Advertisement

ಹೊಸವರ್ಷ ಸಂಭ್ರಮಕ್ಕೆ ಬಂತು ‘ಡ್ಯಾಶ್‌’ ಸಾಂಗ್‌!

01:14 PM Dec 29, 2022 | Team Udayavani |

ಚಂದನ್‌ ಶೆಟ್ಟಿ ನಾಯಕನಾಗಿ ಅಭಿನಯಿಸಿರುವ ಮತ್ತು ಸಂಗೀತ ಸಂಯೋಜಿಸಿರುವ “ಸೂತ್ರಧಾರಿ’ ಸಿನಿಮಾದ ಮೊದಲ ಹಾಡು ಇತ್ತೀಚೆಗೆ ಬಿಡುಗಡೆಯಾಯಿತು. ರ್ಯಾಪ್‌ ಶೈಲಿಯಲ್ಲಿ ಮೂಡಿಬಂದಿರುವ “ಡ್ಯಾಶ್‌’ ಎಂಬ ಈ ಹಾಡಿನಲ್ಲಿ ಚಂದನ್‌ ಶೆಟ್ಟಿ ಜೊತೆಗೆ ನಟಿ ಸಂಜನಾ ಆನಂದ್‌ ಜೋಡಿಯಾಗಿ ಹೆಜ್ಜೆ ಹಾಕಿದ್ದಾರೆ.

Advertisement

ಅರೇಬಿಕ್‌ ಥೀಮ್‌ನಲ್ಲಿ ಮೂಡಿಬಂದಿರುವ ಈ ಹಾಡನ್ನು ಹೊಸವರ್ಷದ ಆಚರಣೆಗೆ ಮೆರುಗು ನೀಡುವಂತೆ ಮಾಡಲಾಗಿದೆ. ಕೇವಲ 4 ದಿನದಲ್ಲಿ, ಇಡೀ ಹಾಡಿನ ಚಿತ್ರೀಕರಣ ಮಾಡಿ ಹಾಡನ್ನು ಬಿಡುಗಡೆ ಮಾಡಲಾಗಿದೆ. ಹೊಸವರ್ಷದ ಪಾರ್ಟಿ ಮೂಡ್‌ ನ‌ಲ್ಲಿ ಈ ಸಾಂಗ್‌ ದೊಡ್ಡದಾಗಿ ಸೌಂಡ್‌ ಮಾಡುತ್ತದೆ ಎನ್ನುವುದು ಚಿತ್ರತಂಡದ ವಿಶ್ವಾಸದ ಮಾತು.

ಈಗಲ್‌ “ಮೀಡಿಯಾ ಕ್ರಿಯೇಷನ್ಸ್‌’ ಬ್ಯಾನರಿನಲ್ಲಿ ನವರಸನ್‌ ನಿರ್ಮಿಸುತ್ತಿರುವ “ಸೂತ್ರಧಾರಿ’ ಸಿನಿಮಾಕ್ಕೆ ಕಿರಣ್‌ ನಿರ್ದೇಶನವಿದೆ.

Advertisement

Udayavani is now on Telegram. Click here to join our channel and stay updated with the latest news.

Next