Advertisement

ಆ.20ರಂದು ಚಂದ್ರನ ಕಕ್ಷೆಗೆ ಚಂದ್ರಯಾನ – 2 ನೌಕೆ

10:12 AM Aug 13, 2019 | keerthan |

ಅಹಮದಾಬಾದ್‌: ಇತ್ತೀಚೆಗೆ ಉಡಾವಣೆ ಮಾಡಲಾದ ಚಂದ್ರಯಾನ – 2 ನೌಕೆ ಆ.20ರಂದು ಚಂದ್ರನ ಕಕ್ಷೆಗೆ ತಲುಪಲಿದೆ. ಸೆ.7ರಂದು ಅದು ಚಂದ್ರನ ಅಂಗಳಕ್ಕೆ ಇಳಿಯಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮುಖ್ಯಸ್ಥ ಡಾ| ಕೆ.ಶಿವನ್‌ ಹೇಳಿದ್ದಾರೆ.

Advertisement

ಇನ್ನೆರಡೇ ದಿನದಲ್ಲಿ ಭೂಮಿಯ ಕಕ್ಷೆಯನ್ನು ಬಿಟ್ಟು ನೌಕೆ ಹೊರಡಲಿದೆ. ಆ.14ರ ಬೆಳಗ್ಗೆ 3.30ಕ್ಕೆ ಚಂದ್ರನತ್ತ ನೌಕೆ ತೆರಳಲಿದೆ ಎಂದರು.

ಭಾರತೀಯ ಬಾಹ್ಯಾಕಾಶ ಪಿತಾಮಹ, ಖ್ಯಾತ ವಿಜ್ಞಾನಿ ವಿಕ್ರಂ ಸಾರಾಭಾಯಿ ಅವರ ಜನ್ಮ ಶತಾಬ್ದಿ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಲು ನಗರಕ್ಕೆ ಆಗಮಿಸಿದ ವೇಳೆ ಅವರು ಮಾಧ್ಯಮ ಮಂದಿಯೊಂದಿಗೆ ಮಾತನಾಡಿದರು.

ಚಂದ್ರಯಾನ 2 ನೌಕೆ ಉಪಗ್ರಹ, ಲ್ಯಾಂಡರ್‌ ಮತ್ತು ರೋವರ್‌ ಅನ್ನು ಹೊಂದಿದೆ. ಜು.22ರಂದು ಉಡಾವಣೆ ಮಾಡಲಾಗಿದ್ದು, ಸೆ.7ರಂದು ಚಂದ್ರನ ಮೇಲೆ ಇಳಿಯಲಿದೆ. ಜು.22ರ ಬಳಿಕ 5 ಬಾರಿ ಕಕ್ಷೆ ಎತ್ತರಿಸಿದ್ದೇವೆ. ಸದ್ಯ ಅದು ಭೂಮಿ ಸುತ್ತ ತಿರುಗುತ್ತಿದೆ. ಗುರುವಾರ ಚಂದ್ರ ಕಕ್ಷೆಗೆ ನೌಕೆ ಕಳಿಸುವುದು ಪ್ರಮುಖ ಘಟ್ಟವಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next