Advertisement

ಮಠ-ಮಂದಿರಗಳಲ್ಲಿ ಚಾತುರ್ಮಾಸ್ಯ ಸಂಭ್ರಮ

03:51 PM Jul 23, 2021 | Team Udayavani |

ಆಷಾಢ ಮಾಸದ ಹುಣ್ಣಿಮೆ ದಿನವಾದ ಜು.24ರಂದು ಗುರು ಪೂರ್ಣಿಮೆಯನ್ನು ಎಲ್ಲ ಮಠ-ಮಂದಿರಗಳಲ್ಲಿ ಆಚರಿಸಿ ನಾಡಿನ ಬಹುತೇಕ ಮಠಾಧೀಶರು ಚಾತುರ್ಮಾಸ ವ್ರತ ಪ್ರಾರಂಭ ಮಾಡುತ್ತಾರೆ. ಶೃಂಗೇರಿ, ಉಡುಪಿ, ಸ್ವರ್ಣವಲ್ಲೀ, ಸೋದೆ, ರಾಮಚಂದ್ರಾಪುರ, ಕರ್ಕಿ, ಚಿತ್ರಾಪುರ ಸೇರಿ ವಿವಿಧ ಮಠಾಧೀಶರು ವ್ಯಾಸ ಪೂಜೆಯೊಂದಿಗೆ ವ್ರತ ಸಂಕಲ್ಪ

Advertisement

ಕೈಗೊಳ್ಳಲಿದ್ದಾರೆ. ಸ್ವಾಮೀಜಿಗಳು ಚಾತುರ್ಮಾಸ್ಯದ ಅವಧಿಯಲ್ಲಿ ವಿವಿಧ ಧಾರ್ಮಿಕ, ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಕೈಗೊಳ್ಳಲಿದ್ದಾರೆ. ಈ ಕುರಿತ ವರದಿ ಇಲ್ಲಿದೆ…

ಬೆಂಗಳೂರಿನಲ್ಲಿ  ಪೇಜಾವರ ಶ್ರೀ ವ್ರತ :

ಉಡುಪಿ: ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಜು. 28ರಿಂದ ಚಾತುರ್ಮಾಸ ವ್ರತ ಕೈಗೊಳ್ಳುವರು. ಪೇಜಾವರ ಮಠದ ಹಿಂದಿನ ಪೀಠಾಧಿಪತಿ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಮೂಲ ವೃಂದಾವನವನ್ನು ಇಲ್ಲಿ ನಿರ್ಮಿಸಿದ ಬಳಿಕ ಶಿಷ್ಯರು ಅದೇ ಸ್ಥಳದಲ್ಲಿ ಮೊದಲ ಬಾರಿ ಚಾತುರ್ಮಾಸ ವ್ರತವನ್ನು ಕೈಗೊಳ್ಳುವರು. ಗುರುಗಳು ಅನೇಕ ಬಾರಿ ಇದೇ ಸ್ಥಳದಲ್ಲಿ ಚಾತುರ್ಮಾಸ ವ್ರತ ಕೈಗೊಂಡಿದ್ದರು. ಸೆ.20ರಂದು ವ್ರತ ಸಮಾಪನಗೊಳ್ಳಲಿದೆ.

ಸೋದೆಯಲ್ಲಿ ಉಭಯ  ಶ್ರೀಗಳ ಚಾತುರ್ಮಾಸ್ಯ  :

