Advertisement

ಚಾರ್ಜ್‌ಗೆ ಇರಿಸಿದ್ದ ಮೊಬೈಲ್‌ಸ್ಫೋಟ: ಮಗು ಸಾವು

07:29 PM Sep 14, 2022 | |

ಲಕ್ನೋ: ಸ್ಮಾರ್ಟ್‌ಫೋನ್‌ ಅನ್ನು ಚಾರ್ಜ್‌ಗೆ ಹಾಕಿ, ಅದರ ಸಮೀಪದಲ್ಲಿಯೇ ಪುಟ್ಟ ಮಕ್ಕಳನ್ನು ಮಲಗಿಸಿ ಹೋದಿರಿ ಜೋಕೆ! ಯಾಕೆ ಎಂದರೆ ಈ ಸುದ್ದಿ ಓದಿ. ಉತ್ತರ ಪ್ರದೇಶದ ಬರೇಲಿಯಲ್ಲಿ ಕುಸುಮ ಎಂಬುವರು ಹಾಸಿಗೆಯಲ್ಲಿ  ಎಂಟು ತಿಂಗಳ ಹೆಣ್ಣು ಮಗುವನ್ನು ಮಲಗಿಸಿ, ಬಳಿಯಲ್ಲಿಯೇ ಸ್ಮಾರ್ಟ್‌ಫೋನ್‌ ಅನ್ನು ಚಾರ್ಜ್‌ಗೆ ಇರಿಸಿದ್ದಾರೆ. ಅದು ಸ್ಫೋಟಗೊಂಡು ಮಗು ಸಾವನ್ನಪ್ಪಿದೆ.

Advertisement

ಆರು ತಿಂಗಳ ಹಿಂದೆ ಖರೀದಿಸಿದ್ದ ಆ ಫೋನಿನ ಬ್ಯಾಟರಿ ಹಾಳಾಗಿ ಊದಿಕೊಂಡಿತ್ತು. ಆದರೆ ಅದನ್ನು ಲೆಕ್ಕಿಸದ ತಾಯಿ ಫೋನ್‌ ಅನ್ನು ಚಾರ್ಜಿಗೆ ಹಾಕಿಟ್ಟಿದ್ದರು. ತಾಯಿ ಮನೆಯಿಂದ ಹೊರಗಿದ್ದಾಗ ಫೋನ್‌ ಸ್ಫೋಟಗೊಂಡಿದೆ. ಅದರಿಂದಾಗಿ ಮಗು ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಪ್ರಾಣ ಬಿಟ್ಟಿದೆ.

ಕುಸುಮ, ಆಕೆಯ ಪತಿ ಸುನಿಲ್‌ ಮತ್ತು ಇಬ್ಬರು ಹೆಣ್ಣು ಮಕ್ಕಳು ನಿರ್ಮಾಣ ಹಂತದ ಮನೆಯಲ್ಲಿ ವಾಸವಿದ್ದು, ಅಲ್ಲಿಗೆ ವಿದ್ಯುತ್‌ ಸಂಪರ್ಕವೂ ಇರಲಿಲ್ಲ. ಸೌರಶಕ್ತಿಯ ಮೂಲಕ ಅದರ ಮೂಲಕ ಮೊಬೈಲ್‌ ಚಾರ್ಜ್‌ ಮಾಡಲು ಮತ್ತು ದೈನಂದಿನ ಉಪಯೋಗಕ್ಕೆ ಬಳಕೆ ಮಾಡುತ್ತಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next