Advertisement

Ex PM ಚೌಧರಿ ಚರಣ್ ಸಿಂಗ್ ಅವರಿಗೆ ಭಾರತ ರತ್ನ: ಮೊಮ್ಮಗ ಜಯಂತ್ ಹರ್ಷ

05:57 PM Feb 09, 2024 | Team Udayavani |

ಹೊಸದಿಲ್ಲಿ: ಮಾಜಿ ಪ್ರಧಾನಿ ದಿವಂಗತ ಚೌಧರಿ ಚರಣ್ ಸಿಂಗ್, ಪಿ.ವಿ.ನರಸಿಂಹರಾವ್  ಮತ್ತು ಎಂ. ಎಸ್ ಸ್ವಾಮಿನಾಥನ್ ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ಘೋಷಿಸಿರುವ ಕುರಿತು ಆರ್ ಎಲ್ ಡಿ ನಾಯಕ,ಚೌಧರಿ ಚರಣ್ ಸಿಂಗ್ ಅವರ ಮೊಮ್ಮಗ ಜಯಂತ್ ಚೌಧರಿ ಹರ್ಷ ವ್ಯಕ್ತ ಪಡಿಸಿದ್ದಾರೆ.

Advertisement

“ಇದು ನನಗೆ ಒಂದು ದೊಡ್ಡ ದಿನ ಮತ್ತು ಭಾವನಾತ್ಮಕ ಕ್ಷಣವಾಗಿದೆ. ನಾನು ರಾಷ್ಟ್ರಪತಿ, ಕೇಂದ್ರ ಸರಕಾರ ಮತ್ತು ಪ್ರಧಾನಿ ಮೋದಿಯವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಏಕೆಂದರೆ ಇದು ಅವರ ದೂರದೃಷ್ಟಿಯ ಭಾಗವಾಗಿದೆ” ಎಂದು ಹೇಳಿದ್ದಾರೆ.

”ಮೂವರಿಗೆ ಪ್ರಶಸ್ತಿಗಳನ್ನು ಘೋಷಿಸಲಾಗಿದ್ದು, ಅವರ ಭಾವನೆಗಳೊಂದಿಗೆ ಜನರು ಸಂಪರ್ಕ ಹೊಂದಿದ್ದಾರೆ” ಎಂದು ಜಯಂತ್ ಚೌಧರಿ ಹೇಳಿದ್ದಾರೆ.

ಇದನ್ನೂ ಓದಿ: PVN, ಸಿಂಗ್‌, ಸ್ವಾಮಿನಾಥನ್‌ ಗೆ ಭಾರತ ರತ್ನ ಘೋಷಣೆ ಸ್ವಾಗತಿಸುವೆ: ಸೋನಿಯಾ ಗಾಂಧಿ

ಶೀಘ್ರ ಎನ್ ಡಿಎ ಮೈತ್ರಿಕೂಟ ಸೇರ್ಪಡೆ ಸಾಧ್ಯತೆ

Advertisement

ಉತ್ತರ ಪ್ರದೇಶ ದಲ್ಲಿ ಬಿಜೆಪಿ ಪರ ಭಾರೀ ಅಲೆ ಇರುವುದು ಹಲವು ಚುನಾವಣ ಪೂರ್ವ ಸಮೀಕ್ಷೆಗಳಲ್ಲಿ ಬಹಿರಂಗ ವಾಗಿರುವ ಕಾರಣ ಅಜಿತ್ ಚೌಧರಿ ಅವರ ಪುತ್ರ ಜಯಂತ್ ಇಂಡಿ ಮೈತ್ರಿಕೂಟ ತೊರೆದು ಎನ್ ಡಿಎ ಮೈತ್ರಿ ಕೂಟ ಸೇರ್ಪಡೆಯಾಗುವ ಎಲ್ಲಾ ಸಾಧ್ಯತೆಗಳಿವೆ. ಸಮಾಜವಾದಿ ಪಕ್ಷದೊಂದಿಗೆ ಸೀಟು ಹಂಚಿಕೆ ಮಾತುಕತೆಯನ್ನೂ ಅಂತಿಮಗೊಳಿಸಿದ್ದ ಜಯಂತ್ ಬಿಜೆಪಿ ಮೈತ್ರಿ ಮಾಡಿಕೊಳ್ಳುವ ಎಲ್ಲಾ ಸಾಧ್ಯತೆಗಳಿವೆ.

ಅಜಿತ್ ಸಿಂಗ್ 1996 ರಲ್ಲಿ ಕಾಂಗ್ರೆಸ್ ಪಕ್ಷ ಮತ್ತು ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ‘ಭಾರತೀಯ ಕಿಸಾನ್ ಕಮ್ಗಾರ್ ಪಕ್ಷವನ್ನು ಸ್ಥಾಪಿಸಿದ್ದರು. 1999 ರಲ್ಲಿ, ಅವರು ರಾಷ್ಟ್ರೀಯ ಲೋಕದಳ ಎಂಬ ಹೆಸರಿನೊಂದಿಗೆ ತಮ್ಮ ಪಕ್ಷವನ್ನು ಮರುಪ್ರಾರಂಭಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next