Advertisement

ಉಡುಪಿ: ಶಿರಸಿ ಸಮೀಪದ ಸೋಂದಾ ವಾದಿರಾಜ ಮಠದ ಶ್ರೀವಾದಿ ರಾಜ ಸ್ವಾಮಿಗಳ ಮೂಲವೃಂದಾವನ ಸನ್ನಿಧಿಯಲ್ಲಿ ಸೋದೆ ಮಠದ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು ಮತ್ತು ಶೀರೂರು ಮಠದ ಶ್ರೀವೇದ ವರ್ಧನ ತೀರ್ಥ ಶ್ರೀಪಾದರು ಜು.24ರಂದು ಚಾತು ರ್ಮಾಸ ವ್ರತ ಕೈಗೊಳ್ಳು ವರು. ಸೆ.20ರಂದು ಚಾತು ರ್ಮಾಸ ವ್ರತ ಸಮಾಪನಗೊಳ್ಳಲಿದೆ. ಈ ಅವಧಿಯಲ್ಲಿ ಸ್ವಾಮೀಜಿ ಯವರಿಂದ ವಾದಿರಾಜರ ವೃಂದಾವನಕ್ಕೆ ವಿಶೇಷ ಪೂಜೆ, ವಿವಿಧ ಅನುಷ್ಠಾನಗಳು, ಉಪನ್ಯಾಸಗಳು ನಡೆಯಲಿವೆ. ಶೀರೂರು ಸ್ವಾಮೀಜಿಯವರ ಪ್ರಥಮ ಚಾತುರ್ಮಾಸ ವ್ರತ ಇದಾಗಿದೆ.

24 ರಿಂದ ಎಡನೀರು ಶ್ರೀಗಳ ಮೊದಲ ಚಾತುರ್ಮಾಸ್ಯ :

ಕಾಸರಗೋಡು: ಜಗದ್ಗುರು ಶ್ರೀ ಶಂಕರ ಭಗವತ್ಪಾದರ ಪ್ರಧಾನ ನಾಲ್ಕು ಶಿಷ್ಯರಲ್ಲೊಬ್ಬರಾದ ಶ್ರೀ ತೋಟ ಕಾಚಾರ್ಯರ ಪರಂಪರೆಯ ಶ್ರೀ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಮೊದಲ ಚಾತುರ್ಮಾಸ ವ್ರತವು ಎಡನೀರು ಮಠದಲ್ಲಿ ಜು.24ರಂದು ಆರಂಭ ಗೊಂಡು ಸೆ.20ರಂದು ಸಂಪನ್ನಗೊ ಳ್ಳಲಿದೆ. ಆ.26 ರಂದು ಬ್ರಹೆ¾$çಕ್ಯ ಶ್ರೀ ಕೇಶವಾನಂದ ಭಾರತೀ ಶ್ರೀ ಪಾದಂಗಳವರ ಆರಾಧನಾ ಮಹೋತ್ಸವವೂ ಜರಗಲಿದೆ. ಈ ದಿನಗಳಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದೆ.

ಉಡುಪಿಯಲ್ಲಿ 6 ಸ್ವಾಮೀಜಿ ಚಾತುರ್ಮಾಸ ವ್ರತ :

ಉಡುಪಿ: ಶ್ರೀಕೃಷ್ಣಮಠದಲ್ಲಿ ಜು.24ರಂದು ಗುರುಪೂರ್ಣಿಮೆ ದಿನ ಪರ್ಯಾಯ ಅದ ಮಾರು ಮಠದ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಚಾತುರ್ಮಾಸ್ಯ  ಕೈಗೊಳ್ಳುವರು. ಅದಮಾರು ಮಠದ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು, ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು, ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು, ಶ್ರೀವಿದ್ಯಾರಾಜೇಶ್ವರತೀರ್ಥ ಶ್ರೀಪಾದರು, ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರು ಚಾತುರ್ಮಾಸ ವ್ರತ ಕೈಗೊಳ್ಳುವರು. ಅನಂತನ ಚತುರ್ದಶಿ ಮರುದಿನ ಹುಣ್ಣಿಮೆ ಸೆ.20ರಂದು ಚಾತುರ್ಮಾಸ ವ್ರತ ಸಮಾಪನ ಗೊಳ್ಳಲಿದೆ. ಈ ಅವಧಿಯಲ್ಲಿ ವಿವಿಧ ಅನುಷ್ಠಾನ ಗಳು, ಉಪನ್ಯಾಸಗಳು ನಡೆಯಲಿವೆ.

