Advertisement

ರಾಜ್ಯ ಬಿಜೆಪಿ ಪದಾಧಿಕಾರಿಗಳಿಗೆ ಉಸ್ತುವಾರಿ ವಿಭಾಗ ಬದಲಾವಣೆ

09:02 PM Aug 19, 2022 | Team Udayavani |

ಬೆಂಗಳೂರು: ಬಿಜೆಪಿ ರಾಜ್ಯ ಪದಾಧಿಕಾರಿಗಳಿಗೆ ಪಕ್ಷದ ವಿಭಾಗ ಉಸ್ತುವಾರಿ ಮರು ಹಂಚಿಕೆ ಮಾಡಲಾಗಿದೆ. ಗುರುವಾರ ಬೆಂಗಳೂರಿನಲ್ಲಿ ನಡೆದ ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ವಿಭಾಗಗಳ ಉಸ್ತುವಾರಿ ಮರು ಹಂಚಿಕೆ ಮಾಡಲಾಗಿದೆ.

Advertisement

ಬೆಂಗಳೂರು ಗ್ರಾಮಾಂತರ ಮತ್ತು ಶಿವಮೊಗ್ಗ ವಿಭಾಗಗಳ ಉಸ್ತುವಾರಿಯಾಗಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್‌ ಟೆಂಗಿನಕಾಯಿ, ಬೆಂಗಳೂರು ಮತ್ತು ಬಳ್ಳಾರಿ ವಿಭಾಗಗಳ ಉಸ್ತುವಾರಿಯಾಗಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಬೆಳಗಾವಿ ಮತ್ತು ಮೈಸೂರು ವಿಭಾಗಗಳ ಉಸ್ತುವಾರಿಯಾಗಿ ರಾಜ್ಯ ಉಪಾಧ್ಯಕ್ಷ ನಿರ್ಮಲ್‌ ಕುಮಾರ್‌ ಸುರಾನಾ, ಮಂಗಳೂರು ಮತ್ತು ಕಲಬುರಗಿ ವಿಭಾಗಗಳ ಉಸ್ತುವಾರಿಯಾಗಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌. ರವಿಕುಮಾರ್‌ ಹಾಗೂ ಧಾರವಾಡ ಮತ್ತು ದಾವಣಗೆರೆ ವಿಭಾಗಗಳ ಉಸ್ತುವಾರಿಯಾಗಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ ಅವರಿಗೆ ವಹಿಸಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ

Advertisement

Udayavani is now on Telegram. Click here to join our channel and stay updated with the latest news.

Next