Advertisement

ಚಂದ್ರಶೇಖರ್‌ ಗುರೂಜಿ ಹತ್ಯೆ: ವಿಚಾರಣೆಯಲ್ಲಿ ಹಂತಕರು ಹೇಳಿದ್ದೇನು!

10:45 AM Jul 06, 2022 | Team Udayavani |

ಹುಬ್ಬಳ್ಳಿ: ಸರಳವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಅವರನ್ನು ಬರ್ಬರವಾಗಿ ಕೊಲೈಗೈದ ದುಷ್ಕರ್ಮಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಮಂಗಳವಾರ ರಾತ್ರಿಯಿಂದ ಬೆಳಗಿನ ಜಾವದವರೆಗೆ ತೀವ್ರ ವಿಚಾರಣೆ ನಡೆಸಿದ್ದಾರೆ. ಕೊಲೆಗೆ ಕಾರಣ ಏನು? ಇದರಲ್ಲಿ ಇನ್ನೂ ಯಾರ ಕೈವಾಡವಿದೆ ಎಂದು ಕೂಲಂಕಷ ತನಿಖೆ ನಡೆಸಿದ್ದಾರೆ.

Advertisement

ಮಹಾನಗರ ಪೊಲೀಸ್ ಆಯುಕ್ತ ಲಾಭೂ ರಾಮ್ ಅವರು ಸ್ವತಃ  ಇಬ್ಬರು ಹಂತಕರನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸುತ್ತಿದ್ದು, ಇಬ್ಬರೂ ಹಣಕಾಸಿನ ವ್ಯವಾಹಾರಕ್ಕೆ ಸಂಬಂಧಿಸಿ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಇದರ  ನಡುವೆ ಮಂಜುನಾಥ, ಗುರೂಜಿ ತನ್ನ ಜಾತಿ ನಿಂದನೆ ಮಾಡಿದ್ದರು. ಈ ಕಾಋಣದಿಂದಾಗಿ ಹತ್ಯೆ ನಡೆಸಿದ್ದೇನೆ ಎಂದಿದ್ದಾನೆ. ಇದಕ್ಕಿಂತ ಹೆಚ್ಚಿನ ವಿಷಯಗಳನ್ನು ಪೊಲೀಸರ ಎದುರು ಹಂತಕರು ಬಾಯಿಬಿಡುತ್ತಿಲ್ಲ ಎನ್ನಲಾಗಿದೆ. ವಿಚಾರಣೆ ವೇಳೆ ಹಂತಕರ ಜತೆಗೆ ಗುರುತಿಸಿಕೊಂಡಿದ್ದ ಕೆಲವರನ್ನು ಪೊಲೀಸರು ಕರೆಸಿ ವಿಚಾರಣೆ ಮುಂದುವರೆಸಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ:ಚಂದ್ರಶೇಖರ ಗುರೂಜಿ ಹತ್ಯೆ: ಐದು ದಿನ ಹಿಂದೆಯೇ ಫೇಸ್‌ಬುಕ್‌ನಲ್ಲಿ ಸುಳಿವು ಕೊಟ್ಟಿದ್ದ ಆರೋಪಿ?

ಪಂಚನಾಮೆ ವೇಳೆ ಹಂತಕರು ಗುರೂಜಿಗೆ 45 ಬಾರಿ ಇರಿದಿದ್ದಾರೆ ಎಂದು ಗೊತ್ತಾಗಿದೆ. ಚಂದ್ರಶೇಖರ್‌ ಗುರೂಜಿಯ ಮೃತದೇಹವನ್ನು  ಕಿಮ್ಸ್ ನ ಶವಾಗಾರದಲ್ಲಿ ಇರಿಸಲಾಗಿದೆ. ಇಂದು ಮರಣೋತ್ತರ ಪರೀಕ್ಷೆ ನಡೆಸಿದ ನಂತರ  ಪಾರ್ಥೀವ ಶರೀರವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next