 

ಬೆಂಗಳೂರಿನಲ್ಲಿ ಭಂಡಾರಕೇರಿ ಶ್ರೀ ವ್ರತ :

ಉಡುಪಿ: ಭಂಡಾರಕೇರಿ ಮಠದ ಶ್ರೀವಿದ್ಯೆàಶತೀರ್ಥ ಶ್ರೀಪಾದರು ಬೆಂಗಳೂರು ಗಿರಿನಗರದ ಭಾಗವತಾ ಶ್ರಮದಲ್ಲಿ ಜು. 28ರಿಂದ ಚಾತುರ್ಮಾಸ್ಯ  ಕೈಗೊಳ್ಳುವರು. ಸೆ.20ರಂದು ವ್ರತ ಸಮಾಪನ ನಡೆಯಲಿದೆ. ಈ ಅವಧಿಯಲ್ಲಿ ವಿಶೇಷ ಪೂಜೆ, ಅನುಷ್ಠಾನ, ವಿವಿಧೆಡೆಗಳಲ್ಲಿ ಉಪನ್ಯಾಸ, ಪರ್ವದಿನಗಳ ಪೂಜೆಗಳು ನಡೆಯಲಿವೆ.

ಚಿತ್ರಾಪುರ ಮಠದಲ್ಲಿ  ಶ್ರೀಗಳ ಸಂಕಲ್ಪ :

ಸುರತ್ಕಲ್‌: ಸುರತ್ಕಲ್‌ ಕುಳಾಯಿ ಸಮೀಪದ ಚಿತ್ರಾಪುರ ಮಠದಲ್ಲಿ ಶ್ರೀವಿದ್ಯೆàಂದ್ರತೀರ್ಥ ಶ್ರೀಪಾದರು ಜು. 28ರಂದು ಚಾತುರ್ಮಾಸ ವ್ರತ ಕೈಗೊಳ್ಳುವರು. ಸೆ. 20ರಂದು ಅನಂತನ ವ್ರತದ ಮರುದಿನ ಚಾತುರ್ಮಾಸ ವ್ರತ ಮುಕ್ತಾಯಗೊಳ್ಳಲಿದೆ. ಈ ಅವಧಿಯಲ್ಲಿ ಚಿತ್ರಾಪುರ ದೇವಸ್ಥಾನ ಮತ್ತು ಮಠದಲ್ಲಿ ವಿಶೇಷ ಪೂಜೆ, ಅನುಷ್ಠಾನ, ಉಪನ್ಯಾಸ, ಗಣೇಶ ಚತುರ್ಥಿ, ನಾಗರ ಪಂಚಮಿ, ಕೃಷ್ಣಾಷ್ಟಮಿ ಮೊದಲಾದ ಪರ್ವದಿನಗಳ ಪೂಜೆಗಳು ನಡೆಯಲಿವೆ.

ಕಾಶೀ ಮಠಾಧೀಶರು :

ಕಾಶೀ ಮಠಾಧೀಶರಾದ ಶ್ರೀಸಂಯಮೀಂದ್ರ ತೀರ್ಥ ಸ್ವಾಮೀಜಿ ಕೊಚ್ಚಿಯ ಗೋಶ್ರೀಪುರಂ ತಿರುಮಲ ದೇವಸ್ಥಾನದ‌ಲ್ಲಿ ಚಾತುರ್ಮಾಸ ವ್ರತ  ಆರಂಭಿಸಲಿದ್ದು  ಜು.28ರಂದು ತಪ್ತಮುದ್ರಾಧಾರಣೆ ನಡೆಸುವರು.

ಶ್ರೀ ವಾಮನಾಶ್ರಮ ಶ್ರೀಗಳ 18ನೇ ಚಾತುರ್ಮಾಸ್ಯ ವ್ರತ  :

