Advertisement

ಇನ್ನು ChatGPT ವೆಬ್‌ಸೈಟ್‌ಗಳಲ್ಲಿ ಮಾತ್ರವಲ್ಲದೆ ಆ್ಯಪ್‌ನಲ್ಲೂ ಲಭ್ಯ !

08:24 AM May 20, 2023 | Pranav MS |

ನವದೆಹಲಿ: ಈವರೆಗೆ ವೆಬ್‌ಸೈಟ್‌ಗಳಲ್ಲಿ ಮಾತ್ರವೇ ಲಭ್ಯವಿದ್ದ ಎಐ ಆಧಾರಿತ ಚಾಟ್‌ಬೋಟ್‌ ಚಾಟ್‌ಜಿಪಿಟಿ ಇನ್ನುಮುಂದೆ ಆ್ಯಪ್‌ರೂಪದಲ್ಲಿ ಲಭ್ಯವಿರಲಿದ್ದು, ಪ್ರಸಕ್ತ ಆ್ಯಪಲ್‌ಫೋನ್‌ ಬಳಕೆದಾರರಿಗೆ ಈ ಸೇವೆ ದೊರೆಯಲಿದೆ ಎಂದು ಚಾಟ್‌ಜಿಪಿಟಿಯ ಸಂಸ್ಥೆ ಓಪನ್‌ ಎಐ ತಿಳಿಸಿದೆ. ಆ್ಯಪಲ್‌ ಹಾಗೂ ಆ್ಯಂಡ್ರಾಯ್ಡ ಬಳಕೆದಾರರಿಗಾಗಿ ಚಾಟ್‌ಜಿಪಿಟಿಯ ಅಪ್ಲಿಕೇಶನ್‌ ಅಭಿವೃದ್ಧಿ ಪಡಿಸಲಾಗಿದೆ. ಆದರೆ, ಪ್ರಸಕ್ತ ಅಮೆರಿಕದಲ್ಲಿರುವ ಆ್ಯಪಲ್‌ ಫೋನ್‌ ಬಳಕೆದಾರರಿಗೆ ಮಾತ್ರ ಆ್ಯಪ್‌ ಲಭ್ಯವಿದೆ. ಶೀಘ್ರದಲ್ಲೇ, ಬೇರೆ ರಾಷ್ಟ್ರಗಳ ಆ್ಯಪಲ್‌ ಬಳಕೆದಾರರಿಗೂ ಸೇವೆ ಒದಗಿಸಲಾಗುತ್ತದೆ. ಇದರ ಜತಗೆ ಆ್ಯಂಡ್ರಾಯ್ಸ ಬಳಕೆದಾರರೂ ಕೂಡ ಆ್ಯಪ್‌ ಬಳಸಬಹುದಾಗಿದ್ದು ಇನ್ನು ಕೆಲವೇ ದಿನಗಳಲ್ಲಿ ಗೂಗಲ್‌ ಪ್ಲೇಸ್ಟೋರ್‌ನಲ್ಲಿ ಚಾಟ್‌ಜಿಪಿಟಿ ಆ್ಯಪ್‌ ಸಿಗಲಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next