Advertisement
ಹೆದ್ದಾರಿ ಇಲಾಖೆಯಿಂದ ಘಾಟ್ ರಸ್ತೆ ಸಂಪೂರ್ಣ ಅಭಿವೃದ್ಧಿ ಕಾಮಗಾರಿಯ ಪ್ರಸ್ತಾವನೆ ಕಡತ 7 ತಿಂಗಳಿಂದ ಧೂಳು ಹಿಡಿಯುತ್ತಿರುವುದರಿಂದ ಎರಡನೇ ಹಂತದ ಕಾಮಗಾರಿ ವಿಳಂಬವಾಗಿದೆ. ಪರಿಣಾಮ ಚಿಕ್ಕಮಗಳೂರು- ಮಂಗಳೂರು ಸಂಪರ್ಕದ ಭವಿಷ್ಯ ಪ್ರಸಕ್ತ ಮುಂಗಾರಿನ ಪ್ರಭಾವವನ್ನು ಎದುರುನೋಡಿ ನಿರ್ಧರಿಸಬೇಕಿದೆ. ಈ ಕುರಿತು ಸಂಸದೆಯೊಬ್ಬರೂ ಕೂಡ ಇದೇ ಕಾದುನೋಡುವ ಮಾತನ್ನೇ ಆಡಿದ್ದಾರೆ.
Related Articles
Advertisement
ಅಲೆಕ್ಕಾನ್‌ಗೆàಟ್ ಬಳಿ ಅಲೆಕ್ಕಾನ್‌ಹಳ್ಳ ಎರಡು ಕಡೆಗಳಲ್ಲಿ ಜರಿದಿದ್ದು, ಇಲ್ಲಿ ರಸ್ತೆ ವಿಸ್ತಾರ ಆಗಲೇಬೇಕಾದ ಅನಿವಾರ್ಯತೆ ಇದೆ. ಸುಮಾರು 50 ಅಡಿಗಳಿಗಿಂತಲೂ ತಳಭಾಗದಿಂದ ಪಿಲ್ಲರ್ ನಿರ್ಮಾಣ ಅನಿವಾರ್ಯವಾಗಿದ್ದು, ಈ ಮಳೆಗಾಲದ ಮುನ್ನವಂತೂ ಕಾಮಗಾರಿ ಅಸಾಧ್ಯದ ಮಾತಾಗಿದೆ. ಬಿದುರ್ತಳ ಸಮೀಪ ರಸ್ತೆ ಸಂಪೂರ್ಣ ಹಾಳಾಗಿದೆ.
8 ಕೋ.ರೂ.ಡಾಮರೀಕರಣಬೆಳ್ತಂಗಡಿ ವ್ಯಾಪ್ತಿಗೊಳಪಟ್ಟಂತೆ ಚಾರ್ಮಾಡಿ ಘಾಟ್ ಆರಂಭದಿಂದ ಕೊಟ್ಟಿಗೆ ಹಾರವರೆಗೆ 8 ಕೋ.ರೂ. ವೆಚ್ಚದಲ್ಲಿ 10 ಕಿ.ಮೀ. ಡಾಮರೀಕರಣ ನಡೆಯುತ್ತಿದೆ. ಈಗಾಗಲೆ ಬೆಳ್ತಂಗಡಿ ವ್ಯಾಪ್ತಿಯ 10 ಕಿ.ಮೀ. ಮತ್ತು ಕೊಟ್ಟಿಗೆಹಾರದಿಂದ 13 ಕಿ.ಮೀ. ಡಾಮರು ಪ್ರಕ್ರಿಯೆ ಸಾಗಿದೆ. ಸೊರಗಿದ ಜಲಪಾತ
ಸೋಮನಕಾಡು ಜಲಪಾತ ಸಂಪೂರ್ಣ ಬತ್ತಿಹೋಗಿದೆ. ಬೇಸಿಗೆಯಲ್ಲಿ ಚಿಕ್ಕಮಗಳೂರು ವ್ಯಾಪ್ತಿಯಲ್ಲಿ 30 ಡಿಗ್ರಿ ಸೆಲ್ಸಿಯಸ್‌ಗೆ ತಲುಪುತ್ತಿದ್ದ ಉಷ್ಣಾಂಶ ಪ್ರಸಕ 38 ಡಿಗ್ರಿವರೆಗೂ ತಲುಪಿದೆ. ಪರಿಣಾಮ ಬೇಸಗೆಯಲ್ಲಿ ಅಲ್ಪಸ್ವಲ್ಪ ಕಾಣಸಿಗುತ್ತಿದ್ದ ನೀರಿನ ಝರಿ ಸಂಪೂರ್ಣ ಬತ್ತಿಹೋಗಿದೆ. ಸಾಗಾಟ ವೆಚ್ಚ ದುಪ್ಪಟ್ಟು
ಮಂಗಳೂರಿಂದ ಚಿಕ್ಕಮಗಳೂರು ಕಡೆಗೆ ಗೃಹನಿರ್ಮಾಣ ಸಾಮಗ್ರಿ ಸೇರಿದಂತೆ, ಸಿಮೆಂಟ್, ಮರಳು, ಜಲ್ಲಿ ಸಾಗಾಟ ವೆಚ್ಚ ದುಪ್ಪಟ್ಟಾಗಿದೆ. ಇಟ್ಟಿಗೆ ಬೆಲೆ ಸಾಗಾಟ ವೆಚ್ಚ ಸೇರಿ 38 ರೂ. ಇದ್ದ ಬೆಲೆ 45 ರೂ.ಗೇರಿದೆ. ಮರಳು ಲಾರಿ ಸಾಗಾಟಕ್ಕೂ ದುಪ್ಪಟ್ಟು ಬೆಲೆ ತೆರಬೇಕಾಗಿದೆ. ಚಾರ್ಮಾಡಿ ಘಾಟ್ ರಸ್ತೆ ಸಂಪೂರ್ಣ ಅಭಿವೃದ್ಧಿಗೆ ನೂತನ ಸುಧಾರಿತ ತಂತ್ರಜ್ಞಾನ ಪ್ರಯೋಗಿಸುವ ಕುರಿತು ಈಗಾಗಲೆ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರಸಕ್ತ 8 ಕೋ.ರೂ. ಮೊತ್ತದಲ್ಲಿ ಡಾಮರೀಕರಣವಾಗುತ್ತಿದೆ.
– ಸುಬ್ಬರಾಮ ಹೊಳ್ಳ, ಕಾರ್ಯಪಾಲಕ ಎಂಜಿನಿಯರ್, ರಾಷ್ಟ್ರೀಯ ಹೆದ್ದಾರಿ ಇಲಾಖೆ -ಚೈತ್ರೇಶ್ ಇಳಂತಿಲ