ಉಡುಪಿ: ಇಲ್ಲಿನ ಪುತ್ತೂರು ಸಂತೆಕಟ್ಟೆಯ ವೈಶ್ಯವಾಣಿ ಸಮಾಜದ ಶ್ರೀಲಕ್ಷ್ಮೀ ವೇಂಕಟೇಶ ದೇವಸ್ಥಾನದಲ್ಲಿ ವೈಶ್ಯ ಕುಲ ಗುರುವರ್ಯ ಶ್ರೀ ವಾಮನಾ ಶ್ರಮ ಸ್ವಾಮೀಜಿಯವರ 18ನೇ ಚಾತುರ್ಮಾಸ ವ್ರತ ಜು.24ರಂದು ಆರಂಭಗೊಳ್ಳಲಿದೆ. ಸೆ.20ರಂದು ಚಾತುರ್ಮಾಸ ವ್ರತ ಸಂಪನ್ನಗೊಳ್ಳಲಿದೆ. ಈ ಅವಧಿಯಲ್ಲಿ ಪೂಜೆ, ಉಪನ್ಯಾಸ, ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ಹಂಪಿ ವಿದ್ಯಾರಣ್ಯ ಶ್ರೀ ಚಾತುರ್ಮಾಸ್ಯ :

ಬಳ್ಳಾರಿ: ಜಿಲ್ಲೆಯ ಐತಿಹಾಸಿಕ ಹಂಪಿಯ ವಿದ್ಯಾರಣ್ಯ ಮಠದ ಶ್ರೀ ವಿದ್ಯಾರಣ್ಯ ಭಾರತೀ ಸ್ವಾಮೀಜಿಗಳು ಜು.24 ಗುರುಪೌರ್ಣಿಮೆ ದಿನದಂದು ವ್ರತ ಆರಂಭಿಸಲಿದ್ದಾರೆ. ಸುಮಾರು 4ತಿಂಗಳ ಕಾಲ ಶ್ರೀಗಳು, ಮಠದಲ್ಲೇ ಇರಲಿದ್ದು, ಲೋಕಸಂಚಾರ ನಡೆಸುವುದಿಲ್ಲ. ಹಂಪಿಯ ಆರಾಧ್ಯ ದೈವ ಶ್ರೀ ವಿರೂಪಾಕ್ಷೇಶ್ವರ, ಪಂಪಾಂಭಿಕೆ ದೇವಿ ಹಾಗೂ ಭುವನೇ ಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

28ರಿಂದ ವ್ರತಾರಂಭ  :

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಶ್ರೀ ಸಂಪುಟ ನರಸಿಂಹ ಸ್ವಾಮಿ ಸುಬ್ರಹ್ಮಣ್ಯ ಮಠದ ಮಠಾಧೀಶರಾದ ವಿದ್ಯಾಪ್ರಸನ್ನ ಶ್ರೀ ಪಾದರು  ತಮ್ಮ 25ನೇ ಚಾತುರ್ಮಾಸ ವ್ರತವನ್ನು ಜು.28ರಂದು  ಆರಂಭಿಸಲಿ ದ್ದಾರೆ. ಕೋವಿಡ್‌ ಸೋಂಕು ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯದಲ್ಲಿಯೇ ವ್ರತಾಚರಣೆ ಕೈಗೊಳ್ಳಲಿದ್ದಾರೆ. ಶ್ರೀಗಳು ಕಳೆದ ಬಾರಿಯೂ ಕೂಡ ಸುಬ್ರಹ್ಮಣ್ಯದಲ್ಲೇ ಚಾತುರ್ಮಾಸ್ಯ ನಡೆಸಿದ್ದರು.

 

ಹೊಸನಗರದ ಶ್ರೀ ಚಾತುರ್ಮಾಸ್ಯ  :

ಬೆಂಗಳೂರು: ಹೊಸನಗರದ ಶ್ರೀರಾಮ ಚಂದ್ರಪುರ ಮಠದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರ 28ನೇ ಚಾತುರ್ಮಾಸ್ಯ ಜುಲೈ 24ರಿಂದ ಸೆಪ್ಟಂಬರ್‌ 20ರ ವರೆಗೆ ಬೆಂಗಳೂರಿನ ಗಿರಿನಗರದ ಶ್ರೀರಾಮಾಶ್ರಮದಲ್ಲಿ ನಡೆಯಲಿದೆ. “ಅರಿವಿನ ಹಣತೆಯ ಹಚ್ಚೋಣ- ವಿದ್ಯಾವಿಶ್ವವ ಕಟ್ಟೋಣ’ ಎಂಬ ಧ್ಯೇಯವಾಕ್ಯದೊಂದಿಗೆ ಈ ಚಾತುರ್ಮಾಸ್ಯವನ್ನು ವಿಶ್ವವಿದ್ಯಾ ಚಾತುರ್ಮಾಸ್ಯವಾಗಿ ಆಚರಿಸಲಾಗುತ್ತಿದೆ.

