Arrested: ನಕಲಿ ಶ್ಯೂರಿಟಿ ನೀಡಿ ಕೋರ್ಟಿಗೆ ವಂಚನೆ: 13 ಜನ ಬಂಧನ

Team Udayavani, Dec 14, 2024, 10:57 AM IST

Arrested: ನಕಲಿ ಶ್ಯೂರಿಟಿ ನೀಡಿ ಕೋರ್ಟಿಗೆ ವಂಚನೆ: 13 ಜನ ಬಂಧನ

ಬೆಂಗಳೂರು: ನಕಲಿ ಶ್ಯೂರಿಟಿ ನೀಡಿ ನ್ಯಾಯಾಲಯಕ್ಕೆ ಹಾಗೂ ಆಸ್ತಿಯ ಮಾಲಿಕರಿಗೆ ಮೋಸ ಮಾಡುತ್ತಿದ್ದ ಜಾಲ ಬೇಧಿಸಿರುವ ಹಲಸೂರು ಗೇಟ್‌ ಠಾಣೆ ಪೊಲೀಸರು 13 ಮಂದಿಯನ್ನು ಬಂಧಿಸಿದ್ದಾರೆ.

ಮಂಜುನಾಥ್‌, ಆನಂದ್‌, ಇಂದ್ರೇಶ್‌, ದೊಡ್ಡಯ್ಯ, ಚಂದ್ರಶೇಖರ್‌, ಸಂತೋಷ್‌ ಕುಮಾರ್‌, ದಾದಾ ಹಯಾತ್‌ ಖಲಂದರ್‌, ಸ್ವರೂಪ್‌, ಮನೋಜ್‌, ಆನಂದ್‌ ಕುಮಾರ್‌, ಕೆಂಪೇಗೌಡ ಹಾಗೂ ವಿನಾಯಕ್‌ ಬಂಧಿತರು. ಆರೋಪಿಗಳಿಂದ ಕೃತ್ಯಕ್ಕೆ ಬಳಸುತ್ತಿದ್ದ 139 ವಿವಿಧ ಹೆಸರು ಮತ್ತು ನಂಬರ್‌ಗಳ ನಕಲಿ ಆಧಾರ್‌ ಕಾರ್ಡ್‌ಗಳು, 43 ನಕಲಿ ರೇಷನ್‌ ಕಾರ್ಡ್‌ಗಳು, 16 ನಕಲಿ ಪ್ಯಾನ್‌ ಕಾರ್ಡ್‌ಗಳು, ವಿವಿಧ ಹೆಸರುಗಳಿರುವ ವ್ಯಕ್ತಿಗಳ 35 ಜಮೀನಿನ ಆರ್‌.ಟಿ.ಸಿ ಮತ್ತು ಮ್ಯುಟೇಷನ್‌ ಪ್ರತಿಗಳು, ನಕಲಿ ಕಾರ್ಡ್‌ಗಳನ್ನು ತಯಾರಿಸಲು ಉಪಯೋಗಿಸುತ್ತಿದ್ದ 1 ಕಂಪ್ಯೂಟರ್‌, ಒಂದು ಪ್ರಿಂಟರ್‌, ಲ್ಯಾಮಿನೇಷನ್‌ ಯಂತ್ರ ಹಾಗೂ 12 ಮೊಬೈಲ್‌ ವಶಪಡಿಸಿಕೊಳ್ಳಲಾಗಿದೆ.

ಜೈಲಿನಲ್ಲಿರುವವರ ಕಡೆಯವರಿಂದ 15 ರಿಂದ 20 ಸಾವಿರ ರೂ. ಹಣ ಪಡೆಯುತ್ತಿದ್ದ ಆರೋಪಿಗಳ ಗ್ಯಾಂಗ್‌, ನಕಲಿ ಶ್ಯೂರಿಟಿ ನೀಡಿ ಅವರನ್ನು ಜಾಮೀನಿನ ಮೇಲೆ ಹೊರ ಬರಲು ಸಹಕರಿಸುತ್ತಿದ್ದರು.

