Advertisement
ಗೌರಿಬಿದನೂರು ಸಕ್ಕರೆ ಕಾರ್ಖಾನೆಯ ಗೆಸ್ಟ್‌ಹೌಸ್ ಹಿಂಭಾಗದಲ್ಲಿರುವ ರವೀಂದ್ರ ರೆಡ್ಡಿ ಸೇರಿದ ಜಮೀನಿನ ಗುಂಡಿಗಳಿಗೆ ರಾತ್ರಿ ವೇಳೆ ಟ್ಯಾಂಕರ್‌ಗಳ ಮೂಲಕ ತಂದು ರಾಸಾಯನಿಕ ಸುರಿದಿದ್ದಾರೆ. ಬುಧವಾರವೂ ಕೆಮಿಕಲ್‌ನಿಂದ ಬೆಂಕಿ ಹೊತ್ತಿಕೊಂಡು ಗುಂಡಿಯ ಸುತ್ತಲೂ ಬೃಹದಾಕಾರದ ಬೆಂಕಿ ಜ್ವಾಲೆ ಉಂಟಾಗಿದ್ದು, ಸ್ಥಳೀಯರು ನಂದಿಸಿದ್ದಾರೆ.ಸಕ್ಕರೆ ಕಾರ್ಖಾನೆ ಸ್ಥಗಿತಗೊಂಡು ದಶಕಗಳೇ ಕಳೆದಿದ್ದು, ಸದ್ಯ ಹಾಳಾಗಿ ನಿರ್ಜನ ಪ್ರದೇಶದಂತಾಗಿದೆ. ಸಣ್ಣ ಸಣ್ಣ ಗುಂಡಿಗಳು ಬಿದ್ದಿದ್ದು, ಆ ಗುಂಡಿಗಳಲ್ಲಿ ಮಳೆ ನೀರು ಶೇಖರಣೆಯಾಗಿ ಜಾನುವಾರುಗಳಿಗೆ ನೀರು ಕುಡಿಯಲು ಅನುಕೂಲವಾಗುತ್ತಿದೆ. ಈ ನಿರ್ಜನ ಪ್ರದೇಶವನ್ನೇ ಲಾಭವಾಗಿರಿಸಿಕೊಂಡಿರುವ ಕಾರ್ಖಾನೆ ಯವರು ಕೆಮಿಕಲ್ ತ್ಯಾಜ್ಯವನ್ನು ತಂದುಗುಂಡಿಯಲ್ಲಿ ಸಿರಿಯುತ್ತಿದ್ದಾರೆ. ಗುಂಡಿಯ ನೀರು ಕುಡಿದು ಕುರಿಗಳು ಸಾವನ್ನಪ್ಪಿರುವ ಹಾಗೂ ಅನೇಕ ಬಾರಿ ಬೆಂಕಿ ಹೊತ್ತಿಕೊಂಡಿರುವ ಘಟನೆಗಳು ಪದೇ ಪದೆ
ನಡೆಯುತ್ತಿವೆ.