Advertisement

ಸಚಿವ ಈಶ್ವರಪ್ಪ ವಿರುದ್ಧ ಷಡ್ಯಂತ್ರ: ಅಭಿಮಾನಿ ಬಳಗ

04:41 PM Apr 17, 2022 | Team Udayavani |

ಲಕ್ಷ್ಮೇಶ್ವರ: ಸದಾ ಕ್ರಿಯಾಶೀಲರಾಗಿ ನೇರ, ದಿಟ್ಟ ನಡೆ ನುಡಿಗಳಿಂದ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವ ಸಚಿವ ಕೆ.ಎಸ್‌.ಈಶ್ವರಪ್ಪ ಅವರನ್ನು ಗುತ್ತಿಗೆದಾರ ಸಂತೋಷ ಸಾವಿನ ಪ್ರಕರಣದಲ್ಲಿ ಸಿಲುಕಿಸುವ ಷಡ್ಯಂತ್ರ ನಡೆದಿದೆ. ಈ ಸುಳ್ಳು ಆರೋಪಕ್ಕೆ ಸಚಿವರು ರಾಜೀನಾಮೆ ನೀಡಬಾರದು ಹಾಗೂ ಸರಕಾರ ಯಾವುದೇ ಕಾರಣಕ್ಕೂ ಈಶ್ವರಪ್ಪನವರ ರಾಜೀನಾಮೆ ನೀಡುವಂತೆ ಒತ್ತಾಯಿಸಬಾರದೆಂದು ಆಗ್ರಹಿಸಿ ಪಟ್ಟಣದಲ್ಲಿ ಕೆ.ಎಸ್‌.ಈಶ್ವರಪ್ಪನವರ ಅಭಿಮಾನಿ ಬಳಗ ಒತ್ತಾಯಿಸಿತು.

Advertisement

ಪಟ್ಟಣದಲ್ಲಿ ನಡೆದ ಈಶ್ವರಪ್ಪ ಅಭಿಮಾನಿಗಳ ಸಭೆಯಲ್ಲಿ ಮಾತನಾಡಿದ ಕುರುಬ ಸಮಾಜದ ತಾಲೂಕು ಅಧ್ಯಕ್ಷ ನಿಂಗಪ್ಪ ಬನ್ನಿ, ಪುರಸಭೆ ಮಾಜಿ ಸದಸ್ಯ ರಾಮಣ್ಣ ಉಳ್ಳಟ್ಟಿ, ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆಗೂ ಸಚಿವರಿಗೂ ಯಾವುದೇ ರೀತಿಯ ಸಂಬಂಧವಿಲ್ಲ. ಆದರೂ, ವಿರೋಧ ಪಕ್ಷಗಳು ಅವರ ಮೇಲೆ ವಿನಾಕಾರಣ ಆರೋಪ ಮಾಡುತ್ತಿರುವುದು ಖಂಡನೀಯ. ಆತ್ಮಹತ್ಯೆ ಮಾಡಿಕೊಂಡ ಸಂತೋಷ ಬಿಜೆಪಿ ಕಾರ್ಯಕರ್ತನಾಗಿದ್ದ ಎಂದು ಪ್ರಚಾರ ಮಾಡುತ್ತಿರುವುದು ಸಹ ಜನರಿಗೆ ತಪ್ಪು ಮಾಹಿತಿಯನ್ನು ನೀಡುವಂತಾಗಿದೆ.

ಮೂಲತಃ ಆತ ಕಾಂಗ್ರೆಸ್‌ ಕಾರ್ಯಕರ್ತನಾಗಿದ್ದ ಎನ್ನುವುದನ್ನು ಸಮಾಜಕ್ಕೆ ತಿಳಿಸುವ ಕಾರ್ಯವಾಗಬೇಕು. ಯಾವುದೇ ತಪ್ಪು ಮಾಡದ ಸಚಿವರ ಮೇಲೆ ವಿನಾಕಾರಣ ಗೂಬೆ ಕೂರಿಸುತ್ತಿರುವ ವಿರೋಧ ಪಕ್ಷಗಳು ಬ್ಲಾಕ್‌ಮೇಲ್‌ ತಂತ್ರ ಅನುಸರಿಸುತ್ತಿವೆ ಎಂದು ಆರೋಪಿಸಿದರು.

ಯುವ ಮುಖಂಡ ಹಾಲಪ್ಪ ಸೂರಣಗಿ ಮಾತನಾಡಿ, ಸದಾ ಪಕ್ಷ ನಿಷ್ಠೆ ಕಾಪಾಡಿಕೊಂಡು ಬಂದಿರುವ ಪ್ರಾಮಾಣಿಕ ರಾಜಕಾರಣಿ, ಆರ್‌ಎಸ್‌ಎಸ್‌ ಕಾರ್ಯಕರ್ತರಾದ ಸಚಿವ ಈಶ್ವರಪ್ಪನವರ ಮೇಲೆ ಆರೋಪ ಮಾಡುವುದನ್ನು ವಿರೋಧ ಪಕ್ಷಗಳು ನಿಲ್ಲಿಸಬೇಕು. ಕಾಂಗ್ರೆಸ್‌ ಅವಧಿಯಲ್ಲಿ ಇಂತಹ ಅನೇಕ ಘಟನೆಗಳು ನಡೆದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ವಿನಾಕಾರಣ ಈಶ್ವರಪ್ಪನವರನ್ನು ಅಪರಾಧ ಎಂದು ಹೇಳುವುದು ತಪ್ಪು. ಆತ್ಮಹತ್ಯೆ ಮಾಡಿಕೊಳ್ಳಲು ಇರುವ ಕಾರಣವೇನು? ಆತ ನಡೆದುಕೊಂಡ ರೀತಿ ಇತ್ಯಾದಿಗಳನ್ನು ಸರಿಯಾಗಿ ಪರಿಶೀಲನೆ ಮಾಡದೆ ವಿರೋಧ ಪಕ್ಷಗಳು ಸಚಿವರ ರಾಜೀನಾಮೆಗೆ ಒತ್ತಡ ಹೇರುತ್ತಿರುವುದನ್ನು ನಿಲ್ಲಿಸಬೇಕು ಎಂದರು.

ಈ ಸಂದರ್ಭದಲ್ಲಿ ಪರಶುರಾಮ ಇಮ್ಮಡಿ, ಛಾಯಪ್ಪ ಬಸಾಪೂರ, ರಾಮಣ್ಣ ರಿತ್ತಿ, ಗೋವಿಂದಪ್ಪ ಶರಸೂರಿ, ಸಿದ್ದು ದುರ್ಗಣ್ಣವರ, ಕುಮಾರ ಬೆಟಗೇರಿ, ಚಿದಾನಂದ ಮಲ್ಲೂರ, ನಿಂಗಪ್ಪ ಬಂಕಾಪುರ, ಉಮೇಶ ಡೊಳ್ಳಿನ, ನಿಂಗನಗೌಡ ಮರಲಿಂಗನಗೌಡ್ರ, ರಮೇಶ ಜೋಗೇರ, ಮುದಕಣ್ಣ ಗಾಡದ, ಭೀಮಣ್ಣ ಹೂಲಿ, ನಿಂಗಪ್ಪ ನೀಲಪ್ಪನವರ, ರಾಮು ಗೊಜಗೊಜಿ, ನಾಗನಗೌಡ ಪಾಟೀಲ ಇತರರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next