ಸವಣೂರ: ಕೃಷಿ ಇಲಾಖೆಯಿಂದಹತ್ತಿಮತ್ತೂರ ಹೋಬಳಿ ವ್ಯಾಪ್ತಿಯ ಹಳ್ಳಗಳಲ್ಲಿ ನಿರ್ಮಾಣ ಮಾಡಿರುವ ಚೆಕ್ ಡ್ಯಾಂ ಕಾಮಗಾರಿ ಅತ್ಯಂತ ಕಳಪೆಯಾಗಿದ್ದು,ನೀರು ನಿಲ್ಲದಂತಾಗಿದೆ ಎಂದು ತಾಪಂಅಧ್ಯಕ್ಷ ತಿಪ್ಪಣ್ಣ ಸುಬ್ಬಣ್ಣನವರ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀಧರಮೂರ್ತಿಡಿ.ಎಂ. ಅವರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ತಾಪಂ ಮಾಸಿಕ ಕೆಡಿಪಿ ಸಭೆಯಲ್ಲಿ ನಡೆಯಿತು.
ತಾಪಂನ 33 ಲಕ್ಷ ರೂ. ಅನುದಾನದಲ್ಲಿಸುಮಾರು 8 ಚೆಕ್ ಡ್ಯಾಂಗಳನ್ನುನಿರ್ಮಿಸಲಾಗಿದೆ. ಇದರಲ್ಲಿ ಕೇವಲ 25 ಲಕ್ಷ ರೂ. ಮಾತ್ರ ಬಿಡುಗಡೆಗೊಂಡಿದೆ.ಇನ್ನುಳಿದ ಹಣ ಬಿಡುಗಡೆಗೊಂಡಿಲ್ಲ ಎಂದು ವರದಿಯನ್ನು ಅಧಿಕಾರಿಗಳು ಸಲ್ಲಿಸುತ್ತಿದ್ದಂತೆ, ಮೊದಲು ನಿರ್ಮಾಣಗೊಂಡಿದ್ದ ಚೆಕ್ ಡ್ಯಾಂ ಸ್ಥಳಗಳಲ್ಲಿಯೇ ಮರು ಚೆಕ್ ಡ್ಯಾಂ ನಿರ್ಮಾಣ ಮಾಡಲಾಗಿದೆ ಎಂದು ಪ್ರಗತಿಯನ್ನು ತೋರಿಸಿ ಹಣ ವ್ಯಯ ಮಾಡುತ್ತಿರುವುದು ತಾಪಂ ಗಮನದಲ್ಲಿದೆ. ಚೆಕ್ ಡ್ಯಾಂ ನಿರ್ಮಾಣ ಮಾಡಿದ ಸ್ಥಳಗಳ ಪರಿಶೀಲನೆ ಮಾಡಿ ಅದಕ್ಕೆ ಸಂಭಂದಪಟ್ಟದಾಖಲೆಗಳ ಸಮೇತ ವರದಿ ಸಲ್ಲಿಸುವಂತೆ ಅಧ್ಯಕ್ಷ ತಿಪ್ಪಣ್ಣನವರ ಅಧಿಕಾರಿಗೆ ಸೂಚಿಸಿದರು.
ತಾಪಂ ಎಡಿ ಎಸ್.ಎಚ್.ಅಮರಾಪೂರ ಮಾತನಾಡಿ, ಕಳೆದ ಸಾಲಿನಲ್ಲಿ ನರೇಗಾಯೋಜನೆಯಡಿ ರೈತರ ಜಮೀನುಗಳಲ್ಲಿಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿ ಜಿಲ್ಲೆಯಲ್ಲಿಯೇ ಪ್ರಥಮವಾಗಿಪ್ರಗತಿ ಸಾಧಿ ಸಿತ್ತು. ಆದರೆ, ಪ್ರಸಕ್ತ ಸಾಲಿನಲ್ಲಿ ಕೇವಲ ಶೇ. 9 ರಷ್ಟು ಮಾತ್ರಪ್ರಗತಿಯಿಂದಾಗಿ ಸವಣೂರು ತಾಪಂ ಹಿಂದುಳಿದಿದೆ. ಹೆಚ್ಚಿನ ಪ್ರಮಾಣದಲ್ಲಿಮಾನವ ದಿನಗಳನ್ನು ಬಳಕೆ ಮಾಡಿಕೊಂಡು ಕಾಮಗಾರಿ ಮಾಡಿ ಅಭಿವೃದ್ಧಿಪಡಿಸಲು ಶ್ರಮ ವಹಿಸಬೇಕು ಎಂದರು.
ಸಭೆಗೆ ತಾಲೂಕು ಆರೋಗ್ಯಾಧಿಕಾರಿ ಚಂದ್ರಕಲಾ. ಜೆ, ಮಾತನಾಡಿ, ಕೋವಿಡ್ ಹತೋಟಿಗೆ ತರಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಕೋವ್ಯಾಕ್ಸಿನ್ ಲಸಿಕೆಯನ್ನು ಪ್ರಥಮಹಂತದಲ್ಲಿ ಕೇವಲ 241 ವಾರಿಯರ್ಸ್ ಗಳಿಗೆ ಹಾಕಲಾಗಿತ್ತು. ಎರಡನೇಹಂತದ ಕೋವಿಶೀಲ್ಡ್ ಲಸಿಕೆ ಪಡೆಯಲುಕಂದಾಯ ಹಾಗೂ ಪಂಚಾಯತ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಹಿಂದೇಟು ಹಾಕುತ್ತಿದ್ದಾರೆ ಎಂದರು.
ತಾಲೂಕಿನ ಕಡಕೋಳ ಗ್ರಾಮದಪಿಎಚ್‌ಸಿ ವೈದ್ಯರನ್ನು ಬದಲಾಯಿಸಲು ಅಧ್ಯಕ್ಷ ಸುಬ್ಬಣ್ಣನವರ ಟಿಎಚ್‌ಒ ಡಾ. ಚಂದ್ರಕಲಾ ಜೆ. ಅವರಿಗೆ ಕೋರಿಕೆ ಸಲ್ಲಿಸಿದರು. ವಿವಿಧ ಇಲಾಖೆ ಅಧಿಕಾರಿಗಳು ಮಾಸಿಕ ವರದಿ ಸಲ್ಲಿಸಿದರು.
ಉಪಾಧ್ಯಕ್ಷೆ ಜಯಶೀಲಾ ರೊಟ್ಟಿಗವಾಡ, ಪ್ರಭಾರ ತಹಶೀಲ್ದಾರ್ ಸಿ.ಎಸ್. ಜಾಧವ,ಎಡಿ ಎಸ್.ಎಚ್.ಅಮರಾಪೂರ, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.