ಬೆಳ್ತಂಗಡಿ: ಚಿಕ್ಕಮಗಳೂರು ಹಾಗೂ ಚಾರ್ಮಾಡಿ ಭಾಗದ ಬಾಳೂರು ಅರಣ್ಯ ಪ್ರದೇಶದಲ್ಲಿ ಕಂಡುಬಂದಿರುವ ಕಾಳ್ಗಿಚ್ಚು ಬೆಳ್ತಂಗಡಿ ಅರಣ್ಯ ವ್ಯಾಪ್ತಿಯ ಕಡೆ ಹಬ್ಬದಂತೆ 4 ದಿನಗಳಿಂದ ನಿರಂತರ ಕಾರ್ಯಾಚರಣೆ ನಡೆಯುತ್ತಿದೆ.
ಬಂಡಾಜೆ ಫಾಲ್ಸ್ ಮಧ್ಯಭಾಗ ಕಾಡಿನಲ್ಲಿರುವ ಒಣಹುಲ್ಲು ಹಾಗೂ ಮರದ ತುಂಡುಗಳಲ್ಲಿ ಸಣ್ಣ ಪ್ರಮಾಣದ ಬೆಂಕಿ ಇದ್ದು, ಅದನ್ನು ಆರಿಸುವ ಕಾರ್ಯಾಚರಣೆ ನಡೆಯುತ್ತಿದೆ.
ಬೆಂಕಿಯ ಪ್ರಖರತೆ ಕಡಿಮೆಯಾಗಿದ್ದು, ಕಾಳ್ಗಿಚ್ಚು ಹತೋಟಿಯತ್ತ ಬಂದಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಅರಣ್ಯ ಇಲಾಖೆಯ ಡಿಆರ್‌ಎಫ್‌ಒಗಳಾದ ರವೀಂದ್ರ ಅಂಕಲಗಿ, ಯತೀಂದ್ರ, ಗಸ್ತು ಅರಣ್ಯ ಪಾಲಕರಾದ ಪಾಂಡುರಂಗ ಕಮತಿ, ರವಿ ಹಾಗೂ ಸ್ಥಳೀಯ ಕೆಲವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.
Related Articles
ಹೊಗೆ, ಉರಿಬಿಸಿಲು ಕಾರ್ಯಾಚರಣೆಗೆ ಬಹಳಷ್ಟು ಅಡ್ಡಿಯಾಗುತ್ತಿದ್ದು, ಅರಣ್ಯ ಇಲಾಖೆ ಸಿಬಂದಿ ಹರಸಾಹಸ ನಡೆಸುವಂತಾಗಿದೆ. ತೀರಾ ದುರ್ಗಮ ಪ್ರದೇಶ, ಕಾಡಾನೆಗಳ ತಿರುಗಾಟವೂ ಆತಂಕ ಮೂಡಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.