Advertisement
ಹದಿನಾಲ್ಕು ವರ್ಷಗಳ ಹಿಂದೆ ಮುಂಬೈಯಲ್ಲಿ ಚಂದಮಾಮದ 60ನೇ (61ವರ್ಷ) ವರ್ಷದ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಿದ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಕೂಡ, ನಾನು ಚಿಕ್ಕವನಿದ್ದಾಗ ಪಾಶ್ಚಾತ್ಯ ಕಾಮಿಕ್ಸ್‌ನೆಡೆಗೆ ಮೋಹಿತನಾಗಿದ್ದೆ. ಆದರೆ ಅಂದು ಪೋಷಕರು ನಮಗೆ ಚಂದಮಾಮದ ರುಚಿ ಹತ್ತಿಸಿದ ಮೇಲೆ ಬಾಲ್ಯದಲ್ಲಿ ಅದೇ ನಮ್ಮ ಸಂಗಾತಿಯಾಗಿತ್ತು. ಆದರೆ ಈಗ ನನಗೆ ಸಮಯದ ಒತ್ತಡ ಇರುವುದರಿಂದ ಓದಲಾಗುತ್ತಿಲ್ಲ, ಆದರೂ ಚಂದ ಮಾಮವನ್ನ ನನ್ನ ಮೊಮ್ಮಕ್ಕಳಿಗೆ ಪರಿಚಯಿಸುತ್ತೇನೆ ಎಂದು ಹೆಮ್ಮೆಯಿಂದ ಹೇಳಿದ್ದರು. ಹೌದು ಈಗ ಚಂದಮಾಮನ ನೆನಪು-ನೇವರಿಕೆ ನಮ್ಮಿಂದ ನಿಧಾನಕ್ಕೆ ತೆರೆ-ಮರೆಗೆ ಸರಿಯತೊಡಗಿದೆ.
Advertisement
ಹೀಗೆ ಚಂದಮಾಮ ತನ್ನ 60 ಸಂವತ್ಸರಗಳ ಯಶೋಗಾಥೆಯಲ್ಲಿ ಏರಿದ ಎತ್ತರ ಮಾತ್ರ ಆಗಾಧ ವಾದದ್ದು, 2003ರಲ್ಲಿ ಸಿಂಗಾಪುರದಲ್ಲಿ ಇಂಗ್ಲಿಷ್-ತಮಿಳ್ (ಸಿಂಗಾಪುರದಲ್ಲಿ ಅಂಬುಲಿಮಾಮಾ ಎಂಬ ಹೆಸರಿನಲ್ಲಿ ಪ್ರಕಟಣೆ ಕಾಣುತ್ತಿದ್ದು, ಇದನ್ನು ಅಲ್ಲಿನ ತಮಿಳು ಟಿಚರ್ಸ್ ಯೂನಿಯನ್ ಪುಸ್ತಕ ಹೊರತರುವ ಜವಾಬ್ದಾರಿ ವಹಿಸಿಕೊಂಡಿದೆ). ಭಾಷೆಯಲ್ಲಿ, ಉತ್ತರ ಅಮೆರಿಕದಲ್ಲಿ ಇಂಗ್ಲಿಷ್, ತಮಿಳು, ತೆಲುಗು, ಹಿಂದಿ, ಗುಜರಾತಿ ಭಾಷೆಗಳಲ್ಲಿ ಪ್ರಕಟವಾಗುತ್ತಿದೆ.
ಸುಮಾರು 3 ಲಕ್ಷಕ್ಕೂ ಅಧಿಕ ಓದುಗರನ್ನು ಪಡೆದಿರುವ ಚಂದಮಾಮ, ಅಂದಾಜು ಏಳು ಲಕ್ಷ ಪ್ರಸಾರ ಸಂಖ್ಯೆ ಯನ್ನು ಹೊಂದಿದೆ. ಅಲ್ಲದೇ ಚಂದಮಾಮ ದೀರ್ಘಕಾಲ ಪ್ರಕಟಣೆ ಕಂಡ ಮಕ್ಕಳ ಮ್ಯಾಗಜೀನ್ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದಲ್ಲದೆ, 2002ರಲ್ಲಿ ಲಿಮ್ಕಾ ಬುಕ್ ಆಫ್ ರೆಕಾರ್ಡ್‌ನಲ್ಲೂ ದಾಖಲೆ ಬರೆದಿದೆ. 2007ರಲ್ಲಿ ಮುಂಬಯಿ ಮೂಲದ ಸಾಫ್ಟ್ ವೇರ್ ಸರ್ವೀಸ್ ಪ್ರೊವೈಡರ್ ಕಂಪನಿಯಾದ ಜಿಯೋಡೇಸಿಕ್ ಚಂದಮಾಮವನ್ನು ಖರೀದಿಯ ಒಪ್ಪಂದ ಮಾಡಿಕೊಂಡಿತ್ತು. ಅಲ್ಲದೇ 60 ವರ್ಷಗಳ ಮ್ಯಾಗಜೀನ್ ನ ಕಥೆಗಳಿಗೆ ಡಿಜಿಟಲ್ ರೂಪ ಕೊಡುವ ಇರಾದೆ ಹೊಂದಿತ್ತು. ಆದರೆ ಕಂಪನಿ ಸಾಲ ತೀರಿಸದ ಪರಿಣಾಮ, ಕಂಪನಿಯನ್ನು ಮುಚ್ಚುವಂತೆ ಬಾಂಬೆ ಹೈಕೋರ್ಟ್ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ 2013ರ ಮಾರ್ಚ್ ನಿಂದ ಚಂದಮಾಮ ಪ್ರಕಟವಾಗುತ್ತಿಲ್ಲ. ಆದರೂ ನೈತಿಕ ಮೌಲ್ಯವನ್ನು ತಿಳಿಸಿಕೊಡುವ ಹಾಗೂ ಕಥೆಯನ್ನು ಅಜ್ಜ ಮೊಮ್ಮಕ್ಕಳಿಗೆ ಹೇಳುವ ಶೈಲಿಯಂತೂ ಚಂದಮಾಮ ಓದುಗ ಪ್ರಿಯರು ಮರೆಯಲು ಸಾಧ್ಯವೇ ಇಲ್ಲ…
*ನಾಗೇಂದ್ರ ತ್ರಾಸಿ