ಡೆಹ್ರಾಡೂನ್: ಪ್ರಸಕ್ತ ಸಾಲಿನ ಚಾರ್‌ಧಾಮ್ ಯಾತ್ರೆ ಎ.22ರಂದು ಶುರುವಾಗಲಿದೆ ಎಂದು ಉತ್ತರಾಖಂಡ ಸರಕಾರ ಪ್ರಕಟಿಸಿದೆ. ಅದಕ್ಕೆ ಅನುಗುಣವಾಗಿ ಕೇದಾರನಾಥ ದೇಗುಲದ ಬಾಗಿಲು ಬೆಳಗ್ಗೆ 6.20ಕ್ಕೆ ತೆರೆಯಲಿದೆ.
ಗಂಗೋತ್ರಿ ಮತ್ತು ಯಮುನೋತ್ರಿ ದೇಗುಲಗಳ ಬಾಗಿಲು ಅದೇ ದಿನ ತೆರೆಯಲಿದ್ದರೆ, ಬದರಿನಾಥ ದೇಗುಲ ಎ.27ರಂದು ಭಕ್ತರಿಗಾಗಿ ಮುಕ್ತವಾಗಲಿದೆ.
ಜೋಶಿಮಠದಲ್ಲಿ ಭೂಕುಸಿತ ಉಂಟಾಗಿರುವ ಆತಂಕದ ನಡುವೆಯೇ ಪ್ರಸಕ್ತ ವರ್ಷದ ಚಾರ್‌ಧಾಮ್ ಯಾತ್ರೆ ನಡೆಯಲಿದೆ. ಸದ್ಯಕ್ಕೆ ಸರಕಾರದ ಪ್ರಕಾರ ಜೋಶಿಮಠದ ಮಾರ್ಗವನ್ನೇ ಬಳಕೆ ಮಾಡಲಾಗುತ್ತದೆ. ಸಿಎಂ ಪುಷ್ಕರ್ ಸಿಂಗ್ ಧಾಮಿ ಮಾತನಾಡಿ ಭೂಕುಸಿತದಿಂದ ಯಾತ್ರೆಗೆ ತೊಂದರೆಯಾಗಲಾರದು ಎಂದು ಹೇಳಿ ದ್ದಾರೆ. ಕಳೆದ ವರ್ಷ ಒಟ್ಟು 45 ಲಕ್ಷ ಮಂದಿ ನಾಲ್ಕೂ ಕ್ಷೇತ್ರಗಳಿಗೆ ಭೇಟಿ ನೀಡಿದ್ದರು.