Advertisement
ಆಸ್ಪತ್ರೆ, ಶಿಕ್ಷಣ, ಧಾರ್ಮಿಕ ಮಾತ್ರವಲ್ಲದೆ ವ್ಯಾಪಾರ – ವಹಿವಾಟು, ಉದ್ಯೋಗ ಇತ್ಯಾದಿಗಳ ನೆಲೆಯಲ್ಲಿಯೂ ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ನಡುವೆ ಸಂಪರ್ಕ ಕಲ್ಪಿ ಸುವ ರಾಷ್ಟ್ರೀಯ ಹೆದ್ದಾರಿ 73ರ ಚಾರ್ಮಾಡಿಯಿಂದ ಮೂಡಿಗೆರೆ ವರೆಗೆ ಆ. 9ರ ಬಳಿಕ ಶ್ಮಶಾನ ಮೌನ ಆವರಿಸಿದೆ. ಇದರಿಂದ ವ್ಯಾಪಾರ ವಹಿವಾಟು ನೆಲಕಚ್ಚಿದೆ. ಸಾಲ ಮಾಡಿ ಅಂಗಡಿ ತೆರೆದಿದ್ದವರು ಕೈಸುಟ್ಟುಕೊಂಡಿದ್ದಾರೆ.
ಚಾರ್ಮಾಡಿ ಲಘು ವಾಹನಗಳ ಸಂಚಾರಕ್ಕೆ ಮುಕ್ತವಾಗಿದ್ದರೂ ಪರಿಸ್ಥಿತಿ ಮತ್ತೆ ಯಾವಾಗ ಬಿಗಡಾ ಯಿಸುತ್ತದೆ ಎಂದು ಹೇಳಲಾಗದು. ಆದ್ದರಿಂದ ಶಿರಾಡಿ ಹಾಗೂ ಪರ್ಯಾಯ ರಸ್ತೆಗಳತ್ತ ಹೊಟೇಲನ್ನು ಸ್ಥಳಾಂತರಿಸುವ ಚಿಂತನೆ ನಡೆಸಿರುವು ದಾಗಿ ಹಸನಬ್ಬ ಚಾರ್ಮಾಡಿ ಇಂಗಿತ ವ್ಯಕ್ತಪಡಿಸಿದ್ದಾರೆ. ಕೊಟ್ಟಿಗೆ ಹಾರದಿಂದ ಕಳಸಕ್ಕಾಗಿ ತೆರಳುವ ಬಸ್‌ಗಳು ಮಾಗುಂಡಿ ಯಾಗಿ ಹೊರನಾಡು ಮೂಲಕ ತೆರಳುತ್ತಿವೆ. ಇದರಿಂದ ಕೊಟ್ಟಿಗೆಹಾರ ಪ್ರದೇಶದ ಸುಮಾರು 40 ಹೊಟೇಲ್‌ಗಳು ಬಾಗಿಲು ತೆರೆಯದೆ 40 ದಿವಸಗಳು ಕಳೆದಿವೆ. ಆಸ್ಪತ್ರೆ ತುರ್ತು ಸೇವೆಗೆ ಸಮಸ್ಯೆ
ಚಾರ್ಮಾಡಿಯಲ್ಲಿ ಲಘು ವಾಹನ ಸಂಚಾರಕ್ಕೆ ಹಗಲು ಮಾತ್ರ ಅನುವು ಮಾಡಿದ್ದರಿಂದ ಚಿಕ್ಕಮಗಳೂರು, ಆಲ್ದೂರು, ಮೂಡಿಗೆರೆ, ಕೊಟ್ಟಿಗೆ ಹಾರ ಸುತ್ತಮುತ್ತಲ ಜನರಿಗೆ ಆಸ್ಪತ್ರೆ, ಪಾಸ್‌ಪೋರ್ಟ್, ಶಿಕ್ಷಣ ಸಂಬಂಧಿತ ಕೆಲಸಗಳಿಗೆ ಹಗಲು ತೆರಳಲು ಸಮಾಸ್ಯೆಯಾಗುತ್ತಿದೆ. ರಾತ್ರಿ ತಡವಾದಲ್ಲಿ ಚೆಕ್ ಪೋಸ್ಟ್‌ನಲ್ಲೇ ಕಾಯುವ ಪರಿಸ್ಥಿತಿ. ಮಂಗಳೂರು ಆಸ್ಪತ್ರೆಗಳ ವೈದ್ಯರು ಹೆಚ್ಚಾಗಿ ಸಂಜೆ 4 ಗಂಟೆ ಬಳಿಕ ಅರ್ಟ್ಟ್‌ಮೆಂಟ್ ನೀಡುತ್ತಿದ್ದು, ಹಿಂದಿರುಗಿ ಚಾರ್ಮಾಡಿ ತಲುಪುವಾಗ ರಾತ್ರಿ ಯಾದಲ್ಲಿ ಮುಂದಕ್ಕೆ ಸಂಚಾರ ಸಾಧ್ಯವಾಗುತ್ತಿಲ್ಲ. ಈ ಕುರಿತು ಜಿಲ್ಲಾಡಳಿತ ಗಮನ ಹರಿಸುವಂತೆ ರೋಗಿಗಳ ಮನೆಮಂದಿ ವಿನಂತಿಸು ತ್ತಿದ್ದಾರೆ.
Related Articles
ಭೂ ಕುಸಿತದಿಂದ ಚಾರ್ಮಾಡಿ ವ್ಯಾಪ್ತಿಯ ಮೂರು ಕಡೆ ಸುಮಾರು 10 ಅಡಿ ರಸ್ತೆ ಕುಸಿದಿದೆ. ಬೆಳ್ತಂಗಡಿಯಿಂದ ತೆರಳುವ 11ನೇ ತಿರುವಿನ ಬಳಿಕ, ಅಲೆಕಾನ್ ಕ್ರಾಸ್, ಅಣ್ಣಪ್ಪ ಬೆಟ್ಟ ಸಮೀಪದ ವ್ಯೂ ಪಾಯಿಂಟ್ ಸ್ಥಳಗಳಲ್ಲಿ 10 ಅಡಿ ರಸ್ತೆ ಕೊರೆದುಹೋಗಿದ್ದು, ಏಕಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಸಿಮೆಂಟ್ ಇಟ್ಟಿಗೆಯ ತಡೆಗೋಡೆ ನಿರ್ಮಿಸಲಾಗಿದ್ದು, ಶೀಘ್ರ ಶಾಶ್ವತ ಕಾಮಗಾರಿ ಆರಂಭಿಸುವಂತೆ ಸವಾರರು ಒತ್ತಾಯಿಸುತ್ತಿದ್ದಾರೆ.
Advertisement
40 ವರ್ಷಗಳಿಂದ ಇಲ್ಲಿ ಹೊಟೇಲ್ ನಡೆಸುತ್ತಿದ್ದೇನೆ. ಪ್ರತಿ ದಿನ 20 ಬಸ್‌ಗಳು ನಮ್ಮ ಹೋಟೆಲ್‌ಗೆ ಬರುತ್ತಿದ್ದವು. ಈಗ ವ್ಯಾಪಾರವಿಲ್ಲದೆ ಬಾಡಿಗೆ ನೀಡಲು ಕೂಡ ಸಾಧ್ಯವಾಗುತ್ತಿಲ್ಲ.– ರಮೇಶ್ ಭಟ್, ಹೊಟೇಲ್ ಮಾಲಕ – ಚೈತ್ರೇಶ್ ಇಳಂತಿಲ