Advertisement

Change; ರಾವಣನನ್ನು ಮಾತ್ರ ಪೂಜಿಸುವ ಗ್ರಾಮದಲ್ಲಿ ಈಗ ರಾಮಾರಾಧನೆ!

10:58 PM Jan 21, 2024 | Team Udayavani |

ರಾಮಮಂದಿರ ಉದ್ಘಾಟನೆಯು ಹಲವು ಪ್ರಥ ಮಗಳಿಗೆ ಸಾಕ್ಷಿಯಾಗುತ್ತಿದ್ದು, ಇದೀಗ ತಲತಲಾಂತರದಿಂದ ರಾವಣನನ್ನೇ ಪೂಜಿಸುತ್ತಾ, ರಾವಣ ತಮ್ಮ ಪೂರ್ವಜನೆಂದು ನಂಬಿ ಆತನ ಮೇಲಿನ ಗೌರವಕ್ಕೆ ದಸರಾ ಹಬ್ಬವನ್ನೇ ಆಚರಿಸದೇ ಇರುವ ಗ್ರಾಮವೊಂದರಲ್ಲಿ ಮೊಟ್ಟ ಮೊದಲ ಬಾರಿಗೆ ರಾಮ ನಾಮದ ಜಪ ಶುರುವಾಗಿದೆ.

Advertisement

ಹೌದು, ಗ್ರೇಟರ್‌ ನೋಯ್ಡಾದ ಬಿಸಾರಕ್‌ ಗ್ರಾಮದ ಇತಿಹಾಸದಲ್ಲೇ ಮೊದಲ ಬಾರಿಗೆ ರಾಮ, ಸೀತೆ, ಲಕ್ಷ್ಮಣ ಮತ್ತು ಹನುಮಂತರ ವಿಗ್ರಹಗಳನ್ನಿಟ್ಟು ಆರಾಧಿಸಲಾಗುತ್ತಿದೆ. ರಾವಣೇಶ್ವರನ ತಂದೆ ಹಾಗೂ ಮಹಾಶಿವಭಕ್ತರಾಗಿದ್ದ ವಿಶ್ರವನು ಬಿಸಾರಕ್‌ ಗ್ರಾಮದಲ್ಲಿಯೇ ಪರಮೇಶ್ವರನನ್ನು ಪೂಜಿಸಿದ್ದಾನೆಂಬುದು ಇಲ್ಲಿನ ನಂಬಿಕೆ. ಈ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ರಾವಣೇಶ್ವರನನ್ನು ಮಾತ್ರ ಪೂಜಿಸ ಲಾಗುತ್ತಿತ್ತು. ಆದರೀಗ ಬಿಸಾರಕ್‌ನ ಶಿವ ದೇಗುಲದಲ್ಲಿ ಶ್ರೀರಾಮ ಆರಾಧನೆ ಶುರುವಾಗಿದೆ. ಸೋಮ ವಾರ ಭಜನೆ, ದೀಪೋ ತ್ಸವ ಮತ್ತು ಯಾಗಗಳು ನಡೆ ಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next