ಬೆಂಗಳೂರು: ಇಡೀ ಜಗತ್ತೇ ಕುತೂಹಲದಿಂದ ಕಾಯುತ್ತಿದ್ದ ಇಸ್ರೋದ ಬಹುನಿರೀಕ್ಷಿತ ಚಂದ್ರಯಾನ 2 ಉಡ್ಡಯನ ತಾಂತ್ರಿಕ ದೋಷದಿಂದಾಗಿ ಸೋಮವಾರ ನಸುಕಿನ ವೇಳೆ ಮುಂದೂಡಲಾಗಿದೆ ಎಂದು ಇಸ್ರೋ ತಿಳಿಸಿದೆ.
ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಉಡಾವಣ ನೆಲೆಯಿಂದ ಇಂದು ಮುಂಜಾನೆ 2.51ಕ್ಕೆ ಆರ್ಬಿಟರ್, ಲ್ಯಾಂಡರ್ ಹಾಗೂ ರೋವರ್ ಹೊತ್ತ ಪವರ್ ಫುಲ್ ಜಿಎಸ್ ಎಲ್ ವಿ ಎಂಕೆ 3 ರಾಕೆಟ್ ಬಾಹ್ಯಾಕಾಶಕ್ಕೆ ನೆಗೆಯಬೇಕಿತ್ತು.
ಆದರೆ ಕೊನೇ ಕ್ಷಣದ ತಾಂತ್ರಿಕ ದೋಷದಿಂದಾಗಿ ಚಂದ್ರನ ಶೋಧ ನಡೆಸುವ ಇಸ್ರೋದ ಬಹುನಿರೀಕ್ಷೆಯ ಚಂದ್ರಯಾನ 2 ಪಯಣ ಮುಂದೂಡಿಕೆಯಾಗಿದೆ. ಅಲ್ಲದೇ ಚಂದ್ರಯಾನ 2 ಉಡ್ಡಯನದ ಮುಂದಿನ ದಿನಾಂಕ ಪ್ರಕಟಿಸುವುದಾಗಿ ಇಸ್ರೋ ತಿಳಿಸಿದೆ.
Related Articles
ಇಸ್ರೋದ ಚಂದ್ರಯಾನ 2 ಯೋಜನೆಗೆ ಒಟ್ಟು ವೆಚ್ಚ 990 ಕೋಟಿ ರೂಪಾಯಿ, ಇದು ಕಡಿಮೆ ಬಜೆಟ್ ನ ಮಹತ್ತರವಾದ ಯೋಜನೆಯಾಗಿತ್ತು.