Advertisement

ಚಂದ್ರಯಾನ 2 : ಆನ್‌ಲೈನ್‌ ನೋಂದಣಿ: ವೆಬ್‌ಸೈಟ್ ಕ್ರ್ಯಾಶ್‌

02:48 AM Jul 05, 2019 | Team Udayavani |

ಹೊಸದಿಲ್ಲಿ: ಚಂದ್ರಯಾನ-2 ನೇರ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿರುವ ಇಸ್ರೋ ಗುರುವಾರ ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಿತ್ತಾದರೂ, ತಾಂತ್ರಿಕ ದೋಷದಿಂದ ನೋಂದಣಿ ಮಾಡಿಕೊಳ್ಳಲು ಜನರಿಗೆ ಸಾಧ್ಯವಾಗಲಿಲ್ಲ. ನೋಂದಣಿಗಾಗಿ ಲಕ್ಷಾಂತರ ಜನರು ಇಸ್ರೋದ ವೆಬ್‌ಸೈಟ್‌ಗೆ ಲಾಗಿನ್‌ ಮಾಡಿದ್ದರಿಂದ ನೋಂದಣಿಗಾಗಿ ನಿಗದಿಪಡಿಸಿದ ವೆಬ್‌ ಪುಟವನ್ನು ತೆರೆಯಲು ಸಾಧ್ಯವಾಗಲಿಲ್ಲ.

Advertisement

ಗುರುವಾರ ಮಧ್ಯ ರಾತ್ರಿ 12 ಗಂಟೆಯಿಂದ ನೋಂದಣಿ ಮಾಡಿಕೊಳ್ಳಲು ಇಸ್ರೋ ಅವಕಾಶ ನೀಡಿತ್ತು. ಕೇವಲ 5 ಸಾವಿರ ಜನರಿಗೆ ಈ ಅವಕಾಶ ಒದಗಿಸುವು ದಾಗಿ ಇಸ್ರೋ ಹೇಳಿದ್ದರಿಂದ, ಲಕ್ಷಾಂತರ ಜನರು ಒಂದೇ ಬಾರಿಗೆ ವೆಬ್‌ಪುಟ ತೆರೆಯಲು ಯತ್ನಿಸಿದ್ದಾರೆ. ಹಲವರು ಈ ಬಗ್ಗೆ ಟ್ವಿಟರ್‌ನಲ್ಲಿ ಹೇಳಿಕೊಂಡಿದ್ದು, ಇನ್ನೊಂದು ದಿನ ನೋಂದಣಿಗೆ ಅವಕಾಶ ನೀಡುವಂತೆ ಕೋರಿಕೊಂಡಿದ್ದಾರೆ. ವೆಬ್‌ಪುಟದಲ್ಲಿ ನೋಂದಣಿ ಮಾಡುವವರು ತಮ್ಮ ಹೆಸರು, ವಿಳಾಸ, ವಯಸ್ಸು ಹಾಗೂ ಇತರ ವಿವರಗಳನ್ನು ನಮೂದಿಸಬೇಕಿದ್ದು, ಇದರ ಆಧಾರದಲ್ಲೇ ದಾಖಲೆಗಳನ್ನು ಪರಿಶೀಲಿಸಿ ಶ್ರೀಹರಿಕೋಟಾದಲ್ಲಿ ಉಡಾವಣಾ ನೆಲೆಯ ಬಳಿ ವೀಕ್ಷಿಕರ ಗ್ಯಾಲರಿಗೆ ಪ್ರವೇಶ ಕಲ್ಪಿಸಲಾಗುತ್ತದೆ. ಜುಲೈ 15 ರಂದು ರಾತ್ರಿ 2.51 ಕ್ಕೆ ಶ್ರೀಹರಿಕೋಟಾ ಉಡ್ಡಯನ ನೆಲೆಯಿಂದ ಉಡಾವಣೆಯಾಗಲಿದ್ದು, 600 ಕೋಟಿ ರೂ. ಯೋಜನೆ ಅತ್ಯಂತ ಮಹತ್ವದ್ದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next