ಭೂಮಿ ಜಾಲತಾಣದಿಂದ ಮಾಹಿತಿ ಪಡೆಯು ತ್ತಿದ್ದರು: ಅಸಲಿ ಆಸ್ತಿ ಮಾಲಿಕರ ವಿವರವನ್ನು ಕಂದಾಯ ಇಲಾಖೆಯ ಭೂಮಿ ಜಾಲತಾಣದಲ್ಲಿ ಪಡೆಯುತ್ತಿದ್ದ ಆರೋಪಿಗಳು, ಸರ್ವೇ ನಂಬರ್‌, ಮನೆ ವಿಳಾಸ ಸೇರಿ ಅಗತ್ಯ ಮಾಹಿತಿ ಪಡೆಯುತ್ತಿದ್ದರು. ನಕಲಿ ಆಧಾರ್‌ ಕಾರ್ಡ್‌ನಲ್ಲಿ ಆರೋಪಿಯ ಭಾವಚಿತ್ರ, ನಕಲಿ ಸಂಖ್ಯೆ ಹಾಗೂ ಅಸಲಿ ಮಾಲಿಕರ ವಿಳಾಸ ಅಳವಡಿಸುತ್ತಿದ್ದರು. ಬ್ಯಾಂಕ್‌ ಲೋನ್‌ ತೆಗೆದುಕೊಳ್ಳದ ಆಸ್ತಿ ಮಾಲಿಕರ ಪಹಣಿ ಪತ್ರವನ್ನು ಇದೇ ರೀತಿ ನಕಲಿಸುತ್ತಿದ್ದರು.

ವಿವಿಧ ಅಪರಾಧ ಪ್ರಕರಣಗಳಲ್ಲಿ ಜೈಲು ಸೇರುವ ಆರೋಪಿಗಳಿಗೆ ನ್ಯಾಯಾಲಯ ಜಾಮೀನು ನೀಡಿದಾಗ ಶ್ಯೂರಿಟಿ ಒದಗಿಸ ಬೇಕಾಗಿದೆ. ಆರೋಪಿಗಳಿಗೆ ಶ್ಯೂರಿಟಿ ನೀಡಲು ಯಾರೂ ಮುಂದೆ ಬರದಿರುವವರನ್ನು ಗುರಿಯಾಗಿಸಿ ಅವರ ಕುಟುಂಬಸ್ಥರನ್ನು ಆರೋಪಿಗಳು ಸಂಪರ್ಕಿಸುತ್ತಿದ್ದರು. ಗಾಂಧಿ ನಗರದ ಕಚೇರಿಯಲ್ಲಿ ವ್ಯವಸ್ಥಿತವಾಗಿ ದಂಧೆ ನಡೆಸುತ್ತಿದ್ದರು. 40ಕ್ಕಿಂತ ಹೆಚ್ಚು ಆರೋಪಿಗಳಿಗೆ ನಕಲಿ ಜಾಮೀನು ನೀಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಆರೋಪಿಗಳು ಸಿಕ್ಕಿ ಬಿದ್ದಿದ್ದು ಹೇಗೆ?:

ಇತ್ತೀಚೆಗೆ ನೃಪತುಂಗ ರಸ್ತೆಯಲ್ಲಿರುವ ಸಿ.ಎಂ.ಎಂ. ಕೋರ್ಟ್‌(ಮ್ಯಾಜೆಸ್ಟ್ರೇಟ್‌ ಕೋರ್ಟ್‌)ನ ಮುಂಭಾ ಗದ ಫ‌ುಟ್‌ಪಾತ್‌ನಲ್ಲಿ 5 ರಿಂದ 6 ಜನ ಅಪರಿಚಿತ ವ್ಯಕ್ತಿಗಳು ನಕಲಿ ಆಧಾರ್‌ ಕಾರ್ಡ್‌, ಪಹಣಿ, ಮ್ಯೂಟೇಷನ್‌ಗಳನ್ನು ಇಟ್ಟುಕೊಂಡು ನ್ಯಾಯಾಲಯ ದಲ್ಲಿ ಆರೋಪಿಗಳ ಜಾಮೀನಿಗಾಗಿ ನಕಲಿ ದಾಖ ಲಾತಿಗಳನ್ನು ಸಲ್ಲಿಸಿ ಶ್ಯೂರಿಟಿ ನೀಡಿ ನ್ಯಾಯಾಲಯಕ್ಕೆ ಹಾಗೂ ನಿಜವಾದ ಆಸ್ತಿಯ ಮಾಲಿಕರಿಗೆ ಮೋಸ ಮಾಡುತ್ತಿರುವ ಬಗ್ಗೆ ಹಲಸೂರು ಗೇಟ್‌ ಠಾಣೆ ಪೊಲೀಸರಿಗೆ ಸುಳಿವು ಸಿಕ್ಕಿತ್ತು. ಈ ಮಾಹಿತಿ ಆಧರಿಸಿ ಕಾರ್ಯಾಚರಣೆಗೆ ಇಳಿದ ಪೊಲೀಸರು ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಇವರು ಕೊಟ್ಟ ಮಾಹಿತಿ ಆಧರಿಸಿ ಮೈಸೂರು ಬ್ಯಾಂಕ್‌ ಸರ್ಕಲ್‌ನಲ್ಲಿ ನಾಲ್ವರು, ಮೆಜೆಸ್ಟಿಕ್‌ ಸೈಬರ್‌ ಸೆಂಟರ್‌ವೊಂದರಲ್ಲಿ ಓರ್ವನನ್ನು ಹಾಗೂ ಇತರ ಆರೋಪಿಗಳನ್ನು ಬಂಧಿಸಲಾಗಿದೆ.

