Advertisement

ತಿರುಪತಿ, ಚಾರ್‌ಧಾಮ್‌ಗೆ ಹೋಗಿ

03:10 AM Jun 03, 2020 | Sriram |

ತಿರುಪತಿ/ಡೆಹ್ರಾಡೂನ್‌: ದೇಶಾದ್ಯಂತ ಜೂ.8ರಿಂದ ಲಾಕ್‌ಡೌನ್‌ ನಿಯಮಗಳು ಸರಳೀಕೃತ ಗೊಂಡು ಹೊಸ ನಿಯಮ ಗಳು ಜಾರಿಯಾಗಲಿವೆ. ಅದಕ್ಕೆ ಪೂರಕವಾಗಿಯೇ ಮುಂದಿನ ಸೋಮವಾರ ತಿರುಪತಿ ದೇಗುಲ ಮತ್ತೆ ಭಕ್ತರಿಗಾಗಿ ತೆರೆಯಲಿದೆ ಮತ್ತು ಚಾರ್‌ಧಾಮ್‌ ಯಾತ್ರೆ ಕೂಡ ಸೀಮಿತ ರೀತಿಯಲ್ಲಿ ಆರಂಭವಾಗಲಿದೆ..

Advertisement

ಕೇಂದ್ರ ಸರಕಾರದ ನಿಯಮ ಸಡಿಲಿಕೆ ಮಾಡಿರುವ ಹಿನ್ನೆಲೆಯಲ್ಲಿ ಜೂ.8ರಿಂದ ತಿರುಪತಿಯ ವೆಂಕಟೇಶ್ವರನ ದೇವಾಲಯದ ಬಾಗಿಲು ತೆರೆದು, ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲು ಟಿಟಿಡಿಗೆ ಆಂಧ್ರಪ್ರದೇಶ ಸರಕಾರ ಅನುಮತಿ ನೀಡಿದೆ.

ದರ್ಶನದ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅನುಕೂಲವಾಗುವಂತೆ ಭಕ್ತರ ಸಾಲಿನ ವ್ಯವಸ್ಥೆಯಲ್ಲಿ ಮಾರ್ಪಾಡುಗಳನ್ನು ಮಾಡಲಾಗುತ್ತಿದೆ. ಜತೆಗೆ, ಒಂದು ದಿನದಲ್ಲಿ ದರ್ಶನ ಪಡೆಯುವ ಭಕ್ತರ ಸಂಖ್ಯೆಯನ್ನು ಮಿತಿಗೊಳಿಸಲು ಉದ್ದೇಶಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜೂ.5ರಿಂದ ಪ್ರಯೋಗಾತ್ಮಕವಾಗಿ ಸ್ಥಳೀಯ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತಿದ್ದು, ಈ ವೇಳೆ, ಭಕ್ತರು ಮತ್ತು ಟಿಟಿಡಿ ಅಧಿಕಾರಿಗಳಿಗೆ ಕೋವಿಡ್-19 ಮಾರ್ಗಸೂಚಿ ಅನುಸರಿಸುವ ನಿಟ್ಟಿನಲ್ಲಿ ತರಬೇತಿ ನೀಡಲಾಗುವುದು.

ಸೀಮಿತ ಅವಕಾಶ: ಚಾರ್‌ಧಾಮ್‌ ಯಾತ್ರೆ ಕೂಡ ಜೂ.8ರಿಂದ ಆರಂಭಗೊಳ್ಳಲಿದ್ದು, ಸೀಮಿತ ಭಕ್ತಾದಿಗಳಿಗೆ ಮಾತ್ರವೇ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಉತ್ತರಾಖಂಡ ಸರಕಾರ ತಿಳಿಸಿದೆ.

“ಸೀಮಿತ ಭಕ್ತರಿಗೆ ಅವಕಾಶ ಕಲ್ಪಿಸುವ ಕುರಿತು ಆಯಾ ರಾಜ್ಯಗಳೊಂದಿಗೆ ಮಾತುಕತೆ ನಡೆಸಲಾಗುತ್ತದೆ. ಅದರ ಅನಂತರವಷ್ಟೇ ಅಲ್ಲಿನ ಭಕ್ತರಿಗೆ ಅವಕಾಶ ನೀಡುತ್ತೇವೆ. ಆಯಾ ರಾಜ್ಯಗಳು ಭಕ್ತಾದಿಗಳಿಗೆ ಬಸ್‌ ವ್ಯವಸ್ಥೆ ಕಲ್ಪಿಸಿದರಷ್ಟೇ ಉತ್ತರಖಂಡಕ್ಕೆ ಪ್ರವೇಶ ಸಿಗುತ್ತದೆ’ ಎಂದು ಸಚಿವ ಮದನ್‌ ಕೌಶಿಕ್‌ ಸ್ಪಷ್ಟಪಡಿಸಿದ್ದಾರೆ.

Advertisement

ಬದರಿನಾಥ, ಕೇದಾರನಾಥ, ಗಂಗೋತ್ರಿ, ಯಮುನೋತ್ರಿ ದೇಗುಲಗಳನ್ನು ಒಂದೂವರೆ ತಿಂಗಳ ಹಿಂದೆಯೇ ತೆರೆಯ ಲಾಗಿದೆ. ಆದರೆ, ಕೋವಿಡ್-19 ಹಬ್ಬುವ ಭೀತಿಯಿಂದಾಗಿ ಭಕ್ತಾದಿಗಳ ಯಾತ್ರೆಗೆ ಅವಕಾಶ ಲಭ್ಯವಾಗಿರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next