Advertisement

ಚರಿಷ್ಮಾ ಕಲಿಯಂಡ ನ್ಯೂ ಸೌತ್‌ ಸಂಸದೆಯಾಗಿ ಪ್ರಮಾಣ

03:21 PM May 12, 2023 | Team Udayavani |

ಕ್ಯಾನ್ಬೆರಾ: ಜಗತ್ತಿನ ಪ್ರಮುಖ ರಾಷ್ಟ್ರಗಳಲ್ಲಿ, ವೇದಿಕೆಗಳಲ್ಲಿ ಭಾರತೀಯರ ಸಾಧನೆ ಗರಿಬಿಚ್ಚಿರುವ ನಡುವೆ ಇದೀಗ ಕನ್ನಡದ ಕುವರಿಯೋರ್ವರು ಆಸ್ಟ್ರೇಲಿಯದಲ್ಲೊಂದು ಮಹತ್ವದ ಸಾಧನೆ ಮಾಡಿದ್ದಾರೆ.

Advertisement

ಕೊಡಗಿನ ಚರಿಷ್ಮಾ ಕಲಿಯಂಡ ನ್ಯೂ ಸೌತ್‌ ರಾಜ್ಯದ ಸಂಸತ್‌ ಸದಸ್ಯೆಯಾಗಿ ಇತ್ತೀಚೆಗೆ ಪ್ರಮಾಣವಚನ
ಸ್ವೀಕರಿಸಿದ್ದಾರೆ.

ಪಕ್ಕಾ ಕೊಡಗಿನ ಸೀರೆಯುಟ್ಟು ಕಂಗೊಳಿಸಿದ್ದಾರೆ. ಕೊಡಗಿನ ಮಡಿಕೇರಿ ತಾಲೂಕಿನ ನಾಪೋಕ್ಲು ಗ್ರಾಮದವರಾದ ಚರಿಷ್ಮಾ ಕಲಿಯಂಡ, ಲಿವರ್‌ಪೂಲ್‌ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು. ಭಾರತದಲ್ಲಿ ಹುಟ್ಟಿ ನ್ಯೂ ಸೌತ್‌ ವೇಲ್ಸ್‌ ಸಂಸದೆಯಾದ ಮೊದಲ ಭಾರತೀಯ-ಆಸ್ಟ್ರೇಲಿಯ ವ್ಯಕ್ತಿಯೆನ್ನುವುದು ಅವರ ಹೆಗ್ಗಳಿಕೆ. ಆಸೀಸ್‌ ನೆಲದಲ್ಲಿ ಕನ್ನಡದ ಕಂಪನ್ನು ಬೀರುವುದು ಅವರ ಉದ್ದೇಶವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next