ಕಾಬೂಲ್: ಅಫ್ಘಾನಿಸ್ತಾನವನ್ನು ತಾಲಿಬಾನ್ ತನ್ನ ವಶಕ್ಕೆ ತೆಗೆದುಕೊಂಡ ಬೆನ್ನಲ್ಲೇ ಭೀತಿಗೊಳಗಾದ ಸಾವಿರಾರು ಮಂದಿ ಅಫ್ಘಾನಿಸ್ತಾನದಿಂದ ಪಲಾಯಗೈಯಲು ಕಾಬೂಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಲಗ್ಗೆ ಇಟ್ಟಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಇದನ್ನೂ ಓದಿ:ನಮ್ಮ ಕೈ ಕಟ್ಟಿ ಹಾಕಿ ಉಗ್ರರಿಗೆ ದೇಶ ಮಾರಾಟ: ಅಫ್ಘಾನ್ ಅಧ್ಯಕ್ಷರ ವಿರುದ್ಧ ರಕ್ಷಣಾ ಸಚಿವ
ಭೀತಿಗೊಳಗಾಗಿರುವ ಸಾವಿರಾರು ಅಫ್ಘಾನ್ ಜನರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿ ವಿಮಾನದ ಮೂಲಕ ಪಲಾಯನವಾಗಲು ಯತ್ನಿಸುತ್ತಿರುವ ಫೋಟೋ, ವಿಡಿಯೋಗಳು ಹರಿದಾಡುತ್ತಿದ್ದು, ಜನರ ನೂಕುನುಗ್ಗಲು, ಗುಂಪನ್ನು ಚದುರಿಸಲು ಅಮೆರಿಕ ಸೇನಾಪಡೆಗಳು ಗಾಳಿಯಲ್ಲಿ ಗುಂಡು ಹಾರಿಸುತ್ತಿರುವ ದೃಶ್ಯ ಕೂಡಾ ಹರಿದಾಡುತ್ತಿರುವುದಾಗಿ ವರದಿ ವಿವರಿಸಿದೆ.
ಕಾಬೂಲ್ ನ ಹಮೀದ್ ಕರ್ಜೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನವನ್ನೇರಲು ಸಾವಿರಾರು ಮಂದಿ ಪ್ರಯತ್ನಿಸುತ್ತಿದ್ದು ಇದನ್ನು ತಡೆಯಲು ಅಮೆರಿಕ ಪಡೆ ಗುಂಪನ್ನು ಚದುರಿಸಲು ಗಾಳಿಯಲ್ಲಿ ಗುಂಡು ಹಾರಿಸಿರುವುದಾಗಿ ವರದಿ ತಿಳಿಸಿದೆ.
ಕಾಬೂಲ್ ನಿಂದ ಸಾವಿರಾರು ಜನರು ಪಲಾಯನ ಮಾಡುತ್ತಿರುವ ದೃಶ್ಯ ಹರಿದಾಡುತ್ತಿದ್ದು, ಒಂದೆಡೆ ತಾಲಿಬಾನ್ ಅಟ್ಟಹಾಸಕ್ಕೆ ಅಫ್ಘಾನ್ ಜನರು ನಲುಗಿ ಹೋಗಿದ್ದು, ಮುಂಬರುವ ಭೀಭತ್ಸ ದಿನಗಳನ್ನು ನೆನೆದು ಜನರು ಅಫ್ಘಾನ್ ತೊರೆಯುತ್ತಿರುವುದಾಗಿ ಅಂತರಾಷ್ಟ್ರೀಯ ಮಾಧ್ಯಮವೊಂದು ವಿವರಿಸಿದೆ.