ಆ.6ರಿಂದ ಮಂತ್ರಾಲಯದಲ್ಲಿ ವ್ರತಾಚರಣೆ :

ರಾಯಚೂರು: ಮಂತ್ರಾಯಲದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠ ದಲ್ಲಿ ಜು.21ರಂದು ಚಾತುರ್ಮಾಸ್ಯಕ್ಕೆ ಚಾಲನೆ ನೀಡಿದ್ದು, ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಆ.6ರಂದು ವ್ರತಾಚರಣೆ ಆರಂಭಿಸುತ್ತಿದ್ದಾರೆ. ಶ್ರೀಗಳು ಈ ಬಾರಿಯೂ ಶ್ರೀಮಠದಲ್ಲೇ 48 ದಿನಗಳ ವ್ರತಾಚರಣೆ ಕೈಗೊಳ್ಳಲಿದ್ದಾರೆ. ಕೊನೇ ದಿನ ಸೀಮೋಲ್ಲಂಘನೆ ಮಾಡಿ ವ್ರತ ಮುಕ್ತಾಯಗೊಳಿಸುವರು. ಅಲ್ಲದೇ ಬೇರೆ ಯತಿಗಳು ಕೂಡ ಈ ಬಾರಿ ಮಂತ್ರಾಲಯದಲ್ಲಿ ವ್ರತಾಚರಣೆ ಕೈಗೊಳ್ಳುತ್ತಿಲ್ಲ. ಇನ್ನೂ ಚಾತುರ್ಮಾಸ್ಯ ಹಿನ್ನೆಲೆಯಲ್ಲಿ ಬುಧವಾರದಿಂದ ಮಠದಲ್ಲಿ ಊಟಕ್ಕೆ ದ್ವಿದಳ ಧಾನ್ಯಗಳ ಬಳಕೆಗೆ ಆದ್ಯತೆ ನೀಡಲಾಗುತ್ತಿದೆ.

ಶೃಂಗೇರಿ ಜಗದ್ಗುರುಗಳಿಂದ ವ್ರತಾಚರಣೆ :

ಶೃಂಗೇರಿ: ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದ ಜಗದ್ಗುರುಗಳಾದ ಶ್ರೀ ಭಾರತೀತೀರ್ಥ ಸ್ವಾಮೀಜಿ ಹಾಗೂ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಗಳು ಜು.24 ರಂದು ಶ್ರೀಮಠದ ಗುರುಭವನ ದಲ್ಲಿ ಚಾತುರ್ಮಾಸ ವ್ರತ ಕೈಗೊಳ್ಳಲಿದ್ದಾರೆ. ವ್ಯಾಸ ಪೂರ್ಣಿಮೆ ದಿನವಾದ ಜು.24 ರಂದು ಉಭಯ ಜಗದ್ಗು ರುಗಳು ವ್ಯಾಸ ಪೂಜೆ ನೆರವೇರಿಸಿ, ಚಾತುರ್ಮಾಸ ವ್ರತ ಆರಂಭಿಸಲಿದ್ದಾರೆ. ಭಾದ್ರಪದ ಮಾಸವಾದ ಸೆ.20 ಅನಂತನ ಹುಣ್ಣಿಮೆ ಮತ್ತು ಉಮಾಮಹೇಶ್ವರ ವ್ರತದ ದಿನದಂದು ಜಗದ್ಗುರುಗಳು ಸೀಮೋಲ್ಲಂಘನ ಮಾಡುವ ಮೂಲಕ ಚಾತುರ್ಮಾಸ ವ್ರತ ಮುಕ್ತಾಯ ಗೊಳಿಸಲಿ ದ್ದಾರೆ. ಚಾತು ರ್ಮಾಸ ವ್ರತದ ಸಂದರ್ಭದಲ್ಲಿ ಉಭಯ ಜಗದ್ಗುರುಗಳು ಗುರುಭವನದಲ್ಲಿ ವಾಸ್ತವ್ಯ ಇದ್ದು, ಭಕ್ತರಿಗೆ ದರ್ಶನ ನೀಡಲಿದ್ದಾರೆ.

