Advertisement

Viral Video: ಆಸ್ಪತ್ರೆಯಲ್ಲೇ ನರ್ಸ್‌ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ ಡಾಕ್ಟರ್

04:51 PM Jun 19, 2024 | Team Udayavani |

ಚೆನ್ನೈ: ಆಸ್ಪತ್ರೆಯಲ್ಲೇ ಡಾಕ್ಟರ್‌ ಮತ್ತು ನರ್ಸ್ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Advertisement

ಪೆನ್‌ ಡ್ರೈವ್‌ ಹಾಗೂ ಒಂದು ಪತ್ರದ ಜೊತೆಯಲ್ಲಿ ʼಇಂಡಿಯಾ ಟುಡೇʼ ಗೆ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ವಿಡಿಯೋದಲ್ಲಿರುವ ವ್ಯಕ್ತಿಯನ್ನು ಡಾ. ಸುಬ್ಬಯ್ಯ ಷಣ್ಮುಗಂ ಎಂದು ಗುರುತಿಸಲಾಗಿದೆ. ನಗರದ ರಾಯಪೆಟ್ಟಾ ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ ಎಂದು ವರದಿ ಆಗಿದೆ.

ಡಾಕ್ಟರ್ ಆಪರೇಷನ್‌ ಥಿಯೇಟರ್‌ ನಲ್ಲಿ ಕೆಲಸ ಮಾಡುವ ನರ್ಸ್‌ ಜೊತೆ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ.

ಘಟನೆ ಮತ್ತು ವಿಡಿಯೋ ಕುರಿತು ಸಂಬಂಧಪಟ್ಟ ಅಧಿಕಾರಿಗಳಲ್ಲಿ ಕೇಳಿದಾಗ, ವೈದ್ಯರ ವಿರುದ್ಧ ದೂರು ಸ್ವೀಕರಿಸಿಲ್ಲ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ. ಆ ಬಳಿಕ ಸಂಸ್ಥೆಯಿಂದ ತನಿಖೆಯನ್ನು ಆರಂಭಿಸಲಾಗಿದೆ ಎಂದು ವರದಿ ತಿಳಿಸಿದೆ.

“ವೈದ್ಯರ ವಿರುದ್ಧ ನಮಗೆ ಯಾವುದೇ ದೂರುಗಳು ಬಂದಿಲ್ಲ. ಜೂನ್ 14 ರಂದು ವಿಡಿಯೋ ಹರಿದಾಡುತ್ತಿದ್ದಂತೆ, ತನಿಖೆಯನ್ನು ಪ್ರಾರಂಭಿಸಲಾಯಿತು ಎಂದು ರಾಯಪೆಟ್ಟಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ ಆಯಿಷಾ ʼಇಂಡಿಯಾ ಟುಡೇ ಟಿವಿʼಗೆ ತಿಳಿಸಿದ್ದಾರೆ.

Advertisement

ಈ ಹಿಂದೆ 2020 ರಲ್ಲೂ ಡಾ. ಷಣ್ಮುಗಂ ಮೇಲೆ ಕಿರುಕುಳ ಆರೋಪ ಕೇಳಿಬಂದಿತ್ತು. ಪಾರ್ಕಿಂಗ್‌ ವಿಚಾರಕ್ಕೆ ಪಕ್ಕದ ಮನೆಯವರ ಗೇಟ್‌ ಗೆ ಮೂತ್ರ ವಿಸರ್ಜನೆ ಮಾಡಿ ರಾದ್ಧಾಂತ ಸೃಷ್ಟಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next