Advertisement

ಚಂಡೀಗಢ: ವಿಡಿಯೋ ಲೀಕ್‌ ಕೇಸ್‌: ಯೋಧನ ಬಂಧನ

09:24 PM Sep 25, 2022 | Team Udayavani |

ಚಂಡೀಗಢ: ಪಂಜಾಬ್‌ನ ಚಂಡೀಗಢ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೊಬ್ಬರ ಖಾಸಗಿ ವಿಡಿಯೋ ಲೀಕ್‌ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಪಂಜಾಬ್‌ ಪೊಲೀಸರು ಶನಿವಾರ ನಾಲ್ಕನೇ ಆರೋಪಿಯನ್ನು ಬಂಧಿಸಿದ್ದಾರೆ.

Advertisement

ಅರುಣಾಚಲದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಭಾರತೀಯ ಸೇನೆಯ ಯೋಧ ಸಂಜೀವ್‌ ಸಿಂಗ್‌ ಬಂಧಿತ ಆರೋಪಿ.

ಇವರು ಬಂಧಿತ ಯುವತಿಯ ವಿಡಿಯೋ ಇಟ್ಟುಕೊಂಡು, “ಬೇರೆ ವಿದ್ಯಾರ್ಥಿನಿಯರ ವಿಡಿಯೋಗಳನ್ನು ಕಳಿಸದಿದ್ದರೆ ನಿನ್ನ ವಿಡಿಯೋ ವೈರಲ್‌ ಮಾಡುತ್ತೇನೆ’ ಎಂದು ಆಕೆಗೆ ಬ್ಲಾಕ್‌ವೆುàಲ್‌ ಮಾಡುತ್ತಿದ್ದರು ಎಂದು ತಿಳಿಸಲಾಗಿದೆ.

ಸಂಜೀವ್‌ ಬಂಧನಕ್ಕೆ ಅರುಣಾಚಲ ಪೊಲೀಸರು ಮತ್ತು ಭಾರತೀಯ ಸೇನೆಯ ಸಹಾಯ ಪಡೆದಿದ್ದಾಗಿ ಪಂಜಾಬ್‌ ಪೊಲೀಸರು ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next