ಸ್ವರ್ಣವಲ್ಲಿ ಶ್ರೀಗಳ 31ನೇ ವ್ರತಾಚರಣೆ :

ಶಿರಸಿ: ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳ 31ನೇ ಚಾತುರ್ಮಾಸ ವ್ರತಾಚರಣೆ ಜು.24 ರಂದು ಆರಂಭಗೊಳ್ಳಲಿದೆ. ಅಂದು ಮುಂಜಾನೆ 10ರಿಂದ ಶ್ರೀಗಳಿಂದ ಶ್ರೀವೇದವ್ಯಾಸ ಪೂಜೆ, ಚಾತುರ್ಮಾಸ್ಯ ವ್ರತ ಸಂಕಲ್ಪ, ಶಿಷ್ಯರಿಂದ ಶ್ರೀಗಳ ಪಾದುಕಾ ಪೂಜೆ, ಮಧ್ಯಾಹ್ನ 1ಕ್ಕೆ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿತರಣೆ, ಪ್ರಸಾದ ಭೋಜನ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 3ಕ್ಕೆ ಶ್ರೀಗಳ ಸಾನ್ನಿಧ್ಯದಲ್ಲಿ ಧರ್ಮಸತ್ರ ನಡೆಯಲಿದೆ. ಜು.24 ರಿಂದ ಸೆ.20ರ ತನಕ ಶ್ರೀಗಳು ಚಾತುರ್ಮಾಸ ವ್ರತ ಕೈಗೊಳ್ಳಲಿದ್ದಾರೆ. ಪ್ರತೀ ದಿನ ಸಂಜೆ ಮಹಾಭಾರತ ಪ್ರವಚನ ಕೂಡ ನಡೆಯಲಿದೆ.

ಆಶ್ರಮದಲ್ಲಿ 18ನೇ ವ್ರತಾಚರಣೆ :

ಮೈಸೂರು: ಅವಧೂತ ದತ್ತಪೀಠದ ಉತ್ತರಾಧಿಕಾರಿ ಶ್ರೀ ದತ್ತ ವಿಜಯಾ ನಂದತೀರ್ಥ ಸ್ವಾಮೀಜಿ ಅವರು ನಗರದ ಊಟಿ ರಸ್ತೆಯಲ್ಲಿರುವ ಗಣಪತಿ ಸಚ್ಚಿದಾ ನಂದ ಆಶ್ರಮದಲ್ಲಿ ಜು. 24-ಸೆ.20ರವ ರೆಗೆ 18ನೇ ಚಾತುರ್ಮಾಸ ವ್ರತ ದೀಕ್ಷಾ ಮಹೋತ್ಸವ ಆಚರಣೆ ಕೈಗೊಳ್ಳಲಿದ್ದಾರೆ. ಚಾತುರ್ಮಾಸ್ಯ ಅಂಗವಾಗಿ ಪ್ರತೀ ಶನಿವಾರ, ರವಿವಾರ, ಸೋಮವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇತರ ಕೆಲವು ದಿನಗಳಲ್ಲೂ ವಿಶೇಷ ಪೂಜೆ ನಡೆಯಲಿದೆ.

ಕರ್ಕಿ ಮಠದಲ್ಲಿ ದೈವಜ್ಞ ಶ್ರೀ ಚಾತುರ್ಮಾಸ್ಯ :

