Advertisement

ನ್ಯೂಯಾರ್ಕ್‌ನಲ್ಲಿ ಹಸಿವಿನ ಅರಿವು ; ದೇಶದ ಗೌರವ ಎತ್ತಿಹಿಡಿದ ವಿಕಾಸ್‌ ಖನ್ನಾ

12:24 PM Jun 29, 2020 | mahesh |

ಹೊಸದಿಲ್ಲಿ: ಎಷ್ಟೋ ಬಾರಿ ದೇಶಾಭಿಮಾನದಿಂದ ನಾವಾಡುವ ಒಂದೇ ಒಂದು ಮಾತು ದೇಶದ ಗೌರವವನ್ನು ಎತ್ತಿಹಿಡಿಯುತ್ತದೆ. ಜೊತೆಗೆ ಶ್ಲಾಘನೆಯ ಮಹಾಪೂರವನ್ನೇ ಹರಿಸಿಬಿಡು­ತ್ತದೆ. ಅಂತಹ ಗೌರವದ ಮಾತನಾಡಿ ಶ್ಲಾಘನೆಗೆ ಒಳಗಾ­ದವರು ಮಿಶೆಲಾನ್‌ ಸ್ಟಾರ್‌ ಶೆಫ್‌ ವಿಕಾಸ್‌ ಖನ್ನಾ.

Advertisement

ಭಾರತ ಮೂಲದವರಾಗಿರುವ 48 ವರ್ಷದ ವಿಕಾಸ್‌, ಕೋವಿಡ್ ಲಾಕ್‌ಡೌನ್‌ ಜಾರಿಯಾದಾಗಿ­ನಿಂದ ಭಾರತ­ದಲ್ಲಿನ ವೃದ್ಧಾ­ಶ್ರಮಗಳು, ಅನಾಥಾ­ಶ್ರಮಗಳು ಹಾಗೂ ಕುಷ್ಠರೋಗ ಕೇಂದ್ರಗಳಿಗೆ ಉಚಿತವಾಗಿ ಆಹಾರ ಧಾನ್ಯ ವಿತರಿಸುತ್ತಿದ್ದಾರೆ. ಹೀಗಾಗಿ ವಿಡಿಯೋ ಕಾಲ್‌ ಮೂಲಕ ಅವರ ಸಂದರ್ಶನ ಮಾಡುತ್ತಿದ್ದ ಬಿಬಿಸಿ ವರ್ಲ್ಡ್ ನ್ಯೂಸ್‌ ನಿರೂಪಕ, “ನೀವು ಅಮೆರಿಕದ ಮಾಜಿ ಅಧ್ಯಕ್ಷ ಒಬಾಮಾ ಅವರಿಗಾಗಿ ಆಹಾರ ತಯಾರಿಸಿದ್ದೀರ, ಗೋರ್ಡನ್‌ ರಾಮ್ಸಯ್ ಜೊತೆ ಟಿವಿ ಶೋನಲ್ಲಿ ಕೂಡ ಭಾಗವಹಿಸಿದ್ದೀರ. ಆದರೆ, ನೀವು ಭಾರತದ ಬಡ ಕುಟುಂಬ­ದಿಂದ ಬಂದವರು. ಭಾರತದಲ್ಲಿ ಆಹಾ­ರದ ಅಭದ್ರತೆ ಅನುಭವಿಸಿದ್ದರಿಂದ ನಿಮ್ಮಲ್ಲಿ ಈ ಸೇವಾ ಮನೋಭಾವ ಮೂಡಿತಾ?’ ಎಂದು ಕೇಳುತ್ತಾನೆ.

ಇದಕ್ಕೆ ಉತ್ತರಿಸುವ ವಿಕಾಸ್‌, “ನಾನು ಪಂಜಾಬ್‌ನ ಅಮೃತಸರದವನು. ಅಲ್ಲಿ ಯಾರೊಬ್ಬರೂ ಹಸಿವಿ­ನಿಂದ ಬಳಲು­ವುದಿಲ್ಲ. ಏಕೆಂದರೆ ಅಲ್ಲಿ “ಲಂಗರ್‌’ (ಸಿಖ್ಬರ ಉಚಿತ ಅನ್ನದಾನ) ಮೂಲಕ ಪ್ರತಿಯೊಬ್ಬರಿಗೂ ಆಹಾರ ದೊರೆಯುತ್ತದೆ. ನನಗೆ ನಿಜವಾದ ಹಸಿವಿನ ಅರಿವಾದದ್ದು ನ್ಯೂಯಾರ್ಕ್‌ ನಗರದಲ್ಲಿ,’ ಎಂದು ಹೇಳುತ್ತಾರೆ.

ನೇರ ಪ್ರಸಾರವಾದ ಈ ಸಂದರ್ಶನದ ವಿಡಿಯೋ ಕ್ಲಿಪ್‌ ಈಗ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಟ್ರೆಂಡ್‌ ಆಗಿದೆ. ನೂರಾರು ಮಂದಿ ಈ ವಿಡಿಯೋ ಟ್ವೀಟ್‌ ಮಾಡಿದ್ದು, ಸಾವಿರಾರು ಮಂದಿ ರಿಟ್ವೀಟ್‌ ಮಾಡಿದ್ದಾರೆ. ಜೊತೆಗೆ ಲಕ್ಷಾಂತರ ಜನ ವಿಕಾಸ್‌ ಖನ್ನಾರ ದೇಶಾಭಿಮಾನವನ್ನು ಕೊಂಡಾ­ಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next