ಟಾಪ್ ನ್ಯೂಸ್

Uttarakhand: ಹಾಲಿ ಶಾಸಕ-ಮಾಜಿ ಶಾಸಕನ ಫೈಟ್‌, ಪರಸ್ಪರ ಫೈರಿಂಗ್‌!

Uttarakhand: ಹಾಲಿ ಶಾಸಕ-ಮಾಜಿ ಶಾಸಕನ ಫೈಟ್‌, ಪರಸ್ಪರ ಫೈರಿಂಗ್‌!

Supreme Court: “ಸನಾತನ ನಿರ್ಮೂಲನೆ’ ಹೇಳಿಕೆ: ಉದಯನಿಧಿಗೆ ಸುಪ್ರೀಂ ರಿಲೀಫ್

Supreme Court: “ಸನಾತನ ನಿರ್ಮೂಲನೆ’ ಹೇಳಿಕೆ: ಉದಯನಿಧಿಗೆ ಸುಪ್ರೀಂ ರಿಲೀಫ್

ನನ್ನದೂ ಭಾರತೀಯ ಡಿಎನ್‌ಎ: ಇಂಡೋನೇಷ್ಯಾ ಅಧ್ಯಕ್ಷ ಸುಬೈಂತೋ

ನನ್ನದೂ ಭಾರತೀಯ ಡಿಎನ್‌ಎ: ಇಂಡೋನೇಷ್ಯಾ ಅಧ್ಯಕ್ಷ ಸುಬೈಂತೋ

Delhi ಕುಡಿವ ನೀರಿಗೆ ಹರ್ಯಾಣ ಸರ್ಕಾರ ವಿಷ: ಕೇಜ್ರಿ ಆರೋಪ

Delhi ಕುಡಿವ ನೀರಿಗೆ ಹರ್ಯಾಣ ಸರ್ಕಾರ ವಿಷ: ಕೇಜ್ರಿ ಆರೋಪ

ಆತ್ಮಹ*ತ್ಯೆ ಮಾಡಿಕೊಂಡ ವ್ಯಕ್ತಿಯ ವೀರ್ಯ ಸಂಗ್ರಹಕ್ಕೆ ದೆಹಲಿ ಹೈಕೋರ್ಟ್‌ ಒಪ್ಪಿಗೆ

ಆತ್ಮಹ*ತ್ಯೆ ಮಾಡಿಕೊಂಡ ವ್ಯಕ್ತಿಯ ವೀರ್ಯ ಸಂಗ್ರಹಕ್ಕೆ ದೆಹಲಿ ಹೈಕೋರ್ಟ್‌ ಒಪ್ಪಿಗೆ

PM Modi: ಏಕ ಚುನಾವಣೆ ಕುರಿತ ಚರ್ಚೆಯಲ್ಲಿ ಯುವಜನತೆ ಪಾಲ್ಗೊಳ್ಳಲಿ

PM Modi: ಏಕ ಚುನಾವಣೆ ಕುರಿತ ಚರ್ಚೆಯಲ್ಲಿ ಯುವಜನತೆ ಪಾಲ್ಗೊಳ್ಳಲಿ

Wedding: ಫೆ.7ರಂದು ಗೌತಮ್‌ ಅದಾನಿ ಪುತ್ರ ಜೀತ್‌ ಸರಳ ವಿವಾಹ

Wedding: ಫೆ.7ರಂದು ಗೌತಮ್‌ ಅದಾನಿ ಪುತ್ರ ಜೀತ್‌ ಸರಳ ವಿವಾಹ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6

Bengaluru: ಗಮನ ಬೇರೆಡೆ ಸೆಳೆದು 20 ಕೆ.ಜಿ. ಬೆಳ್ಳಿ ಕಳವು

Bengaluru: ಬಾಂಗ್ಲಾ ಮಹಿಳೆ ಅತ್ಯಾಚಾರ, ಹತ್ಯೆ ಪ್ರಕರಣ; ಒಬ್ಬ ವಶಕ್ಕೆ 

Bengaluru: ಬಾಂಗ್ಲಾ ಮಹಿಳೆ ಅತ್ಯಾಚಾರ, ಹತ್ಯೆ ಪ್ರಕರಣ; ಒಬ್ಬ ವಶಕ್ಕೆ 

Robbery‌ Case: ಮನೆಗೆ ನುಗ್ಗಿ ಪಿಸ್ತೂಲ್ ತೋರಿಸಿ ದರೋಡೆ

Robbery‌ Case: ಮನೆಗೆ ನುಗ್ಗಿ ಪಿಸ್ತೂಲ್ ತೋರಿಸಿ ದರೋಡೆ

Bengaluru: ಕೇಬಲ್‌ ವೈರ್‌ಗೆ ದ್ವಿಚಕ್ರ ವಾಹನ ಸವಾರ ಬಲಿ!

