Advertisement

ಚೆನ್ನೈ ಓಪನ್‌ ಚಾಲೆಂಜರ್‌ ಮೌಟೆಟ್‌ ಚಾಂಪಿಯನ್‌

12:30 AM Feb 12, 2019 | |

ಚೆನ್ನೈ: ಫ್ರಾನ್ಸ್‌ನ ಕೊರೆಂಟಿನ್‌ ಮೌಟೆಟ್‌ “ಚೆನ್ನೈ ಓಪನ್‌ ಚಾಲೆಂಜರ್‌’ ಪ್ರಶಸ್ತಿ ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ರವಿವಾರ ರಾತ್ರಿ ನಡೆದ ಫೈನಲ್‌ನಲ್ಲಿ ಮೌಟೆಟ್‌ ಆಸ್ಟ್ರೇಲಿಯದ ಆಂಡ್ರೂé ಹ್ಯಾರಿಸ್‌ ಅವರನ್ನು 6-3, 6-3 ನೇರ ಸೆಟ್‌ಗಳಿಂದ ಸೋಲಿಸಿ ಪ್ರಶಸ್ತಿ ಜಯಿಸಿದರು. ಈ ಹೋರಾಟ ಒಂದು ಗಂಟೆ, 15 ನಿಮಿಷಗಳ ಕಾಲ ನಡೆಯಿತು.

ಮೊದಲ ಸೆಟ್‌ನ ಆರಂಭದಲ್ಲೇ ಮುನ್ನಡೆ ಕಾಯ್ದುಕೊಂಡ ಮೌಟೆಟ್‌ ಅದೇ ಪ್ರದರ್ಶನವನ್ನು ಕಾಯ್ದಿರಿಸಿಕೊಂಡರು. ಎರಡನೇ ಸೆಟ್‌ನಲ್ಲಿ ಮೌಟೆಟ್‌ಗೆ ಹ್ಯಾರಿಸ್‌ ಅವರಿಂದ ಸ್ವಲ್ಪ ಪೈಪೋಟಿ ಎದುರಾಯಿತಾದರೂ ಫ‌ಲಿತಾಂಶವೇನೂ ಬದಲಾಗಲಿಲ್ಲ. ಇದು ಮೌಟೆಟ್‌ ಪಾಲಾದ 3ನೇ ಚಾಲೆಂಜರ್‌ ಪ್ರಶಸ್ತಿ.

Advertisement

Udayavani is now on Telegram. Click here to join our channel and stay updated with the latest news.

Next