Advertisement
ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಗಳಾಗಿ ಕಣಕ್ಕೆ ಇಳಿಯಲು ಈಗಾಗಲೆ ಏಳು ಮಂದಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿ ದ್ದಾರೆ. ಇವರಲ್ಲಿ ಯಾರಿಗೆ ಒಲಿಯಲಿದೆ ಆ ಅದೃಷ್ಟ ಎನ್ನುವುದು ಮಾತ್ರ ಇಂದಿಗೂ ನಿಗೂಢವಾಗಿದೆ. ಆದರೂ, ಅರ್ಜಿ ಸಲ್ಲಿಸಿದ ವರೆಲ್ಲ ಸುಮ್ಮನೆ ಕುಳಿತಿಲ್ಲ. ತಮ್ಮದೇ ತಂತ್ರಗಾರಿಕೆಯಲ್ಲಿ ಪಕ್ಷದ ವರಿ ಷ್ಠರ ಬಳಿ ಟಿಕೆಟ್‌ಗೆ ಲಾಬಿ ನಡೆಸಿದ್ದು, ಕ್ಷೇತ್ರದ ಮತದಾರರನ್ನು ಒಂದಲ್ಲ ಒಂದು ರೀತಿಯಲ್ಲಿ ತಲುಪುವ ಪ್ರಯತ್ನ ಮಾಡುತ್ತಿದ್ದಾರೆ.
Related Articles
Advertisement
ಶ್ರೀ ಕಂಠಯ್ಯರ ಶ್ರೀರಕ್ಷೆ: ಶ್ರೀ ಕಂಠಯ್ಯ ಕುಟುಂಬದವರು ಕ್ಷೇತ್ರದಲ್ಲಿ ಅಷ್ಟಾಗಿ ಸಂಚಾರ ಮಾಡಿ ಮತದಾರರನ್ನು ತಲುಪುವ ಹರಸಾಹಕ್ಕೆ ಕೈ ಹಾಕಿಲ್ಲ. ಅವರಿಗೆ ಶ್ರೀಕಂಠಯ್ಯ ಹೆಸರೇ ಶ್ರೀ ರಕ್ಷೆಯಾಗಿದೆ. ಸ್ಥಳೀಯವಾಗಿ ವಾಸವಾಗಿರುವ ವಿಜಯಕುಮಾರ್ ಪಕ್ಷದ ಸಭೆ ಸಮಾರಂಭದಲ್ಲಿ ಮಾತ್ರ ಪಾಲ್ಗೊಳ್ಳುತ್ತಾರೆ. ಉಳಿದಂತೆ ತಾವಾಯಿತು ತಮ್ಮ ಕೆಲಸವಾಯಿತು ಎಂದುಕೊಂಡಿದ್ದು ತಮ್ಮ ಪತ್ನಿ ರಾಜೇಶ್ವರಿಗೆ ಟಿಕೆಟ್ ಕೊಡುವಂತೆ ಅರ್ಜಿ ಸಲ್ಲಿಸಿದ್ದಾರೆ.
ಚುನಾವಣೆ ವೇಳೆ ಪ್ರಜ್ವಲಿಸಿದ ದೀಪು: ಶ್ರೀಕಂಠಯ್ಯ ಜೇಷ್ಠ ಪುತ್ರ ಚಂದ್ರು ಅವರ ಪುತ್ರ ಲಲಿತ ರಾಘವ್ (ದೀಪು) ತಾವು ಶಾಸಕ ಸ್ಥಾನಕ್ಕೆ ಅಭ್ಯರ್ಥಿಯಾಗುವ ಅಭಿಪ್ರಾಯ ವ್ಯಕ್ತಪಡಿಸಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದಾರೆ. ಬೆಂಗಳೂರಿನಲ್ಲಿ ವಾಸವಿದ್ದು ಗ್ರಾಪಂ, ತಾಲೂಕು ಹಾಗೂ ಜಿಪಂ ಚುನಾ ವಣೆ ವೇಳೆ ಸ್ಥಳೀಯವಾಗಿ ವಾಸವಿರುವುದನ್ನು ಹಲವು ವರ್ಷದಿಂದ ರೂಢಿಸಿಕೊಂಡು ಬಂದಿದ್ದಾರೆ. ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದರು, ಕ್ಷೇತ್ರದಲ್ಲಿ ವಾಸವಿಲ್ಲ. ಆದರೂ, ಟಿಕೆಟ್ ಪಡೆಯಲು ಬೆಂಗಳೂರು ಮಟ್ಟದಲ್ಲಿ ಲಾಭಿ ಮಾಡುತ್ತಿದ್ದಾರೆ.
