ಗಂಗಾವತಿ: ಗಂಗಾವತಿ ಆರಾಧ್ಯದೈವ ಶ್ರೀ ಚನ್ನಬಸವಸ್ವಾಮಿಯ ೭೭ನೇಯ ಆರಾಧನಾ ಮಹೋತ್ಸವದ ನಿಮಿತ್ತ ಮಹಾರಥೋತ್ಸವ ಬುಧವಾರ ಸಂಜೆ ಸಹಸ್ರಾರು ಭಕ್ತರ ಮಧ್ಯೆ ಶ್ರದ್ದೆಭಕ್ತಿಯಿಂದ ಜರುಗಿತು.
ಜಾತ್ರೆಯ ನಿಮಿತ್ತ ಶ್ರೀ ಚನ್ನಬಸವಸ್ವಾಮಿ ಕತೃಗದ್ದು ಮತ್ತು ಸ್ವಾಮಿ ಮೂರ್ತಿಗೆ ಹೂವಿನಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ಮೂರು ದಿನಗಳ ಕಾಲ ಹೂವಿನ ಪಲ್ಲಕ್ಕಿ,ಮುತ್ತಿನ ಪಲ್ಲಕ್ಕಿ ಸೇರಿ ನಗರದ ಪ್ರಮುಖ ರಸ್ತೆಗಳಲ್ಲಿ ಶ್ರೀ ಚನ್ನಬಸವಸ್ವಾಮಿ ಮೂರ್ತಿಯ ಪಲ್ಲಕ್ಕಿ ಮೆರವಣಿಗೆ ಜರುಗಿ ಬುಧವಾರ ಸಂಜೆ ಶ್ರೀ ಮಲ್ಲಿಕಾರ್ಜುನ ಹಾಗೂ ಶ್ರೀ ಚನ್ನಬಸವಸ್ವಾಮಿ ಜೋಡಿ ಮಹಾರಥೋತ್ಸವ ಜರುಗಿತು. ಜಾತ್ರೆಯ ನಿಮಿತ್ತ ಗಂಗಾವತಿ, ಬಳ್ಳಾರಿ, ಸಿಂಧನೂರು, ಹೊಸಪೇಟೆ, ಕೊಪ್ಪಳ ,ಮಾನ್ವಿ ಹಾಗೂ ಸಿರಗುಪ್ಪ ಸೇರಿ ಗ್ರಾಮೀಣ ಭಾಗದಿಂದ ಭಕ್ತರು ಪಾದಯಾತ್ರೆಯಲ್ಲಿ ಆಗಮಿಸಿ ಹರಕೆ ತೀರಿಸಿದರು.ಪಾದಯಾತ್ರಿಗಳಿಗೆ ಮಾರ್ಗದುದ್ದಕ್ಕೂ ಕುಡಿಯುವ ನೀರು ಉಪಹಾರದ ವ್ಯವಸ್ಥೆಯನ್ನು ಸೇವಾಕರ್ತರು ಮಾಡಿದ್ದರು.
ಮಹಾರಥೋತ್ಸವದಲ್ಲಿ ಶಾಸಕ ಪರಣ್ಣ ಮುನವಳ್ಳಿ, ಮಾಜಿ ಸಚಿವ ಗಾಲಿ ಜನಾರ್ದನರಡ್ಡಿ, ಮಾಜಿ ಸಂಸದ ಶಿವರಾಮಗೌಡ,ಡಿಎಸ್ಪಿ ರುದ್ರೇಶ ಉಜ್ಜನಕೊಪ್ಪ,ಪಿಐ ವೆಂಕಟಸ್ವಾಮಿ ಸೇರಿ ನಗರದ ಪ್ರಮುಖರಿದ್ದರು.
ಅಭಿಮಾನಿಗಳ ಪೈಪೋಟಿ: ಶ್ರೀ ಚನ್ನಬಸವಸ್ವಾಮಿ ಮಹಾರಥೋತ್ಸವದಲ್ಲಿ ಶಾಸಕ ಪರಣ್ಣ ಮುನವಳ್ಳಿ ಹಾಗೂ ಮಾಜಿ ಸಚಿವ ಗಾಲಿ ಜನಾರ್ದನರಡ್ಡಿಯವರ ಅಭಿಮಾನಿಗಳು ಬಾಳೆ ಹಣ್ಣಿನ ಮೇಲೆ ತಮ್ಮ ನಾಯಕರ ಹೆಸರು ಬರೆದು ಮುಂದಿನ ಶಾಸಕ ರೆಂದು ಬರೆದು ರಥಕ್ಕೆ ಎಸೆದು ಅಭಿಮಾನ ಮೆರೆದ್ದದ್ದು ಕಂಡು ಬಂತು.
Related Articles
ಇದನ್ನೂ ಓದಿ: “ನಾನು ಭಾರತೀಯ ಹಾಗಾಗಿ…’ ವಿಮಾನ ನಿಲ್ದಾಣದಲ್ಲಿನ ವ್ಯಂಗ್ಯಕ್ಕೆ ಸತೀಶ್ ಶಾ ಪ್ರತ್ಯುತ್ತರ