ಹೊನ್ನಾವರ: ಉತ್ತರಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಕರ್ಕಿಯಲ್ಲಿರುವ ದೈವಜ್ಞ ಮಠದ ಪೀಠಾಧೀಶರಾದ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಸ್ವಾಮೀಜಿಗಳ ಈ ವರ್ಷದ ಚಾತುರ್ಮಾಸ ವ್ರತಾಚರಣೆ ಮಠದಲ್ಲಿಯೇ ಸರಳವಾಗಿ ನಡೆಯಲಿದೆ. ಶ್ರೀಗಳು ಜು.26ರಂದು (ಸೋಮವಾರ) ವ್ರತದ ಸಂಕಲ್ಪ ಕೈಗೊಳ್ಳಲಿದ್ದು, ಪ್ರತೀ ಸೋಮವಾರ ಮತ್ತು ಮಂಗಳವಾರ ಪಾದಪೂಜೆ ಇರುವುದಿಲ್ಲ. ಉಳಿದೆಲ್ಲ ದಿನಗಳಲ್ಲಿ ಸಾಮೂ ಹಿಕ ಪಾದಪೂಜೆ ಇರಲಿದೆ.

ಮಲ್ಲಾಪುರದಲ್ಲಿ ಚಿತ್ರಾಪುರ ಶ್ರೀ :

ಭಟ್ಕಳ: ಚಿತ್ರಾಪುರ ಮಠಾಧೀಶ ಶ್ರೀಮದ್‌ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ ಅವರು ಜು.24 ರಿಂದ ಸೆ.20ರ ತನಕ ಶಾಖಾ ಮಠ ಮಲ್ಲಾ ಪುರದ ಮಠದಲ್ಲಿ ವ್ರತಾಚರಣೆ ಕೈಗೊಳ್ಳುವರು. ಆಷಾಢ ಪೌರ್ಣಿಮೆಯಂದು ವೇದವ್ಯಾಸ ಗುರುಗಳ ಪೂಜೆಯೊಂದಿಗೆ ವ್ರತ ಆರಂಭವಾಗಲಿದೆ. ವ್ರತಾಚರಣೆ ಸಂದರ್ಭದಲ್ಲಿ ಮಠದಲ್ಲಿ ವಿವಿಧ ಧಾರ್ಮಿಕ ಮತ್ತು ಆಧ್ಯಾತ್ಮಿಕ ಕಾರ್ಯ ಕ್ರಮಗಳು ನಡೆಯಲಿವೆ.

ವರದಳ್ಳಿಯಲ್ಲಿ  ಗುರು ಪೂರ್ಣಿಮೆ :

ಸಾಗರ: ತಾಲೂಕಿನ ಶ್ರೀ ಕ್ಷೇತ್ರ ವರ ದಪುರದಲ್ಲಿ ಜು.24ರಂದು ಗುರು ಪೂರ್ಣಿಮೆ ಕಾರ್ಯಕ್ರಮ ನಡೆಯಲಿದೆ. ಕೋವಿಡ್‌ ಮಾರ್ಗ ಸೂಚಿಗಳ ಪ್ರಕಾರ ನಿರ್ಬಂಧ ಜಾರಿಯಲ್ಲಿರುವುದ ರಿಂದ ಆ ದಿನ ಭಕ್ತರಿಗೆ ಮಧ್ಯಾಹ್ನ 2.30 ರಿಂದ ಸಂಜೆ 6ರವರೆಗೆ ಶ್ರೀ ಭಗವಾನರ ಸಮಾಧಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಗುರುಪೂರ್ಣಿಮೆ ನಿಮಿತ್ತ ಶ್ರೀ ವ್ಯಾಸ ಪೂಜೆ, ಚಾತುರ್ಮಾಸ್ಯ ಸಂಕಲ್ಪ ಕಾರ್ಯ ಕ್ರಮಗಳು ನಡೆಯುವುದರಿಂದ ದರ್ಶನ ಸಮಯದಲ್ಲಿ ಆ ದಿನದ ಮಟ್ಟಿಗೆ ಮಾರ್ಪಾಡು ಮಾಡಲಾಗಿದೆ.

ಸೆ. 2ರಂದು ಸೀಮೋಲ್ಲಂಘನ :

ಬೆಳ್ತಂಗಡಿ: ಇಲ್ಲಿನ ಕನ್ಯಾಡಿ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರ ಚಾತುರ್ಮಾಸ್ಯ ವ್ರತಾರಂಭ ಜು. 24ರಂದು ಜರಗಲಿದೆ. ಜು. 24ರ ಬೆಳಗ್ಗೆ 7ಕ್ಕೆ ಚಾತುರ್ಮಾಸ ವ್ರತಸಂಕಲ್ಪ ನೆರವೇರಲಿದೆ. ಸೆ. 2ರಂದು ಚಾತುರ್ಮಾಸ ವ್ರತದ ಸಮಾಪ್ತಿಯಾಗಲಿದ್ದು ಶ್ರೀಗಳ ಸೀಮೋಲ್ಲಂಘನ ನಡೆಯಲಿದೆ.