Bengaluru: ಕೇಬಲ್‌ ವೈರ್‌ಗೆ ದ್ವಿಚಕ್ರ ವಾಹನ ಸವಾರ ಬಲಿ!

K.N. Jagadish: ಹತ್ಯೆಗೆ ಯತ್ನ; ಜಗದೀಶ್‌ ಸೇರಿ ನಾಲ್ವರ ಸೆರೆ

K.N. Jagadish: ಹತ್ಯೆಗೆ ಯತ್ನ; ಜಗದೀಶ್‌ ಸೇರಿ ನಾಲ್ವರ ಸೆರೆ

MUST WATCH

udayavani youtube

ಅಲ್ಲಲ್ಲಿ ನಡೆಯುತ್ತಿರುವ ಗೋ ಹಿಂಸೆ ಖಂಡಿಸುತ್ತೇವೆ :ಪೇಜಾವರ ಶ್ರೀ

udayavani youtube

ಉಡುಪಿ ಶ್ರೀ ಕೃಷ್ಣ ನಗರಿಯ ಡಿಸೆಂಬರ್ ತಿಂಗಳಿನ ಮಾಸ ವೈಭವ

udayavani youtube

ಲಾಯರ್ ಜಗದೀಶ್ ಮೇಲೆ 40 ಜನರಿಂದ ಹ*ಲ್ಲೆ?

udayavani youtube

ಕಡಿಮೆ ಜಾಗದಲ್ಲಿ ಉತ್ತಮ ಅನಾನಸ್ ಕೃಷಿ ಮಾಡಲು ಇಲ್ಲಿದೆ ಮಾಹಿತಿ

udayavani youtube

ಮಂಗಳೂರು | ಸ್ಥಳೀಯ ಮನೆಯಂಗಳಕ್ಕೆ ಹರಿಯುತ್ತಿರುವ ಡ್ರೈನೇಜ್ ಕೊಳಚೆ

ಹೊಸ ಸೇರ್ಪಡೆ

Uttarakhand: ಹಾಲಿ ಶಾಸಕ-ಮಾಜಿ ಶಾಸಕನ ಫೈಟ್‌, ಪರಸ್ಪರ ಫೈರಿಂಗ್‌!

Uttarakhand: ಹಾಲಿ ಶಾಸಕ-ಮಾಜಿ ಶಾಸಕನ ಫೈಟ್‌, ಪರಸ್ಪರ ಫೈರಿಂಗ್‌!

Supreme Court: “ಸನಾತನ ನಿರ್ಮೂಲನೆ’ ಹೇಳಿಕೆ: ಉದಯನಿಧಿಗೆ ಸುಪ್ರೀಂ ರಿಲೀಫ್

Supreme Court: “ಸನಾತನ ನಿರ್ಮೂಲನೆ’ ಹೇಳಿಕೆ: ಉದಯನಿಧಿಗೆ ಸುಪ್ರೀಂ ರಿಲೀಫ್

ನನ್ನದೂ ಭಾರತೀಯ ಡಿಎನ್‌ಎ: ಇಂಡೋನೇಷ್ಯಾ ಅಧ್ಯಕ್ಷ ಸುಬೈಂತೋ

ನನ್ನದೂ ಭಾರತೀಯ ಡಿಎನ್‌ಎ: ಇಂಡೋನೇಷ್ಯಾ ಅಧ್ಯಕ್ಷ ಸುಬೈಂತೋ

Delhi ಕುಡಿವ ನೀರಿಗೆ ಹರ್ಯಾಣ ಸರ್ಕಾರ ವಿಷ: ಕೇಜ್ರಿ ಆರೋಪ

Delhi ಕುಡಿವ ನೀರಿಗೆ ಹರ್ಯಾಣ ಸರ್ಕಾರ ವಿಷ: ಕೇಜ್ರಿ ಆರೋಪ

ಆತ್ಮಹ*ತ್ಯೆ ಮಾಡಿಕೊಂಡ ವ್ಯಕ್ತಿಯ ವೀರ್ಯ ಸಂಗ್ರಹಕ್ಕೆ ದೆಹಲಿ ಹೈಕೋರ್ಟ್‌ ಒಪ್ಪಿಗೆ

ಆತ್ಮಹ*ತ್ಯೆ ಮಾಡಿಕೊಂಡ ವ್ಯಕ್ತಿಯ ವೀರ್ಯ ಸಂಗ್ರಹಕ್ಕೆ ದೆಹಲಿ ಹೈಕೋರ್ಟ್‌ ಒಪ್ಪಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.