Advertisement

ಶರಣಬಸವೇಶ್ವರ ಅದ್ಧೂರಿ ರಥೋತ್ಸವ

03:27 PM Mar 18, 2017 | |

ಜೇವರ್ಗಿ: ಮಹಾದಾಸೋಹಿ ಶರಣಬಸವೇಶ್ವರರ ಜನ್ಮಸ್ಥಳ ತಾಲೂಕಿನ ಸುಕ್ಷೇತ್ರ ಅರಳಗುಂಡಗಿಯಲ್ಲಿ ಶುಕ್ರವಾರ ಜಾತ್ರಾ ಮಹೋತ್ಸವದ ಅಂಗವಾಗಿ ಸಾವಿರಾರು ಭಕ್ತಾದಿಗಳ ಮಧ್ಯೆ ಅದ್ಧೂರಿ ರಥೋತ್ಸವ ಜರುಗಿತು. ಶರಣಬಸವೇಶ್ವರ ಸಂಸ್ಥಾನದ ಬಲವಂತ ಶರಣರ ಸಾನಿದ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.

Advertisement

ಬೆಳಗ್ಗೆ ಶರಣನ ಮೂರ್ತಿಗೆ ವಿಶೇಷ ಪೂಜೆ, ಅಲಂಕಾರ, ನೈವೇದ್ಯ, ಮಹಾಮಂಗಳಾರತಿ ನೆರವೇರಿಸಲಾಯಿತು. ನಂತರ ಗ್ರಾಮದ ಸದ್ಭಕ್ತರಿಂದ ದೀಡ್‌ ನಮಸ್ಕಾರ ಹಾಗೂ ನೈವೇದ್ಯ ಅರ್ಪಿಸಲಾಯಿತು. ಸಂಜೆ ಮಾಲಿಗೌಡರ ಮನೆಯಿಂದ ಕಳಸ ಬಂದ ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಅದ್ಧೂರಿ ಪಲ್ಲಕ್ಕಿ ಉತ್ಸವ ಜರುಗಿತು. 

ಸಂಜೆ 6:00 ಗಂಟೆಗೆ ಜರುಗಿದ ರಥೋತ್ಸವಕ್ಕೆ ಬಲವಂತ ಶರಣರು ಚಾಲನೆ ನೀಡಿದರು. ರಥೋತ್ಸವ ಸಂದರ್ಭದಲ್ಲಿ ಭಕ್ತಾಧಿದಿಗಳು ಉತ್ತತ್ತಿ, ಬದಾಮಿ, ಬಾಳೆಹಣ್ಣು ಎಸೆದು ಹರಕೆ ತೀರಿಸಿದರು. ನಂತರ ಬಂದ ಭಕ್ತಾಧಿಗಳಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ಸಂಜೆ ನಾಟಕ ಪ್ರದರ್ಶನ, ಭಜನೆ, ಗೀಗೀ ಪದ, ಲಾವಣಿ ಪದ, ಸಂಗೀತ ಕಾರ್ಯಕ್ರಮಗಳು ಜರುಗಿದವು. 

ರಥೋತ್ಸವದ ಸಂದರ್ಭದಲ್ಲಿ ಪ್ರಮುಖರಾದ ಭೀಮರಾಯಗೌಡ ಹಿರೇಗೌಡರ, ಹುಲಕಂಟರಾಯಗೌಡ ಮುದಬಸಪ್ಪಗೋಳ, ಬಸವರಾಜ ಮಾಲಿಪಾಟೀಲ, ರೇವಣಸಿದ್ಧಪ್ಪಗೌಡ ಕಮಾಮನಮನಿ, ಬಸವಂತ್ರಾಯ ಜೋತೆಪ್ಪಗೋಳ, ಶಿವಶರಣಪ್ಪ ಗತ್ತರಗಿ, ಗುರುಸಿದ್ದಪ್ಪ ದಾದಾಗೋಳ, ಗುರುಲಿಂಗಯ್ಯ ಸ್ಥಾವರಮಠ, ಮಹಾಂತಪ್ಪ ಸಾಹು ಶ್ರೀಗಿರಿ ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next