ಚಿತ್ರದುರ್ಗದಲ್ಲಿ ಕೂಡಲಿ ಶ್ರೀ ಅನುಷ್ಠಾನ  : ‌

ಶಿವಮೊಗ್ಗ: ಕೂಡಲಿ ಶೃಂಗೇರಿ ಮಠದ ಶ್ರೀಮದ್‌ ಜಗದ್ಗುರು ಶ್ರೀ ವಿದ್ಯಾಭಿನವ ವಿದ್ಯಾರಣ್ಯ ಭಾರತೀ ಸ್ವಾಮೀಜಿಗಳ 37ನೇ ವರ್ಷದ ವ್ರತಾ ಚರಣೆ ಚಿತ್ರದುರ್ಗದ ಶಾಖಾ ಮಠದಲ್ಲಿ ನಡೆ ಯಲಿದೆ. ಜು.24ರಂದು ವ್ರತ ಕೈಗೊಳ್ಳಲಿರುವ ಶ್ರೀಗಳು ಪ್ರಾತಃಕಾಲದಲ್ಲಿ ಮಹಾಗಣಪತಿ, ಚಂದ್ರಮೌಳೇಶ್ವರ, ಶಾರದಾ ಲಕೀÒ$¾, ನವಗ್ರಹ, ಸುಬ್ರಹ್ಮಣ್ಯೇಶ್ವರ, ಶಂಕರ ಭಗವತ್ಪಾದರ ಸನ್ನಿಧಿಯಲ್ಲಿ ತೃತೀಯ ಶಂಕರಭಾರತಿ ಸ್ವಾಮೀಜಿಗಳು ಅಧಿಷ್ಟಾನದಲ್ಲಿ ವಿಶೇಷ ಪೂಜೆ ಕೈಗೊಳ್ಳುವರು.

ಮುಂಬಯಿಯಲ್ಲಿ  ಕೈವಲ್ಯ ಶ್ರೀ ಚಾತುರ್ಮಾಸ್ಯ :

ಉಡುಪಿ: ಕೈವಲ್ಯ ಮಠದ ಶ್ರೀ ಶಿವಾನಂದ ಸರಸ್ವತೀ ಸ್ವಾಮೀಜಿಯವರು 27ನೇ ಚಾತುರ್ಮಾಸ ವ್ರತವನ್ನು ಮುಂಬಯಿ ಬಾಣಗಂಗಾ ಸಮೀಪದ ವಾಲಕೇಶ್ವರ ಮಠದ ಶಾಖೆಯಲ್ಲಿ ಜು.20ರ ಆಷಾಢ ಏಕಾದಶಿಯಂದು ಆರಂಭಿಸಿದ್ದು ಜು.23 ಗುರುಪೂರ್ಣಿಮಾ, ವ್ಯಾಸಪೂಜಾ, ಚಾತುರ್ಮಾಸ ವ್ರತ ಸ್ವೀಕರಿಸಲಿದ್ದಾರೆ. ಈ ಅವಧಿಯಲ್ಲಿ ವಿವಿಧ ಧಾರ್ಮಿಕ, ಅನುಷ್ಠಾನಗಳು, ಭಜನೆ, ಪ್ರವಚನಾದಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಐದು ಶ್ರಾವಣ ಸೋಮವಾರಗಳು, ಪ್ರದೋಷ ಪೂಜೆ, ಸೆ.20 ಪೌರ್ಣಿಮಾ, ಚಾತುರ್ಮಾಸ್ಯ ಸಮಾಪ್ತಿ, ಸೆ. 21ಗಣಪತಿ ವಿಸರ್ಜನೆಯೊಂದಿಗೆ ಸಮಾಪನಗೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next