Advertisement
ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ತಮ್ಮದೇ ಛಾಪು ಮೂಡಿಸಿರುವ ಹರಿಪ್ರಸಾದ್ ಕಾರ್ಯಕ್ರಮ ನೀಡುವುದಕ್ಕಾಗಿ ಸಾಕಷ್ಟು ಸಲ ಬೆಂಗಳೂರಿಗೆ ಬಂದಿದ್ದಾರೆ. ಹಾಗೆ ಬಂದು ಹೋದಾಗಲೆಲ್ಲ, ಕೊಳಲ ಗುಂಗಿ ನಲ್ಲಿ ತೇಲಿಸಿಯೇ ಹೋಗಿರುವುದು ವಿಶೇಷ. ಇದೀಗ ಮತ್ತೆ ಅವರು, ಬೆಂಗಳೂರಿನಲ್ಲಿ ಶೋಗೆ ಸಜ್ಜಾಗಿದ್ದಾರೆ. ತಣ್ಣನೆ ಚಳಿಯಲ್ಲಿ, ಮೈಮರೆಸುವ ಕೊಳಲಿನ ದನಿ, ಹೃದಯಕ್ಕೆ ಇಳಿಸುವ ಆ ಮಧುರ ಗಳಿಗೆಗೆ ಸಾಕ್ಷಿಯಾಗುವ ಸರದಿ ನಮ್ಮದಷ್ಟೇ.
ಎಲ್ಲಿ?: ಫೋರಂ ಶಾಂತಿನಿಕೇತನ ಮಾಲ್, ವೈಟ್‌ಫೀಲ್ಡ್
ಪ್ರವೇಶ: 699 ರೂ. ಮೇಲ್ಪಟ್ಟು