Advertisement

ಇವಿಎಂಗಳ ತಿರುಚಿದ ಆರೋಪ

03:45 AM Mar 12, 2017 | Harsha Rao |

ಲಕ್ನೋ: ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಗಳಿಸುತ್ತಿದ್ದಂತೆ ಚುನಾವಣಾ ಅಕ್ರಮದ
ಆರೋಪ ಕೇಳಿಬಂದಿದೆ. ಯಾವುದೇ ಪಕ್ಷದ ಅಭ್ಯರ್ಥಿಗೆ ಮತ ಹಾಕಿದರೂ ಅದು ಬಿಜೆಪಿ ಅಭ್ಯರ್ಥಿಗೆ ಬೀಳುವಂತೆ
ಮತಯಂತ್ರಗಳನ್ನು ತಿರುಚಲಾಗಿತ್ತು. ಇದರಿಂದ ಆಘಾತಕಾರಿ ಫ‌ಲಿತಾಂಶ ಬರುವಂತಾಗಿದೆ. ಆದ್ದರಿಂದ ಚುನಾವಣಾ
ಆಯೋಗ ಮತಎಣಿಕೆ ಸ್ಥಗಿತಗೊಳಿಸಿ ಫ‌ಲಿತಾಂಶ ತಡೆಹಿಡಿಯಬೇಕು ಮತ್ತು ಹಳೆಯ ಪದ್ಧತಿಯಂತೆ ಮತಪತ್ರಗಳ
ಮೂಲಕ ಹೊಸದಾಗಿ ಚುನಾವಣೆ ನಡೆಸಬೇಕು ಎಂದು ಬಿಎಸ್ಪಿ ನಾಯಕಿ ಮಾಯಾವತಿ ಆಗ್ರಹಿಸಿದ್ದಾರೆ.

Advertisement

ಮಾಯಾವತಿ ಅವರ ಈ ಆರೋಪಕ್ಕೆ ಎಸ್ಪಿ ನಾಯಕ, ಉಸ್ತುವಾರಿ ಮುಖ್ಯಮಂತ್ರಿ ಅಖೀಲೇಶ್‌ ಯಾದವ್‌ ಕೂಡ ದನಿಗೂಡಿ ಸಿದ್ದು, ಮಾಯಾವತಿ ಆರೋಪದ ಬಗ್ಗೆ ತಾವೂ ವಿಶ್ಲೇಷಣೆ ಮಾಡಿ ನಂತರ ಪ್ರತಿಕ್ರಿಯೆ ನೀಡುವುದಾಗಿ ಹೇಳಿದ್ದಾರೆ.

ಆರೋಪ ಅಲ್ಲಗಳೆದ ಆಯೋಗ: ಇದೇ ವೇಳೆ, ಮಾಯಾವತಿ ಅವರ ಆರೋಪವನ್ನು ಚುನಾವಣಾ ಆಯೋಗ ಅಲ್ಲಗಳೆದಿದೆ. ಹಾಗೇ ಮರು ಚುನಾವಣೆ ನಡೆಸಬೇಕೆಂಬ ಅವರ ವಾದವನ್ನು ಕಾನೂನುಬದ್ಧವಾಗಿ ಒಪ್ಪಲು ಸಾಧ್ಯವಿಲ್ಲ ಎಂದಿದೆ. ಮತದಾನಕ್ಕೆ ಮುನ್ನ ಹಾಗೂ ನಂತರ ಎಲೆಕ್ಟ್ರಾನಿಕ್‌ ಮತ ಯಂತ್ರಗಳ ಸುರಕ್ಷತೆಗೆ ಕೈಗೊಳ್ಳುವ ತಾಂತ್ರಿಕ, ವಿದ್ಯುನ್ಮಾನ ಕ್ರಮಗಳನ್ನು ಆಯೋಗ ಪಟ್ಟಿ ಮಾಡಿದೆ. ಚುನಾವಣೆಯ ಸಂಪೂರ್ಣ ಆಡಳಿತಾತ್ಮಕ ಪ್ರಕ್ರಿಯೆಗಳು ಎಲ್ಲ ಪಕ್ಷಗಳ ಪ್ರತಿನಿಧಿಗಳು, ಅಭ್ಯರ್ಥಿಗಳ ಎದುರೇ ನಡೆದಿವೆ ಎಂದು ಸ್ಪಷ್ಟಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next