Advertisement
ಮಂಜುನಾಥ್, ಆನಂದ್, ಇಂದ್ರೇಶ್, ದೊಡ್ಡಯ್ಯ, ಚಂದ್ರಶೇಖರ್, ಸಂತೋಷ್ ಕುಮಾರ್, ದಾದಾ ಹಯಾತ್ ಖಲಂದರ್, ಸ್ವರೂಪ್, ಮನೋಜ್, ಆನಂದ್ ಕುಮಾರ್, ಕೆಂಪೇಗೌಡ ಹಾಗೂ ವಿನಾಯಕ್ ಬಂಧಿತರು. ಆರೋಪಿಗಳಿಂದ ಕೃತ್ಯಕ್ಕೆ ಬಳಸುತ್ತಿದ್ದ 139 ವಿವಿಧ ಹೆಸರು ಮತ್ತು ನಂಬರ್‌ಗಳ ನಕಲಿ ಆಧಾರ್ ಕಾರ್ಡ್‌ಗಳು, 43 ನಕಲಿ ರೇಷನ್ ಕಾರ್ಡ್‌ಗಳು, 16 ನಕಲಿ ಪ್ಯಾನ್ ಕಾರ್ಡ್‌ಗಳು, ವಿವಿಧ ಹೆಸರುಗಳಿರುವ ವ್ಯಕ್ತಿಗಳ 35 ಜಮೀನಿನ ಆರ್.ಟಿ.ಸಿ ಮತ್ತು ಮ್ಯುಟೇಷನ್ ಪ್ರತಿಗಳು, ನಕಲಿ ಕಾರ್ಡ್‌ಗಳನ್ನು ತಯಾರಿಸಲು ಉಪಯೋಗಿಸುತ್ತಿದ್ದ 1 ಕಂಪ್ಯೂಟರ್, ಒಂದು ಪ್ರಿಂಟರ್, ಲ್ಯಾಮಿನೇಷನ್ ಯಂತ್ರ ಹಾಗೂ 12 ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.
Related Articles
Advertisement
ಆರೋಪಿಗಳು ಸಿಕ್ಕಿ ಬಿದ್ದಿದ್ದು ಹೇಗೆ?:
ಇತ್ತೀಚೆಗೆ ನೃಪತುಂಗ ರಸ್ತೆಯಲ್ಲಿರುವ ಸಿ.ಎಂ.ಎಂ. ಕೋರ್ಟ್(ಮ್ಯಾಜೆಸ್ಟ್ರೇಟ್ ಕೋರ್ಟ್)ನ ಮುಂಭಾ ಗದ ಫುಟ್‌ಪಾತ್‌ನಲ್ಲಿ 5 ರಿಂದ 6 ಜನ ಅಪರಿಚಿತ ವ್ಯಕ್ತಿಗಳು ನಕಲಿ ಆಧಾರ್ ಕಾರ್ಡ್, ಪಹಣಿ, ಮ್ಯೂಟೇಷನ್‌ಗಳನ್ನು ಇಟ್ಟುಕೊಂಡು ನ್ಯಾಯಾಲಯ ದಲ್ಲಿ ಆರೋಪಿಗಳ ಜಾಮೀನಿಗಾಗಿ ನಕಲಿ ದಾಖ ಲಾತಿಗಳನ್ನು ಸಲ್ಲಿಸಿ ಶ್ಯೂರಿಟಿ ನೀಡಿ ನ್ಯಾಯಾಲಯಕ್ಕೆ ಹಾಗೂ ನಿಜವಾದ ಆಸ್ತಿಯ ಮಾಲಿಕರಿಗೆ ಮೋಸ ಮಾಡುತ್ತಿರುವ ಬಗ್ಗೆ ಹಲಸೂರು ಗೇಟ್ ಠಾಣೆ ಪೊಲೀಸರಿಗೆ ಸುಳಿವು ಸಿಕ್ಕಿತ್ತು. ಈ ಮಾಹಿತಿ ಆಧರಿಸಿ ಕಾರ್ಯಾಚರಣೆಗೆ ಇಳಿದ ಪೊಲೀಸರು ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಇವರು ಕೊಟ್ಟ ಮಾಹಿತಿ ಆಧರಿಸಿ ಮೈಸೂರು ಬ್ಯಾಂಕ್ ಸರ್ಕಲ್‌ನಲ್ಲಿ ನಾಲ್ವರು, ಮೆಜೆಸ್ಟಿಕ್ ಸೈಬರ್ ಸೆಂಟರ್‌ವೊಂದರಲ್ಲಿ ಓರ್ವನನ್ನು ಹಾಗೂ ಇತರ ಆರೋಪಿಗಳನ್ನು ಬಂಧಿಸಲಾಗಿದೆ.