Advertisement

ಚೆಕ್ ಬೌನ್ಸ್:3.5 ಲಕ್ಷ ಪರಿಹಾರ, 6 ತಿಂಗಳ ಶಿಕ್ಷೆ

07:57 PM Sep 11, 2021 | Team Udayavani |

ಬನಹಟ್ಟಿ : ಮೂರು ವರ್ಷದ ಹಿಂದಿನ ಚೆಕ್ ಬೌನ್ಸ್ ಪ್ರಕರಣವೊಂದರಲ್ಲಿ ಆರೋಪಿತನು ಅರ್ಜಿದಾರರಿಗೆ 3.5 ಲಕ್ಷ ರೂ. ಪರಿಹಾರ ಹಾಗೂ 5 ಸಾವಿರ ದಂಡ ತಪ್ಪಿದಲ್ಲಿ 6 ತಿಂಗಳ ಶಿಕ್ಷೆ ವಿಧಿಸಿ ಬನಹಟ್ಟಿಯ ಹಿರಿಯ ದಿವಾಣಿ ನ್ಯಾಯಾಲಯ ಆದೇಶಿಸಿದೆ.

Advertisement

ಬನಹಟ್ಟಿಯ ಮಂಗಳವಾರ ಪೇಟೆಯ ನಿವಾಸಿ ಶಂಕರ ಖವಾಸಿ ಎಂಬ ಆರೋಪಿಯೇ ಅರ್ಜಿದಾರ ಇನತೆಕಾಬ್ ಸೌದಾಗರ ಅವರಿಗೆ 3.5 ಲಕ್ಷ ರೂ. ನೀಡಬೇಕೆಂದು ಆದೇಶದಲ್ಲಿ ಹೇಳಲಾಗಿದೆ.

2008 ರಲ್ಲಿ 3.5 ಲಕ್ಷ ರೂ. ಹಣವನ್ನು ಪೂರ್ಣ ಪ್ರಮಾಣದಲ್ಲಿ ನೀಡದೆ ಒಂದು ಚೆಕ್ ನೀಡಿದ್ದರು. ಆ ಚೆಕ್ ನಗದೀಕರಣಕ್ಕಾಗಿ ಬ್ಯಾಂಕ್‌ಗೆ ಹಾಕಿದಾಗ ಚೆಕ್ ಬೌನ್ಸ್ ಆಗಿತ್ತು. ಇನತ್‌ಕಾಬ್ ಸೌದಾಗರ ಅವರು ಶಂಕರ ಖವಾಸಿ ವಿರುದ್ಧ ನ್ಯಾಯಾಲಯದಲ್ಲಿ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದರು.

ಇದನ್ನೂ ಓದಿ:ಆರು ತಿಂಗಳಲ್ಲಿ ನಾಲ್ವರು ಸಿಎಂ ಬದಲಾವಣೆ | ಬಿಜೆಪಿ ‘ರಾಜೀನಾಮೆ ಪರ್ವ’ಕ್ಕೆ ಕಾಂಗ್ರೆಸ್ ಟೀಕೆ

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಶಂಕರ ಅವರ ವಿರುದ್ಧ ಚೆಕ್ ಬೌನ್ಸ್ ಪ್ರಕರಣ ಸಾಬೀತಾಗಿದ್ದರಿಂದ ಶಂಕರ ಅವರಿಗೆ 3.5 ಲಕ್ಷ ಪರಿಹಾರ ಹಾಗೂ ಆರು ತಿಂಗಳ ಕಾಲ ಕಾರಾಗ್ರಹದ ಶಿಕ್ಷೆ ತಪ್ಪಿದಲ್ಲಿ 5 ಸಾವಿರ ರೂ. ದಂಡವನ್ನು ಹಿರಿಯ ದಿವಾಣಿ ನ್ಯಾಯಾಧೀಶ ಕಿರಣಕುಮಾರ ವಡಗೇರಿ ಆದೇಶದಲ್ಲಿ ತಿಳಿಸಿದ್ದಾರೆ.  ಅರ್ಜಿದಾರರ ಪರವಾಗಿ ಈಶ್ವರಚಂದ್ರ ಭೂತಿ ಹಾಗೂ ಬಸವರಾಜ ಭೂತಿ ವಕಾಲತ್ತು ವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next