾ ಗಾಸನೋವಾ ಮತ್ತು ಒಕ್ಸಾನಾ ಸೆಲೆಖಮೆಟೆವಾ ಅವರನ್ನು ಎದುರಿಸಲಿದ್ದಾರೆ.
ಈ ಮೊದಲು ನಡೆದ ಸಿಂಗಲ್ಸ್ ಪಂದ್ಯದಲ್ಲಿ ಅನಾಸ್ತಾಸಿಯಾ ಗಾಸ ನೋವಾ ಅವರು ಅಗ್ರಶ್ರೇಯಾಂಕದ ಅಮೆರಿಕದ ಅಲಿಸನ್ ರಿಸ್ಕೆ ಅಮೃತ್‌ರಾಜ್ ಅವರನ್ನು 6-2, 6-3 ಸೆಟ್‌ಗಳಿಂದ ಸೋಲಿಸಿದರು.
ಸೋಮವಾರ ನಡೆದ ಪಂದ್ಯದಲ್ಲಿ ಭಾರತದ ಕರ್ಮಾನ್ ಕೌರ್ ಥಂಡಿ ಅದ್ಭುತ ಗೆಲುವು ಸಾಧಿಸಿ ದ್ವಿತೀಯ ಸುತ್ತಿಗೇರಿದ್ದರು. ಅವರು ಫ್ರಾನ್ಸಿನ ಎಂಟನೇ ಶ್ರೇಯಾಂಕದ ಪಕ್ವೆಟ್ ಅವರನ್ನು 4-6, 6-4, 6-3 ಸೆಟ್‌ಗಳಿಂದ ಸೋಲಿಸಿ ಅಚ್ಚರಿಯ ಫಲಿ ತಾಂಶಕ್ಕೆ ಕಾರಣರಾದರು. ಮುಂದಿನ ಸುತ್ತಿನಲ್ಲಿ ಅವರು 2014ರ ವಿಂಬಲ್ಡನ್ ಫೈನಲಿಸ್ಟ್ ಕೆನಡದ ಎಗೆನಿ ಬೌಶರ್ಡ್ ಅವರನ್ನು ಎದುರಿಸಲಿದ್ದಾರೆ.
ಬಲುದೊಡ್ಡ ಗೆಲುವು
ಇದೊಂದು ಖಂಡಿತವಾಗಿಯೂ ನನ್ನ ಬಾಳ್ವೆಯ ಬಲುದೊಡ್ಡ ಗೆಲುವು ಎಂದು ಪಂದ್ಯದ ಬಳಿಕ ಥಂಡಿ ಹೇಳಿದರು. ಮೊದಲ ಸೆಟ್‌ನಲ್ಲಿ ಸೋತಿದ್ದರೂ ಗೆಲ್ಲುವ ವಿಶ್ವಾಸ ನನ್ನಲ್ಲಿತ್ತು. ಎದುರಾಳಿ ಆಟಗಾರ್ತಿ ಉತ್ತಮವಾಗಿ ಆಡಿದ್ದರು. ಆದರೆ ಪ್ರೇಕ್ಷಕರ ಬೆಂಬಲದಿಂದಾಗಿ ಗೆಲುವು ದಾಖಲಿಸಲು ಸಾಧ್ಯವಾಯಿತು ಎಂದು ಥಂಡಿ ತಿಳಿಸಿದರು.