ಕೊಟ್ಟಿಗೆಹಾರ: ಚಾರ್ಮಾಡಿ ಘಾಟ್‍ನ ಮಲಯಮಾರುತ ಸಮೀಪ ಕಿಡಿಗೇಡಿಗಳು ರಸ್ತೆ ಬದಿಯಲ್ಲಿ ಹಂದಿಗಳ ಕಳೇಬರವನ್ನು ಎಸೆದು ಹೋದ ಘಟನೆ ನಡೆದಿದೆ.
ನಾಲ್ಕಕ್ಕೂ ಹೆಚ್ಚು ಬಾರಿ ಗಾತ್ರದ ಹಂದಿಗಳನ್ನು ಎಸೆದು ಹೋಗಿದ್ದು, ರಸ್ತೆ ಬದಿಯಲ್ಲಿ ಎಸೆದಿರುವುದರಿಂದ ಈ ಮಾರ್ಗವಾಗಿ ಸಂಚರಿಸುವ ಪ್ರಯಾಣಿಕರು ಮೂಗು ಮುಚ್ಚಿ ತಿರುಗಾಡುವಂತಾಗಿದೆ. ಅದರ ಸಮೀಪದಲ್ಲೇ ತೊರೆಯೊಂದು ಹರಿಯುತ್ತಿದ್ದು, ಹಂದಿಯ ಕಳೇಬರ ಕೊಳೆತು ತೊರೆ ಸೇರುವುದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ.
ಮಂಗಳೂರು ಕಡೆಗೆ ಹಂದಿಗಳನ್ನು ಸಾಗಾಟ ಮಾಡುವ ವಾಹನ ಚಾಲಕರು ಸತ್ತ ಹಂದಿಗಳನ್ನು ಹೀಗೆ ಎಸೆದು ಹೋಗಿರುವ ಸಾಧ್ಯತೆ ಇದ್ದು, ಹೀಗೆ ಎಸೆದು ಹೋಗಿರುವವರ ವಿರುದ್ದ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.