Advertisement
ಉತ್ತರ ಕರ್ನಾಟಕದ ಪ್ರಖ್ಯಾತ ದೇಗುಲಗಳಲ್ಲಿ ಚಂದ್ರಮೌಳೇಶ್ವರ ದೇವಾಲಯವೂ ಒಂದು. ಇದು ಗಂಡುಮೆಟ್ಟಿದ ನಾಡು ಎಂದೇ ಪ್ರಸಿದ್ಧಿ ಪಡೆದಿರುವ ಹುಬ್ಬಳ್ಳಿ- ಧಾರವಾಡದ ಉಣಕಲ್ ಬಳಿ ಇದೆ. ಸುಮಾರು 900 ವರ್ಷಗಷ್ಟು ಹಳೆಯದಾಗಿರುವ ಈ ದೇವಾಲಯವನ್ನು ಅಮರಶಿಲ್ಪಿ ಜಕಣಾಚಾರಿಯು ನಿರ್ಮಿಸಿದರು ಎಂದು ಇತಿಹಾಸ ಹೇಳುತ್ತದೆ. ಈ ದೇವಾಲಯ ನೋಡಲು ಬಲು ಆಕರ್ಷಣಿಯವಾಗಿದೆ. ಹಳೆಯ ಚಾಲುಕ್ಯರ ಶೈಲಿಯಲ್ಲಿ ನಿರ್ಮಾಣಗೊಂಡ ಕೆಂಪು ಕಲ್ಲಿನ ಸುಂದರ ದೇವಾಲಯ ಇದಾಗಿದೆ. ಕಲ್ಲಿನ ಕೆತ್ತನೆಯೇ ಇಡೀ ದೇಗುಲದ ವಿಶೇಷ ಆಕರ್ಷಣೆ.
ರೆ. ಎಲ್ಲವೂ 12ನೇ ಶತಮಾನಕ್ಕೆ ಸೇರಿದವು ಎನ್ನುವ ದಾಖಲೆಗಳೂ ಇವೆ ಎನ್ನುತ್ತಾರೆ ಸ್ಥಳೀಯರು. ಭಾರತೀಯ ಪುರಾತಣ್ತೀ ಇಲಾಖೆಯು, ಈ ದೇಗುಲವನ್ನು ಸಂರಕ್ಷಿತ ಸ್ಮಾರಕ ಎಂದು ಘೋಷಿಸಿದೆ. ಚಾಲುಕ್ಯರು ಈ ದೇವಾಲಯವನ್ನು ಬಾದಾಮಿ, ಐಹೊಳೆ, ಪಟ್ಟದಕಲ್ಲು ದೇವಾಲಯಗಳ ಮಾದರಿಯಲ್ಲೇ ನಿರ್ಮಿಸಲಾಗಿದೆ. ದೇವಾಲಯವು ಪೂರ್ವಾಭಿಮುಖವಾಗಿದ್ದು ಇಲ್ಲಿ ಎರಡು ಲಿಂಗಗಳು ಇವೆ. ಒಟ್ಟು ಐದು ಗರ್ಭಗುಡಿಗಳಿವೆ. ಮಧ್ಯದ ಗುಡಿಯಲ್ಲಿ ಚತುರ್ಮುಖ ಲಿಂಗವಿದೆ. ಹೀಗಾಗಿ, ಮಧ್ಯದ ಗರ್ಭಗೃಹಕ್ಕೆ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಬಾಗಿಲುಗಳನ್ನು ಇಟ್ಟಿದ್ದಾರೆ.
Related Articles
Advertisement
ದೇಗುಲದ ಎತ್ತರ 20 ಅಡಿ, ಉದ್ದ 55 ಅಡಿ ಹಾಗೂ ಅಗಲ 40 ಅಡಿ ಇದೆ. ಇಡೀ ದೇವಾಲಯ ವಿಶೇಷವಾಗಿ ಕೆಂಪು ಹಾಗೂ ಕಪ್ಪು ಕಲ್ಲುಗಳಿಂದ ನಿರ್ಮಾಣವಾಗಿದೆ. ಯುಗಾದಿಯಿಂದ ಈ ದೇವಸ್ಥಾನದಲ್ಲಿ ವೈಭವದ ಪೂಜೆ ನಡೆಯುತ್ತದೆ. ಶಿವರಾತ್ರಿಯಂದು ಮುಂಜಾನೆ ಸೂರ್ಯನ ರಶ್ಮಿಗಳು ಶಿವಲಿಂಗವನ್ನು ಸ್ಪರ್ಶಿಸುವುದನ್ನು ನೋಡಲು ಅಸಂಖ್ಯಾತ ಭಕ್ತರ ದಂಡೇ ಇಲ್ಲಿ ನೆರೆದಿರುತ್ತದೆ. ಆ ಸಮಯದಲ್ಲಿ ಚಂದ್ರಮೌಳೇಶ್ವರನ ದರ್ಶನ ಪಡೆದರೆ ಇಷ್ಟಾರ್ಥಗಳು ಪೂರೈಸುತ್ತವೆ ಎಂಬ ನಂಬಿಕೆ ಚಾಲ್ತಿಯಲ್ಲಿರುವುದರಿಂದ ಸುತ್ತಮುತ್ತಲ ಗ್ರಾಮಗಳಿಂದ ಭಕ್ತರು ಆಗಮಿಸುತ್ತಾರೆ. ಹತ್ತಿರದಲ್ಲೇ ಉಣಕಲ್ ಕೆರೆ ಇದ್ದು, ಆಕರ್ಷಣೀಯವಾಗಿದೆ.
ರೂಟ್ ಮ್ಯಾಪ್-ಮಂಗಳೂರಿನಿಂದ ಹುಬ್ಬಳ್ಳಿಗೆ ಕಿ.ಮೀ. ದೂರ.
– ಹುಬಳ್ಳಿಯಿಂದ ದೇವಸ್ಥಾನಕ್ಕೆ 4 ಕಿ.ಮೀ. ದೂರವಿದೆ.
– ಬಸ್ ನಿಲಾದ ಹತ್ತಿರದಲ್ಲೇ ಇರುವುದರಿಂದ ಬಸ್, ಆಟೋ ಸೌಲಭ್ಯಗಳಿವೆ.
– ಹತ್ತಿರದಲ್ಲೇ ಉಣಕಲ್ ಕೆರೆಯೂ ಇದೆ.
– ಹುಬ್ಬಳ್ಳಿ ಹತ್ತಿರವಿರುವುದರಿಂದ ಊಟ, ವಸತಿಗೆ ಸಮಸ್ಯೆಯಿಲ್ಲ.
– ದೇವಸ್ಥಾನ ಬೆಳಗ್ಗೆ 6 ರಿಂದ ರಾತ್ರಿ 8 ಗಂಟೆಯವರೆಗೆ ತೆರೆದಿರುತ್ತದೆ. - ಪ್ರಮೋದ್ ಎಚ್.