ಪ್ರಿಯಾಂಕ ಖರ್ಗೆ ಒಡನಾಟ: ಶ್ರೀಕಂಠಯ್ಯ ಹಾಗೂ ಖರ್ಗೆ ಉತ್ತಮ ಬಾಂಧವ್ಯ ಹೊಂದಿದ್ದರು, ಇದೇ ಹಾದಿಯನ್ನು ಮುಂದುವರೆಸಿರುವ ದೀಪು, ಖ ರ್ಗೆ ಪುತ್ರ ಪ್ರಿಯಾಂಕ ಖರ್ಗೆ ಜತೆ ಉತ್ತಮ ಬಾಂಧವ್ಯ ಹೊಂದಿದ್ದು ಸ್ನೇಹಿತರಾಗಿದ್ದಾರೆ. ಈಗ ಖರ್ಗೆ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ. ಇಂತಹ ವೇಳೆ ಶ್ರೀಕಂಠಯ್ಯರ ಕುಟುಂಬಕ್ಕೆ ನಿಷ್ಠೆ ತೋರುತ್ತಾರೆ ಎನ್ನುವ ಮಾತು ಕ್ಷೇತ್ರದಲ್ಲಿ ಕೇಳಿ ಬರುತ್ತಿದೆ. ಇನ್ನು ಪ್ರಿಯಾಂಕ ಹಾಗೂ ದೀಪು ಸ್ನೇಹವನ್ನು ಕ್ಷೇತ್ರದ ಜನತೆ ಮಾತನಾಡುತ್ತಿದ್ದು ಟಿಕೆಟ್ ದೀಪುಗೆ ದೊರೆಯುವ ಲಕ್ಷಣಗಳು ಕಾಣುತ್ತಿವೆ.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜೆಎಂಆರ್: ಜೆ.ಎಂ. ರಾಮಚಂದ್ರ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡುವ ಮೂಲಕ ಸ್ಥಳಿಯವಾಗಿ ಉತ್ತಮ ಹೆಸರು ಮಾಡಿದ್ದಾರೆ, ಡಿಕೆಶಿ ಹಾಗೂ ಸಿದ್ದರಾಮಯ್ಯ ಜತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಸ್ಥಳೀಯವಾಗಿ ಕ್ಷೇತ್ರದ ಜನರ ಕೈಗೆ ಸಿಗುವ ಸಹರಳ ವ್ಯಕ್ತಿತ್ವ ಹೊಂದಿದ್ದಾರೆ. ಕಳೆದ ಮೂರು ದಶಕದಿಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಾಗದೆ ಕಾರ್ಯಕರ್ತರು ಅನಾಥರಾಗಿದ್ದಾರೆ. ಈ ಚುನಾವಣೆಯಲ್ಲಿ ಶತಾಯಗತ ಗೆಲುವು ಸಾಧಿಸುವುದೇ ಪಕ್ಷದ ಮುಖಂಡರ ಗುರಿಯಾಗಿದೆ. ಆ ನಿಟ್ಟಿ ನಲ್ಲಿ ಹೋರಾಟಕ್ಕಿಳಿದಿರುವ ವರಿಷ್ಠರು ಏಳು ಮಂದಿಯಲ್ಲಿ ಟಿಕೆಟ್ ಯಾರಿಗೆ ನೀಡಿದರೂ ಒಗ್ಗಟ್ಟಿನಿಂದ ಚುನಾವಣೆ ಎದುರಿಸುತ್ತೇವೆ. -ಜೆ.ಎಂ.ರಾಮಚಂದ್ರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ
ಏಳು ಮಂದಿ ಟಿಕೆಟ್ ಕೇಳುತ್ತಿದ್ದಾರೆ ಎಂದರೆ ಕ್ಷೇತ್ರದಲ್ಲಿ ಪಕ್ಷ ಎಷ್ಟು ಗಟ್ಟಿಯಾಗಿದೆ ಎನ್ನುವುದನ್ನು ಸಾಬೀತಾಗಿದೆ. ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿದ್ದು, ಬಿಜೆಪಿ ಹೊರಗಿಡಲು ಮೈತ್ರಿ ಸರ್ಕಾರ ರಚನೆ ಮಾಡಿದೆ. ಕ್ಷೇತ್ರದ ಹಲವು ಮಂದಿ ಮತದಾರರಲ್ಲಿ ಇಂದಿಗೂ ಗೊಂದಲವಿದೆ. ಇದನ್ನು ಹೋಗಲಾಡಿಸಲು ವರಿಷ್ಠರು ಆದಷ್ಟು ಬೇಗೆ ಅಭ್ಯರ್ಥಿ ಘೋಷಣೆ ಮಾಡುವುದು ಸೂಕ್ತ. -ಎಂ.ಎ.ಗೋಪಾಲಸ್ವಾಮಿ, ಮಾಜಿ ಎಂಲ್‌ಸಿ.
-ಶಾಮಸುಂದರ್ ಕೆ. ಅಣ್ಣೇನಹಳ್ಳಿ