Advertisement

ಸ್ಯಾಂಡಲ್ವುಡ್ ನಟಿ ನೇಹಾ ಶೆಟ್ಟಿ ತಂದೆ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ

02:01 PM Aug 02, 2021 | Team Udayavani |

ಬೆಂಗಳೂರು:  ‘ಮುಂಗಾರು ಮಳೆ-2′ ಚಿತ್ರ ನಟಿ ನೇಹಾ ಶೆಟ್ಟಿ ಅವರ ತಂದೆ ಉದ್ಯಮಿ ಹರಿರಾಜ್‌ ಶೆಟ್ಟಿ ವಿರುದ್ಧ ಇದೀಗ 250 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.

Advertisement

ಗ್ಯಾಂಬ್ಲಿಂಗ್ ನಡೆಸುತ್ತಿದ್ದ ಆರೋಪದ ಮೇಲೆ ಕೆಲವು ತಿಂಗಳ ಹಿಂದೆ ಇವರ ಬಂಧನವಾಗಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ಪೊಲೀಸರು   ಅವರ ವಿರುದ್ಧ 250 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.

ಹರಿರಾಜ್‌ ಶೆಟ್ಟಿ  ಅವರು ಕ್ಲಬ್‌ ನಿರ್ಮಿಸಿ, ಅದರಲ್ಲಿ ಜೂಜು, ವಿಡಿಯೋ ಗೇಮ್ ಪಾರ್ಲರ್ ನಡೆಸುತ್ತಿದ್ದರು. ಇದರ ಮೇಲೆ ದಾಳಿ ನಡೆಸಿದ್ದ ಪೊಲೀಸರು  ಹರಿರಾಜ್‌ ಶೆಟ್ಟಿ ಅವರನ್ನು ಬಂಧಿಸಿದ್ದರು.

ಸುಮಾರು 14ಕ್ಕೂ ಹೆಚ್ಚಿನ ಕಡೆ ಹರಿರಾಜ್‌ ಜೂಜು ನಡೆಸುತ್ತಿದ್ದರು. ಹರಿರಾಜ್‌ರನ್ನು ಜೂನ್‌ 5ರಂದು ಬಂಧಿಸಿಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next