ಶ್ರೀನಗರ್: ಭಯೋತ್ಪಾದನಾ ಚಟುವಟಿಕೆಗಳಿಗೆ ಬೆಂಬಲ ನೀಡಿದ ಆರೋಪದಲ್ಲಿ ಮೂವರು ಸರ್ಕಾರಿ ಉದ್ಯೋಗಿಗಳನ್ನು ಜಮ್ಮು-ಕಾಶ್ಮೀರ ಆಡಳಿತ ಕೆಲಸದಿಂದ ವಜಾಗೊಳಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಮ್ಯಾಚ್ ಗೆದ್ದ ‘ಅಥರ್ವ ಪ್ರಕಾಶ್’; ಕರಾವಳಿ ಹುಡುಗನ ಕಣ್ತುಂಬ ಕನಸು
ಕಾಶ್ಮೀರ ಯೂನಿರ್ವಸಿಟಿಯ ರಸಾಯನಶಾಸ್ತ್ರ ಪ್ರೊಫೆಸರ್ ಅಲ್ತಾಫ್ ಹುಸೈನ್ ಪಂಡಿತ್, ಶಿಕ್ಷಕ ಮೊಹಮ್ಮದ್ ಮಕ್ಬೂಲ್ ಹಜಾಮ್ ಹಾಗೂ ಜಮ್ಮು ಕಾಶ್ಮೀರ್ ಪೊಲೀಸ್ ಕಾನ್ಸ್ ಟೇಬಲ್ ಗುಲಾಮ್ ರಸೂಲ್ ಸೇರಿದಂತೆ ಮೂವರನ್ನು ಸರ್ಕಾರಿ ಹುದ್ದೆಯಿಂದ ವಜಾಗೊಳಿಸಲಾಗಿದೆ ಎಂದು ವರದಿ ವಿವರಿಸಿದೆ.
ಇತ್ತೀಚೆಗೆ ಭಯೋತ್ಪಾದಕ ಸಂಘಟನೆ ಮತ್ತು ದೇಶ ವಿರೋಧಿ ಶಕ್ತಿಗಳ ವಿರುದ್ಧದ ಕಾರ್ಯಾಚರಣೆಯಲ್ಲಿ ಈ ಅಂಶ ಬೆಳಕಿಗೆ ಬಂದಿದ್ದು, ಇದು ಉಗ್ರರನ್ನು ಹತ್ತಿಕ್ಕುವ ಸರ್ಕಾರದ ಪ್ರಯತ್ನದ ಒಂದು ಭಾಗವಾಗಿರುವುದಾಗಿ ವರದಿ ತಿಳಿಸಿದೆ.
Related Articles
ಅಲ್ತಾಫ್ ಹುಸೈನ್ ಜಮಾತ್ ಎ ಇಸ್ಲಾಮ್ (ಜೆಇಐ) ಸಂಘಟನೆಯ ಜೊತೆ ಸಕ್ರಿಯನಾಗಿದ್ದು, ಈತ ಪಾಕಿಸ್ತಾನದಲ್ಲಿ ಉಗ್ರ ಕೃತ್ಯದ ತರಬೇತಿ ಪಡೆದಿರುವುದಾಗಿ ಮೂಲಗಳು ಹೇಳಿವೆ. ಅಲ್ಲದೇ ಜಮ್ಮು ಕಾಶ್ಮೀರದಲ್ಲಿಯೂ ಜೆಕೆಎಲ್ ಎಫ್ ನ ಭಯೋತ್ಪಾದಕ ಚಟುವಟಿಕೆಗಳಲ್ಲೂ ಸಕ್ರಿಯನಾಗಿದ್ದ. ಈತ ವಿದ್ಯಾರ್ಥಿಗಳನ್ನು ಕೂಡಾ ಭಯೋತ್ಪಾದಕ ಸಂಘಟನೆಗೆ ಸೇರಿಸುವಲ್ಲಿ ನಿರತನಾಗಿದ್ದ ಎಂದು ವರದಿ ಆರೋಪಿಸಿದೆ.