Advertisement
ತಾಲೂಕು ಕಚೇರಿಯಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭಾ ಚುನಾವಣೆ ಕ್ರಮಬದ್ಧವಾಗಿ ನಡೆಯಲು ಚುನಾವಣಾ ಆಯೋಗದ ಸೂಚನೆಯಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದರು.
Related Articles
Advertisement
ಲೆಕ್ಕ ಪರಿಶೋಧನಾ ತಂಡದಲ್ಲಿ ಶಿವಣ್ಣ ಅಧೀಕ್ಷಕರು ಮತ್ತು ರಾಘವೇಂದ್ರ, ಚುನಾವಣಾ ನೀತಿ ಸಂಹಿತಿ ನಿರ್ವಹಣಾಧಿಕಾರಿಯಾಗಿ ಬಿ. ಚಂದ್ರಶೇಖರಪ್ಪಮೊ. 9886537204ಮತ್ತು ನಾಗರಾಜು ಮೊ. 9886537204 ವಾಣಿಜ್ಯ ತೆರೆಗೆ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದರು.ತಾಲೂಕಿನಲ್ಲಿ ಒಟ್ಟು 246ಮತಗಟ್ಟೆಗಳಿದ್ದು 15ಅತಿಸೂಕ್ಷ್ಮ, 59ಸೂಕ್ಷ್ಮ, 160ಸಾಮಾನ್ಯ ಹಾಗೂ 12ಸೂಕ್ಷ್ಮ ಮತಕೇಂದ್ರಗಳು ಎಂದು ಗುರುತಿಸಲಾಗಿದೆ. ಚುನಾವಣಾ ಆಯೋಗ ಸುವಿಧ, ಸುಗಮ, ಸಮಾಧಾನ ಎಂಬ ಆ್ಯಪ್‌ಗ್ಳನ್ನು ಬಿಡುಗಡೆ ಮಾಡಲಿದ್ದು ಇವುಗಳನ್ನು ಉಪಯೋಗಿಸಿ ಕೊಳ್ಳಬಹುದು ಎಂದರು. ನಾಟಕ ಪ್ರದರ್ಶನ – ಕ್ರಮ: ಮಂಗಳವಾರ ರಾಮನವಮಿ ಹಬ್ಬದ ಅಂಗವಾಗಿ ಕೆ.ಟಿ.ಹಳ್ಳಿ ಗ್ರಾಮದಲ್ಲಿ ಏರ್ಪಡಿಸಿದ್ದ ಕರುಕ್ಷೇತ್ರ ನಾಟಕ ಪ್ರದರ್ಶನದ ವೇಳೆ ಚುನಾವಣಾ ನೀತಿ ಸಂಹಿತೆ ಉಲ್ಲಂ ಸಲಾಗಿದೆ. ಅದುದರಿಂದ ನಾಟಕ ಪ್ರದರ್ಶನ ಆಯೋಜಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಹೇಳಿದರು. ರಾತ್ರಿ 10 ಗಂಟೆಯಿಂದ ಬೆಳಗ್ಗೆ 6ಗಂಟೆವರೆಗೂ ಧ್ವನಿವರ್ದಕ ಉಪಯೋಗಿಸುವಂತಿಲ್ಲ. ಎಂದು ತಿಳಿಸಿದರು. ಸಾರ್ವಜನಿಕರು ಚುನಾವಣಾ ನೀತಿ ಸಂಹಿತಿಯನ್ನು ಉಲ್ಲಂ ಸಿದ ಸಂಘಟನೆಗಳು ಕಂಡು ಬಂದರೆ ಕಚೇರಿಗೆ ತಿಳಿಸಬೇಕೆಂದು ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಇವಿಎಂ, ವಿವಿ ಪ್ಯಾಟ್ ಪ್ರಾತ್ಯಕ್ಷಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಭಾರ ತಹಶೀಲ್ದಾರ್ ವರದರಾಜು, ಚುನಾವಣಾಧಿಕಾರಿಗಳಾದ ಶ್ರೀನಿವಾಸ್, ಗಿರೀಶ್, ರಾಜಗೋಪಾಲ್ ಹಾಗೂ ಚುನಾವಣಾ ಕರ್ತವ್ಯಕ್ಕೆ ನಿಯೋಜಿತ ಅಧಿಕಾರಿಗಳು ಭಾಗವಹಿಸಿದ್ದರು.