Advertisement

ಹೂಲಿಕಟ್ಟಿ-ಶಿಂದೋಗಿಯಲ್ಲಿ ಚಿರತೆ: ಆತಂಕದಲ್ಲಿ ಜನತೆ

03:34 PM Jul 28, 2022 | Team Udayavani |

ಸವದತ್ತಿ: ತಾಲೂಕಿನ ಹೂಲಿಕಟ್ಟಿ ಮತ್ತು ಶಿಂದೋಗಿ ಗ್ರಾಮಗಳಲ್ಲಿ ಮಂಗಳವಾರ ತಡರಾತ್ರಿ ಚಿರತೆ ಕಾಣಿಸಿಕೊಂಡಿದೆ. ಗ್ರಾಮಸ್ಥರು ಆತಂಕದಲ್ಲಿದ್ದಾರೆ.

Advertisement

ಮಂಗಳವಾರ ರಾತ್ರಿ ಹೂಲಿಕಟ್ಟಿ ಗ್ರಾಮದ ಆಚೆಗಿರುವ ಸರಕಾರಿ ಪ್ರೌಢಶಾಲೆಯ ಹತ್ತಿರ ಗೊರಾಬಾಳ ರಸ್ತೆಯಲ್ಲಿ ಚಿರತೆಯನ್ನು ಗ್ರಾಮಸ್ಥರೊಬ್ಬರು ಪ್ರತ್ಯಕ್ಷವಾಗಿ ಕಂಡಿದ್ದಾರೆ. ಜೊತೆಗೆ ಹೊಲದಲ್ಲಿ ಹೆಜ್ಜೆ ಗುರುತು ಪರಿಶೀಲಿಸಿ ಅರಣ್ಯಾಧಿಕಾರಿಗಳು ಚಿರತೆ ಎಂದು ಖಚಿತಪಡಿಸಿದ್ದಾರೆ.

ಶಿಂದೋಗಿ ಗ್ರಾಮದ 7 ನೇ ಗೇಟ್‌ ಹತ್ತಿರ ಅರಣ್ಯ ಪ್ರದೇಶದಲ್ಲಿ ಬುಧವಾರ ಮುಂಜಾನೆ ಪ್ರತ್ಯೇಕ್ಷವಾದ ಚಿರತೆ, ಕುರಿಗಾಹಿಗಳ ಕುದುರೆಗೆ ಹಾನಿ ಮಾಡಿ ಮತ್ತು ಕುರಿಯನ್ನು ಹೊತ್ತೂಯ್ದಿದೆ. ಈ ಕುರಿತು ಕುರಿಗಾಹಿಯು ಚಿರತೆ ಕಂಡಿರುವುದಾಗಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಚಿರತೆ ನರಗುಂದ, ನವಲಗುಂದ ಅರಣ್ಯ ಪ್ರದೇಶದಿಂದ ಬಂದಿರಬಹುದು. ಈ ಹಿಂದೆ ತಂತಿ ಬಲೆಯಲ್ಲಿ ಸಿಲುಕಿ ಮೃತಪಟ್ಟ ಚಿರತೆಯೂ ಸಹ ಆ ಭಾಗದಿಂದ ಬಂದಿರಬಹುದು ಎಂದು ಹೇಳಲಾಗಿತ್ತು. ಇದೀಗ ಚಿರತೆ ಬಲೆ ತರಲಾಗಿದ್ದು ತನಿಖೆ ಮುಂದುವರೆದಿದೆ.

ಗ್ರಾಮಗಳಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಈಗಾಗಲೇ ಡಂಗೂರ ಹಾಗೂ ಧ್ವನಿವರ್ಧಕಗಳ ಮೂಲಕ ಎಚ್ಚರ ವಹಿಸುವಂತೆ ಅಧಿಕಾರಿಗಳು ಸಾರಿದ್ದಾರೆ. ಸ್ಥಳದಲ್ಲಿ ಎಎಸ್‌ ಎಫ್‌ ರಾಜೇಶ್ವರಿ ಹಿರೇನಟ್ಟಿ, ಆರ್‌ಎಫ್‌ಓ ಶಂಕರ ಅಂತರಗಟ್ಟಿ, ಪಿಡಿಒ ರಮೇಶ ಬೆಟಸೂರು, ಮಹಾದೇವಪ್ಪ ಕಳ್ಳಿ ಹಾಗೂ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿ ಮಂಗಳವಾರ ರಾತ್ರಿಯಿಂದ ಅಲ್ಲಿಯೇ ಗಸ್ತು ಇರಿಸಿ ಚಿರತೆಯ ಶೋಧ ಕಾರ್ಯ ಮುಂದುವರೆಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next